Advertisement

ಶೇಡಿಮನೆ: ಜೀಪ್‌ಗೆ ಬೈಕ್‌ ಢಿಕ್ಕಿ: ಬೈಕ್ ಸವಾರನಿಗೆ ಗಾಯ

05:34 PM May 07, 2022 | Team Udayavani |

ಸಿದ್ದಾಪುರ: ಶೇಡಿಮನೆ ಗ್ರಾಮದ ಅಶ್ವಿ‌ನಿ ಹೇರ್‌ ಆಯಿಲ್‌ ಪ್ಯಾಕ್ಟರಿ ಹತ್ತಿರ ಬೈಕ್‌ ಸವಾರ ಅತೀ ವೇಗವಾಗಿ ಬೈಕ್‌ ಚಲಾಯಿಸಿಕೊಂಡು ಬಂದು ಜೀಪ್‌ಗೆ ಢಿಕ್ಕಿ ಹೊಡೆಸಿದ್ದಾನೆ ಎಂದು ಜೀಪ್‌ ಮಾಲಕ ಶೇಡಿಮನೆ ಗ್ರಾಮದ ಬೂರದಜೆಡ್ಡು ಸಾಜನ್‌ ಪಿ. ಜೇಮ್ಸ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಢಿಕ್ಕಿಯ ಪರಿಣಾಮ ಬೈಕ್‌ ಸವಾರನಿಗೆ ಗಾಯವಾಗಿದ್ದು, ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಎರಡು ವಾಹನಗಳು ಜಖಂಗೊಂಡಿವೆ. ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಪ್ರಮೋದ್ ಮಧ್ವರಾಜ್

Advertisement

Udayavani is now on Telegram. Click here to join our channel and stay updated with the latest news.

Next