Advertisement
ರಾತ್ರಿ ವೇಳೆ ಪಾದಚಾರಿಗಳನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಗಜೀವನರಾಮನಗರ ಪೊಲೀಸರು ಬಂಧಿದ್ದಾರೆ.
Related Articles
Advertisement
ಪಶ್ಚಿಮ ಬಂಗಾಳದವನ ಬಂಧನ: ಮನೆ ಬಾಗಿಲು ಮೀಟಿ ಚಿನ್ನಾಭರಣ ಕಳವು ಮಾಡಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಸಂಜಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಬ್ರೋತೋ ಮಂಡಲ್(27) ಬಂಧಿತ. ಆರೋಪಿಯಿಂದ 10.5 ಲಕ್ಷ ರೂ. ಮೌಲ್ಯದ 211 ಗ್ರಾಂ ತೂಕದ ಚಿನ್ನಾ ಭರಣ, 75 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ.
ಆರೋಪಿ ಇತ್ತೀಚೆಗೆ ಠಾಣೆ ವ್ಯಾಪ್ತಿ ಪಟೇಲಪ್ಪ ಲೇಔಟ್ ನಿವಾಸಿಯೊಬ್ಬರ ಮನೆಯ ಹಿಂಬಾಗಿಲು ಮೀಟಿ ಚಿನ್ನಾಭರಣ ದೋಚಿದ್ದ. ಘಟನಾ ಸ್ಥಳ ಸಮೀಪದ ಸಿಸಿ ಕ್ಯಾಮೆರಾ ಗಳು ಪರಿಶೀಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಕೆಲ ತಿಂಗಳ ಹಿಂದಷ್ಟೇ ಈತನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದರು. ಜೈಲಿನಿಂದ ಬಿಡುಗಡೆ ಯಾಗಿ ಬಂದು ಮತ್ತೆ ಅದೇ ಕೃತ್ಯ ಮುಂದುವರಿಸಿದ್ದಾನೆ. ಜೆ.ಸಿ.ನಗರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್, ಠಾಣಾಧಿಕಾರಿ ಎ.ಗುರು ಪ್ರಸಾದ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ. ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರ ಬಂಧನ: ಮನೆಯ ಡೋರ್ ಲಾಕ್ ಮುರಿದು ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳ್ಳೆಕಳ್ಳಿ ನಿವಾಸಿ ರವಿಕುಮಾರ್, ಮೈಸೂ ರು ಮೂಲದ ಇಮ್ರಾನ್, ಕೆಂಗೇರಿ ನಿವಾಸಿ ಜಯಕುಮಾರ್ ಬಂಧಿತರು.
ಆರೋಪಿಗಳಿಂದ 6.45 ಲಕ್ಷ ರೂ. ಮೌಲ್ಯದ 129 ಗ್ರಾಂ ಚಿನ್ನಾಭರಣ, 1.08 ರೂ. ನಗದು ಹಾಗೂ 2 ಬೈಕ್ ವಶಕ್ಕೆಪಡೆಯಲಾಗಿದೆ. ಶೆಟ್ಟಿಹಳ್ಳಿ ಯಲ್ಲಿರುವ ಮನೆಯೊಂದರ ಬಾಗಿಲು ಡೋರ್ ಲಾಕ್ ಮುರಿದು ಕೃತ್ಯ ಎಸಗಿ ದ್ದರು ಎಂದು ಪೊಲೀಸರು ಹೇಳಿದರು.
ಪೀಣ್ಯ ಎಸಿಪಿ ಸದಾನಂದ ಎ.ತಿಪ್ಪಣ್ಣ ನವರ್, ಠಾಣಾಧಿಕಾರಿ ಎಂ.ಹನುಮಂತ ರಾಜು ಕಾರ್ಯಚರಣೆ ನೇತೃತ್ವ ವಹಿಸಿದ್ದರು.