Advertisement

ಮನೆ‌ಬಾಡಿಗೆ ವಿಚಾರದಲ್ಲಿ ಸಹೋದರ ನಡುವೆ ಗಲಾಟೆ:‌ ಇಬ್ಬರ ಸಾವು ಒರ್ವನ ಸ್ಥಿತಿ ಗಂಭೀರ

12:01 PM Apr 07, 2021 | Team Udayavani |

ಚಿಂತಾಮಣಿ: ನಗರದ ಶ್ರೀರಾಮ‌ನಗರ ಬಡಾವಣೆಯ ಸೀನಪ್ಪ ಎಂಬುವರ ಮಕ್ಕಳಾದ ಅಶ್ವಥ್ ನಾರಾಯಣ ಮತ್ತು ಆಂಜಪ್ಪ‌ ಎಂಬುವರ‌ ಮಧ್ಯೆ ಗಲಾಟೆ ನಡೆದು ಆಂಜಪ್ಪ(55 ವ), ವಿಷ್ಣು (14 ವ) ಎಂಬುವರು ಮೃತಪಟ್ಟಿದ್ದು, ಅಶ್ವಥ್ ನಾರಾಯಣ ಗಂಭೀರ ಗಾಯಗೊಂಡು ಚಿಕ್ಕಬಳ್ಳಾಪುರ ಆಸ್ಪತ್ರೆಗೆ ಸೇರಿಸಲಾಗಿದೆ.

Advertisement

ತಮ್ಮ‌ ತಂದೆ ತಾಯಿ ಶ್ರೀರಾಮ ನಗರದ ಕಟ್ಟಡವೊಂದನ್ನು ಬಾಡಿಗೆಗೆ ನೀಡಿದ್ದು ಕಟ್ಟಡದ ಬಾಡಿಗೆಯನ್ನು ತಂದೆ ತಾಯಿಯೊಂದಿಗೆ ಅಶ್ವಥನಾರಾಯಣ ಮಾತ್ರ ಬಾಡಿಗೆ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ವಿಚಾರದಲ್ಲಿ ಅಂಜಪ್ಪ‌ ಮತ್ತು ಅಶ್ವಥನಾರಾಯಣ‌ ಮಧ್ಯೆ ಮಂಗಳವಾರ ರಾತ್ರಿ ಗಲಾಟೆಯಾಗಿದೆ. ಮರಾಕಾಸ್ತ್ರಗಳಿಂದ ಬಡಿದಾಡಿಕೊಂಡಿದ್ದಾರೆ. ವಿಷ್ಟು ಸ್ಥಳದಲ್ಲೇ ಮೃತಪಟ್ಟಿದ್ದು ಕೋಲಾರ ಆಸ್ಪತ್ರೆಯಲ್ಲಿ ಆಂಜಪ್ಪ ಎಂಬಾತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ:ನೀವೂ ತಡರಾತ್ರಿಯವರೆಗೂ ಸ್ಮಾರ್ಟ್ ಪೋನ್‌ ಬಳಸುತ್ತೀರಾ ? : ನಿಮ್ಮಲ್ಲಿ ಈ ಸಮಸ್ಯೆಗಳಿರಬಹುದು

ನಗರದ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ‌ ಮಾಡಿ‌ ಮುಂದಿನ ಕ್ರಮ ‌ಕೈಗೊಂಡಿದ್ದಾರೆ.

ಇನ್ನು ಆಂಜಪ್ಪನ‌ ಮೂವರು ಗಂಡುಮಕ್ಕಳ ಪೈಕಿ ಒಬ್ಬನಾದ ಮೃತ ವಿಷ್ಣುವನ್ನು ಅಶ್ವತ್ಥ ನಾರಾಯಣ ಎಂಬುವರೆ ದತ್ತು ಪಡೆದಿದ್ದರು ಎನ್ನಲಾಗಿದೆ.

Advertisement

ಇದನ್ನೂ ಓದಿ: ಮನವಿ ಮಾಡಿದ್ರೂ ನೌಕರರು ಡೋಂಟ್ ಕೇರ್: ಸಾರಿಗೆ ನೌಕರರಿಗೆ ಶಾಕ್ ನೀಡಲು ಮುಂದಾದ ಸರ್ಕಾರ!

Advertisement

Udayavani is now on Telegram. Click here to join our channel and stay updated with the latest news.

Next