ಉಪ್ಪಳ: ಭಾರೀ ಬಡ್ಡಿಯ ಭರವಸೆ ನೀಡಿ ಠೇವಣಿದಾರರಿಂದ ಸಂಗ್ರಹಿಸಿದ ಕೋಟ್ಯಂತರ ರೂಪಾಯಿ ಲಪಟಾಯಿಸಿ ತಲೆಮರೆಸಿಕೊಂಡ ಬದಿಯಡ್ಕದ ರೋಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ನೂಸರ್ ಕಂಪೆನಿ ಲಿಮಿಟೆಡ್‌ನ ಉಪ್ಪಳ ಶಾಖೆಯಲ್ಲೂ ಭಾರೀ ವಂಚನೆ ನಡೆದು ಶಾಖೆಯನ್ನು ಮುಚ್ಚಲಾಗಿದೆ. ಈ ಬಗ್ಗೆ ಉಪ್ಪಳ ಶಾಖೆಯ 8 ಮಂದಿ ಸಿಬ್ಬಂದಿಗಳು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಒಂದೂವರೆ ವರ್ಷದ ಹಿಂದೆ ಉಪ್ಪಳದಲ್ಲಿ ಶಾಖೆಯನ್ನು ತೆರೆಯಲಾಗಿತ್ತು. ಸುಮಾರು 20 ಲಕ್ಷಕೂ ಅಧಿಕ ಹಣವನ್ನು ಜನಸಾಮಾನ್ಯರಿಂದ ಸಂಗ್ರಹಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Advertisement
10.47 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆಕಾಸರಗೋಡು: ಕಲ್ಲಿಕೋಟೆ ಕರಿಪ್ಪೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಕಸ್ಟಂಸ್ ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಿಸಿದ 10.47 ಲಕ್ಷ ರೂ. ಮೌಲ್ಯದ 170 ಗ್ರಾಂ ಚಿನ್ನವನ್ನು ವಶಪಡಿದೆ. ಮಸ್ಕತ್‌ನಿಂದ ಬಂದ ಕಾಸರಗೋಡು ಇಸ್ಮಾಯಿಲ್ ಪುತ್ತೂರು ಅಬ್ದುಲ್ಲ(38) ನಿಂದ ಚಿನ್ನವನ್ನು ವಶಪಡಿಸಲಾಗಿದೆ.
ಕಾಸರಗೋಡು: ಕಾಸರಗೋಡು ಕಡಪ್ಪುರದಲ್ಲಿ ಸ್ನಾನಕ್ಕಿಳಿದ ಇಪ್ಪತ್ತರಷ್ಟು ಮಕ್ಕಳು ಭಾರೀ ಅಲೆಗೆ ಸಿಲುಕಿ ಆಳ ಸಮುದ್ರಕ್ಕೆ ಒಯ್ಯಲ್ಪಟ್ಟಿದ್ದು, ವಿಷಯ ತಿಳಿದು ಮೀನು ಕಾರ್ಮಿಕರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮಕ್ಕಳನ್ನು ಅಪಾಯದಿಂದ ರಕ್ಷಿಸಲಾಗಿದೆ. ಸೋಮವಾರ ಬೆಳಗ್ಗೆ ಕಾಸರಗೋಡು ಕಡಪ್ಪುರದ ಬಳಿ ಅಯ್ಯಪ್ಪ ದೀಪೋತ್ಸವಕ್ಕೆಂದು ಬಂದ 12, 13 ಮತ್ತು 14 ರ ಹರೆಯದ ಸುಮಾರು 20 ರಷ್ಟು ಮಕ್ಕಳು ಸಮುದ್ರ ಕಿನಾರೆಗೆ ಬಂದು ಮೀನು ಕಾರ್ಮಿಕರು ಬಳಸುವ ಕ್ಯಾನ್‌ಗಳನ್ನು ದೇಹಕ್ಕೆ ಕಟ್ಟಿಕೊಂಡು ಸಮುದ್ರಕ್ಕಿಳಿದಿದ್ದರು. ಆದರೆ ಅದೇ ಹೊತ್ತಿನಲ್ಲಿ ಅಪ್ಪಳಿಸಿದ ಅಲೆ ಮಕ್ಕಳನ್ನು ಎಳೆದೊಯ್ದಿದೆ. ಮಕ್ಕಳು ಸಮುದ್ರದಲ್ಲಿ ಮುಳುಗುತ್ತಿರುವುದನ್ನು ಕಂಡ ಮೀನು ಕಾರ್ಮಿಕರಾದ ಬಾಬು, ಪುಷ್ಪಾಕರನ್, ಚಿತ್ರಕಾರನ್, ಹರೀಶ್ ತತ್‌ಕ್ಷಣ ಸಮುದ್ರಕ್ಕೆ ಹಾರಿ ಹರಸಾಹಸದಿಂದ ಮಕ್ಕಳನ್ನು ದಡಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು. ಇದರಿಂದ ಸಂಭವನೀಯ ದುರಂತ ತಪ್ಪಿತು. ವಿಷಯ ತಿಳಿದು ಪೊಲೀಸ್ ಹಾಗು ಅಗ್ನಿಶಾಮಕ ದಳ ಹಾಗು ಸ್ಥಳೀಯರು ಸಮುದ್ರ ಕಿನಾರೆಗೆ ತಲುಪಿದ್ದರು.