Advertisement

ಫೇಸ್‌ಬುಕ್‌ನಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲ ಪೋಸ್ಟ್‌: ಆರೋಪಿ ಬಂಧನ

08:29 PM Mar 01, 2022 | Team Udayavani |

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆಯರ ಬಗ್ಗೆಯೇ ಅಶ್ಲೀಲವಾಗಿ ಪೋಸ್ಟ್‌ ಮಾಡುತ್ತಿದ್ದ ಆರೋಪಿಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಬಾಗಲಗುಂಟೆ ನಿವಾಸಿ ಚಂದ್ರಶೇಖರ (35) ಬಂಧಿತ. ಫೇಸ್‌ಬುಕ್‌ನಲ್ಲಿ ಪರಿಚಯವಾಗುವ ಮಹಿಳೆಯರ ಜತೆ ಚಾಟಿಂಗ್‌ ಆರಂಭಿಸುತ್ತಿದ್ದ ಆರೋಪಿ, ಅವರ ಮೊಬೈಲ್‌ ಪಡೆದುಕೊಳ್ಳುತ್ತಿದ್ದ. ನಂತರ ಅವರೊದಿಗೆ ಆತ್ಮೀಯತೆ ಬೆಳೆಯುತ್ತಿದ್ದಂತೆ ಅಶ್ಲೀಲವಾಗಿ ಮಾತನಾಡುತ್ತಿದ್ದ. ಅದಕ್ಕೆ ಬೇಸರಗೊಂಡ ಮಹಿಳೆಯರು ಆತನನ್ನು ದೂರ ಇಟ್ಟಿದ್ದರು. ಅದರಿಂದ ಆಕ್ರೋಶಗೊಂಡ ಆರೋಪಿ ಮಹಿಳೆಯರ ಮೊಬೈಲ್‌ ನಂಬರ್‌ ಮತ್ತು ಪೋಟೋ ಹಾಕಿ ಕೆಳಗಡೆ ಅಶ್ಲೀಲವಾಗಿ ಬರೆಯುತ್ತಿದ್ದ. ಕಾಲ್‌ ಗರ್ಲ್ಸ್ ಎಂದೆಲ್ಲ ಕೆಟ್ಟದಾಗಿ ಬರೆಯುತ್ತಿದ್ದ. ನಂತರ ಆ ಮಹಿಳೆಯರಿಗೆ ಕರೆ ಮಾಡಿ, ತಾನು ಹೇಳಿದಂತೆ ಕೇಳದಿದ್ದರೆ ಫೋಟೋ ತೆಗೆಯುವುದಿಲ್ಲ ಎಂದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಇತ್ತೀಚೆಗೆ ಆತನ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಚಂದ್ರಶೇಖರ್‌ ಯಾವುದೇ ಕೆಲಸಕ್ಕೆ ಹೋಗದೆ ದುಶ್ಚಟಗಳ ವ್ಯಸನಿಯಾಗಿ ಸುತ್ತಾಡುತ್ತಿದ್ದಾನೆ. ಜತೆಗೆ ಮಹಿಳೆಯರಿಗೆ ಕಿರುಕುಳ ಕೊಡುವುದನ್ನು ಕಾಯಕ ಮಾಡಿಕೊಡಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next