ಮೂಲ್ಕಿ: ನಗರದ ಸಂಘ ಪರಿವಾರದ ಪ್ರಮುಖ, ಬಪ್ಪನಾಡು ನಿವಾಸಿ ಶ್ರೀನಿವಾಸ ಅವರ ಮೇಲೆ ಕಾರು ಚಲಾಯಿಸಿ ಕೊಲೆ ಯತ್ನ ನಡೆಸಿರುವ ಆರೋಪದಡಿ ಮೂಲ್ಕಿ ವಿಜಯ ರೈತರ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹಾಗೂ ಉದ್ಯಮಿ ರಂಗನಾಥ ಶೆಟ್ಟಿ ವಿರುದ್ಧ ಮೂಲ್ಕಿ ಠಾಣೆಯಲ್ಲಿ ಕೊಲೆ ಯತ್ನದ ದೂರು ದಾಖಲಾಗಿದೆ.
Advertisement
ಶ್ರೀನಿವಾಸ ಅವರು ಬುಧವಾರ ಬೆಳಗ್ಗೆ ವಿಜಯ ಕಾಲೇಜು ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಎದುರಿನಿಂದ ತನ್ನ ಕಾರಿನಲ್ಲಿ ಬಂದ ರಂಗನಾಥ ಶೆಟ್ಟಿ ಅವರು ಕೊಲೆಗೆತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಪ್ಪಿಸಿಕೊಂಡ ಶ್ರೀನಿವಾಸರನ್ನು ತುಳುವಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಲೆ ಬೆದರಿಕೆ ಒಡ್ಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.ಮೂಲ್ಕಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಸ್ಸುಗಳಿಗೆ ಕಲ್ಲು: ಮೂವರ ಬಂಧನ; ಪರಿಸ್ಥಿತಿ ಶಾಂತ
ವಿಟ್ಲ: ಶಾಂತಿ ಕದಡುವ ನಿಟ್ಟಿನಲ್ಲಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕುಳ ಕಾರ್ಯಾಡಿಯ ಪುನೀತ್ (20), ಮಂಗಳ ಪದವಿನ ಗುರು ಪ್ರಸಾದ್ (20) ಹಾಗೂ ಕೇಪು ಮೈರ ನಿವಾಸಿ ಕಿರಣ್‌ರಾಜ್ (24) ಬಂಧಿತರು. ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಹಾಗೂ ಪುತ್ತೂರು ತಾಲೂಕಿನಲ್ಲಿ ಒಟ್ಟು 9 ಪ್ರಕರಣಗಳು ದಾಖಲಾಗಿದ್ದು, ಇವರು ವಿಟ್ಲದ 4 ಪ್ರಕರಣ ಹಾಗೂ ಪುತ್ತೂರಿನ 1 ಪ್ರಕರಣದ ಆರೋಪಿಗಳಾಗಿದ್ದಾರೆ ಎನ್ನಲಾಗಿದೆ. ಇವರ ವಿಚಾರಣೆ ಮುಂದುವರಿಸಲಾಗಿದ್ದು, ಇನ್ನಷ್ಟು ಮಂದಿಯನ್ನು ಬಂಧಿಸುವ ವಿಶ್ವಾಸ ಪೊಲೀಸರಲ್ಲಿದೆ.
Related Articles
ಕೇರಳದ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ದನ ಸಾಗಾಟವನ್ನು ತಡೆದು ಹಲ್ಲೆ ನಡೆಸಿ, ದರೋಡೆ ಮಾಡಿದ್ದಾರೆಂದು ಆರೋಪಿಸಿ ಅಕ್ಷಯ್ ಮತ್ತು ಆತನ ಸಂಗಡಿಗರ ಮೇಲೆ ಪ್ರಕರಣ ಬದಿಯಡ್ಕ ಠಾಣೆಯಲ್ಲಿ ದಾಖಲಾಗಿತ್ತು.ಇದರಿಂದ ಆಕ್ರೋಶಗೊಂಡ ಗುಂಪೊಂದು ವಿಟ್ಲ ಬಂದ್ ನಡೆಸುವ ನೆಪದಲ್ಲಿ ಶಾಂತಿ ಭಂಗ ಮಾಡಲು ಸಂಚು ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಬಂಟ್ವಾಳ: ಸುಳಿವು ಲಭ್ಯಬಂಟ್ವಾಳ: ಪಾಣೆ ಮಂಗಳೂರು, ಕುದ್ರೆಬೆಟ್ಟು, ಶಂಭೂರು, ಬಿ. ಕಸ್ಬಾದಲ್ಲಿ ಜೂ. 24, 25ರಂದು ಬಸ್ಸಿಗೆ ಕಲ್ಲೆಸೆದ ಪ್ರಕರಣದ ಆರೋಪಿಗಳ ಸುಳಿವು ಲಭ್ಯವಾಗಿದ್ದು, ತನಿಖೆ ಮುಂದುವರಿದಿದೆ ಎಂದು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ತಿಳಿಸಿದ್ದಾರೆ. ಶಂಭೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಲ್ಲೆಸೆದ ಒಂದು ಪ್ರಕರಣ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ , ಒಂದು ಸರಕಾರಿ ಮತ್ತು ಎರಡು ಖಾಸಗಿ ಬಸ್ಸಿಗೆ ಕಲ್ಲೆಸೆದ ಮೂರು ಪ್ರಕರಣಗಳು ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿವೆ.