Advertisement

ಮಣಿಪಾಲ: ಡ್ರಗ್‌ ಪೆಡ್ಲರ್‌ ಬಂಧನ; ಸೆನ್‌ ಪೊಲೀಸರ ಕಾರ್ಯಾಚರಣೆ

11:28 PM Oct 16, 2022 | Team Udayavani |

ಉಡುಪಿ: ಹೆರ್ಗ ಬಳಿಯ ಶೇಷಾದ್ರಿ ನಗರ ರಸ್ತೆಯ ಸಾರ್ವಜನಿಕ ರಸ್ತೆಯಲ್ಲಿ ನಿಷೇದಿತ ವಸ್ತು ಎಂಡಿಎಂಎ ಪೌಡರ್‌ ಮಾರಾಟ ಮಾಡುತ್ತಿದ್ದ ಪೆಡ್ಲರ್‌ ಕಡಿಯಾಳಿಯ ರಾಘವೇಂದ್ರ ದೇವಾಡಿಗ (41) ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಆರೋಪಿಯಿಂದ 4.61 ಗ್ರಾಂ ತೂಕದ ಎಂಡಿಎಂಎ ಪೌಡರ್‌, ಸ್ಕೂಟರ್‌, ಮೊಬೈಲ್‌ ಫೋನ್‌, ವೇಯಿಂಗ್‌ ಮೆಷಿನ್‌, ಬ್ಯಾಗ್‌, ಪೌಡರ್‌ ಪ್ಯಾಕ್‌ ಮಾಡಲು ಬಳಸುವ ಸಣ್ಣ ಪ್ಲಾಸ್ಟಿಕ್‌ ಕವರ್‌ಗಳು, 2,300 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೌಡರನ್ನು ಮಾರಾಟ ಮಾಡಲು ಆರೋಪಿ ಇಮ್ರಾನ್‌ ನೀಡಿರುವುದನ್ನು ರಾಘವೇಂದ್ರ ಒಪ್ಪಿಕೊಂಡಿದ್ದಾನೆ.

ವಶಕ್ಕೆ ತೆಗೆದುಕೊಂಡ ಎಂಡಿಎಂಎ ಪೌಡರ್‌ ಮೌಲ್ಯ 20,745 ರೂ. ಹಾಗೂ ವಶಕ್ಕೆ ತೆಗೆದುಕೊಂಡ ಎಲ್ಲ ವಸ್ತುಗಳ ಮೌಲ್ಯ 59,545 ರೂ. ಆಗಿದೆ. ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next