ಬೆಂಗಳೂರು: ಪ್ರೇಮಿಯೊಬ್ಬ 16 ಸಲ ಚಾಕುವಿನಿಂದ ಚುಚ್ಚಿ ಪ್ರೇಯಸಿ ಹತ್ಯೆಮಾಡಿದ ಪ್ರಕರಣದ ಸಂಬಂಧ ಇನ್ನಷ್ಟು ಕುತೂಹಲಕಾರಿ ಸಂಗತಿ ಹೊರ ಬಿದ್ದಿದ್ದು, ಕೊಲೆ ಮಾಡಲೆಂದೇ ಆರೋಪಿಯು 2 ಚಾಕು ಖರೀದಿಸಿರುವ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ.
ಪ್ರೇಯಸಿಯ ಕೊಲೆ ಮಾಡಲೆಂದೇ ಆರೋಪಿ ದಿನಕರ್ 2 ಚಾಕುಗಳನ್ನು ಖರೀದಿ ಸಿದ್ದ. ಕೊಲೆ ಬಗ್ಗೆ ಮಂಗಳವಾರ ಸಂಜೆ 6.30ಕ್ಕೆ ಕಂಟ್ರೋಲ್ ರೂಂಗೆ ಕರೆ ಬಂದಿತ್ತು. ಒಬ್ಬ ಮಹಿಳೆಯನ್ನು ಅಮಾನುಷವಾಗಿ ಚಾಕುವಿನಿಂದ ಇರಿದ ಬಗ್ಗೆ ಮಾಹಿತಿ ಸಿಕ್ಕಿತ್ತು.
ಪೊಲೀಸರು ಬರುವಷ್ಟರಲ್ಲಿ ಮಹಿಳೆಯನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಆಕೆಯನ್ನು ಕೊಲೆ ಮಾಡಿ ತಾನೂ ಇರಿದುಕೊಂಡು ಸಾಯಲು ದಿನಕರ್ ಚಿಂತಿಸಿದ್ದ. ಅಷ್ಟರಲ್ಲಿ ಬೈಕ್ ಸವಾರರೊಬ್ಬರು ಹೆಲ್ಮೆಟ್‌ನಿಂದ ಆರೋಪಿಗೆ ಹೊಡೆದಿದ್ದರಿಂದ ಚಾಕು ಕೈತಪ್ಪಿ ಬಿದ್ದಿತ್ತು.
ನಂತರ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ಯುವತಿ ಲೀಲಾ ಪವಿತ್ರ ಕಳೆದ ಏಪ್ರಿಲ್‌ನಿಂದ ನಗರದ ಖಾಸಗಿ ಕಂಪನಿ ಯಲ್ಲಿ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಆಗಿದ್ದರು. ಆರೋಪಿ ದೊಮ್ಮಲೂರು ದಿನಕರ್ ಮತ್ತೂಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರೂ ವೈಜಾಗ್‌ನಲ್ಲಿ ಎಂಎಸ್ಸಿ ಓದುವಾಗ ಪರಿಚಯವಾಗಿದ್ದರು.
ನಂತರ ಇಬ್ಬರೂ ಪ್ರೀತಿ ಸುತ್ತಿದ್ದರು. ಅಂತರ್ಜಾತಿ ವಿವಾಹಕ್ಕೆ ಮನೆಯ ವರು ಒಪ್ಪದಿದ್ದಕ್ಕೆ ಯುವತಿ ಆತನ ಕರೆ ಸ್ವೀಕರಿಸುತ್ತಿರಲಿಲ್ಲ. ಆತನ ಫೋನ್ ನಂಬರ್ ಬ್ಲಾಕ್ ಮಾಡಿದ್ದಳು. ಅದಕ್ಕಾಗಿ ಮಾತನಾಡಲೆಂದು ಕಂಪನಿ ಬಳಿ ಆರೋಪಿ ಬಂದಿದ್ದ. ಆಕೆಯನ್ನು ಹೊರಗೆ ಕರೆತಂದು ಗೇಟ್ ಬಳಿ ಮಾತನಾಡಿ ಬಳಿಕ ಅಲ್ಲಿಂದ ಪಕ್ಕಕ್ಕೆ ಕರೆದೊಯ್ದು ಚಾಕುವಿನಿಂದ 16 ಬಾರಿ ಚುಚ್ಚಿ ಕೊಲೆ ಮಾಡಿದ್ದ