Advertisement

ಸರಪಾಡಿ: ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

04:49 PM Oct 09, 2022 | Team Udayavani |

ಬಂಟ್ವಾಳ: ಸರಪಾಡಿ ಗ್ರಾಮದ ಎಸ್‌ಇಝಡ್‌ ಜಾಕ್‌ವೆಲ್‌ ಬಳಿ ನೇತ್ರಾವತಿ ನದಿಯಲ್ಲಿ ರವಿವಾರ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ.

Advertisement

ರವಿವಾರ ಬೆಳಗ್ಗೆ ಮೃತದೇಹ ತೇಲುತ್ತಿರುವ ಸ್ಥಿತಿಯಲ್ಲಿ ಕಂಡುಬಂದಿದ್ದು, ಮೃತ ಮಹಿಳೆ ಚೂಡಿದಾರ್‌ ಧರಿಸಿದ್ದಾರೆ. ಆಕೆ ನೀರಿಗೆ ಬಿದ್ದು ಮೂರು ದಿನವಾಗಿರುವ ಸಾಧ್ಯತೆ ಇದ್ದು, ಆಕಸ್ಮಿಕವಾಗಿ ಬಿದ್ದಿದ್ದಾರೋ ಅಥವಾ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎಂಬುದು ತಿಳಿದುಬಂದಿಲ್ಲ.

ಬಂಟ್ವಾಳ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು ಅವರು ನೀಡಿದ ಮಾಹಿತಿಯಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next