Advertisement

ಉಡುಪಿ: ಮಹಿಳೆ ಮೇಲೆ ಗ್ರಾಮ ಪಂಚಾಯತ್‌ ಸದಸ್ಯನಿಂದ ಹಲ್ಲೆ

12:05 AM Sep 06, 2022 | Team Udayavani |

ಉಡುಪಿ: ಇಲ್ಲಿನ ಆತ್ರಾಡಿ ಗ್ರಾಮ ಪಂಚಾಯತ್‌ ಸದಸ್ಯನೋರ್ವ ಖಾಸಗಿ ವ್ಯಕ್ತಿಯವರ ಜಾಗದಲ್ಲಿ ರಸ್ತೆ ನಿರ್ಮಿಸಲು ತಡೆಯೊಡ್ಡಿದ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸೆ. 5ರ ಸಂಜೆ ನಡೆದಿದೆ.

Advertisement

ಆತ್ರಾಡಿ ಪರೀಕದ ಪಡುಮನೆ ನಾಗಬನ ನಿವಾಸಿ ಆರತಿ (45) ಹಲ್ಲೆಗೊಳಗಾದ ಮಹಿಳೆ. ಇವರ ಪಟ್ಟಾ ಜಾಗದಲ್ಲಿ ಆತ್ರಾಡಿ ಗ್ರಾಮ ಪಂಚಾಯತ್‌ ಮನೆಯವರ ವಿರೋಧದ ನಡುವೆ ಕಾಂಕ್ರೀಟ್‌ ರಸ್ತೆ ನಿರ್ಮಿಸಲು ತಯಾರು ನಡೆಸಿದ್ದರು. ಮನೆಯವರ ಆಕ್ಷೇಪ ಇದ್ದರೂ ರಸ್ತೆ ಕಾಮಗಾರಿಗೆ ಪ್ರಾರಂಭಿಸಿದ್ದನ್ನು ಆರತಿ ಪ್ರಶ್ನಿಸಿದ್ದರು.

ಸ್ಥಳದಲ್ಲಿದ್ದ ಪಂಚಾಯತ್‌ ಸದಸ್ಯ ರತ್ನಾಕರ್‌ ಶೆಟ್ಟಿ ಈಶ್ವರನಗರ ಮತ್ತು ಮನೆ ಪಕ್ಕದ ಚಂದ್ರಹಾಸ ಶೆಟ್ಟಿ, ಸಂತೋಷ ಪೂಜಾರಿ ಆರತಿಯವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಹಿರಿಯಡಕ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಮಾತ್ರವಲ್ಲದೆ ಇವರ ನಡುವೆ ನಡೆದ ವಾಗ್ವಾದದಲ್ಲಿ ರತ್ನಾಕರ್‌ ಶೆಟ್ಟಿ ಅವರು ಆರತಿಯವರನ್ನು ತಳ್ಳಿದ ಪರಿಣಾಮ ತಲೆಗೆ ಗಂಭೀರ ಗಾಯವಾಗಿತ್ತು. ತಡೆಯಲು ಬಂದ ಆರತಿ ಅವರ ಮಗಳ ಮೇಲೆ ಕೂಡ ಹಲ್ಲೆ ನಡೆ‌ಸಿದ್ದಾರೆ.

ಆರತಿ ಅವರು ಉಡುಪಿ ಜಿಲ್ಲಾ ಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೊದಲೇ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ, ಪಂಚಾಯತ್‌ ಹಾಗೂ ಜಿಲ್ಲಾ ಧಿಕಾರಿಗಳಿಗೆ ಅವರು ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next