ಹಾಸನ: ಸುಪಾರಿ ನೀಡಿ ತನ್ನ ಮಗನನ್ನೇ ಹತ್ಯೆ ಮಾಡಿಸಿದ್ದ ತಂದೆ ಸೇರಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚನ್ನರಾಯಪಟ್ಟಣ ತಾಲೂಕು ಬೇಡಿಗನಹಳ್ಳಿಯ ಪುನೀತ ಕಳೆದ ಆಗಸ್ಟ್ 27 ರಂದು ರಾತ್ರಿ ಕೊಲೆಯಾಗಿದ್ದ ಆತನಿಗೆ ಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಈ ಪ್ರಕರಣದ ಸಂಬಂಧ ಆರೋಪಿಗಳ ಪತ್ತಗೆ ನೇಮಕವಾಗಿದ್ದ ವಿಶೇಷ ಪೊಲೀಸ್ ತಂಡವು ಹತ್ಯೆಯಾದಪುನೀತನ ತಂದೆ ಹೇಮಂತ (48), ಕಿರಿಯ ಸಹೋದರ ಪ್ರಶಾಂತ (23), ಚನ್ನರಾಯಪಟ್ಟಣ ತಾಲೂಕು ಜಿ.ಹೊಸೂರು ಗ್ರಾಮದ ಕಾಂತರಾಜು (52), ಶ್ರವಣಬೆಳಗೊಳದ ಶ್ರೀಕಂಠ ನಗರ ನಿವಾಸಿ ಸುನೀಲ್ (27), ಸಾಣೇನಹಳ್ಳಿಯ ನಂದೀಶ (28) ಹಾಗೂ ಕೆ.ಆರ್.ಪೇಟೆ ತಾಲೂಕು ನಾರಾಯಣಪುರ ಗ್ರಾಮದ ನಾಗರಾಜ (65) ಅವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಶ್ರೀನಿವಾಸಗೌಡ ಮಾಹಿತಿ ನೀಡಿದರು.
ಆರೋಪಿ ತಂದೆ ಹೇಮಂತ, ತನ್ನ ಪತ್ನಿ ಯಶೋದಾ (ಹತ್ಯೆಯಾದ ಪುನೀತ್ ತಾಯಿ) ಅವರಿಂದ ಕಳೆದ ಮೂರು ವರ್ಷಗಳಿಂದ ದೂರವಿದ್ದ. ತನ್ನ ತಾಯಿ ಯಶೋದಾ ಅವರಿಗೆ ಜೀವನಾಂಶ ಕೊಡದಿದ್ದರಿಂದ ಹಾಗೂ ತಂದೆಗೆ ಪರಸ್ತ್ರೀ ಸಂಗವಿದೆ ಎಂದು ಆತನ ಮೊದಲ ಮಗ ಪುನೀತ್ ಆಕ್ರೋಶಗೊಂಡು ಆತ ತನ್ನ ತಾಯಿ ಜೊತೆ ಇದ್ದರೆ, ಹೇಮಂತ ಜಿ.ಹೊಸೂರು ಗ್ರಾಮದಲ್ಲಿ ತನ್ನ 2ನೇ ಮಗ ಪ್ರಶಾಂತನ ಜೊತೆ ಇದ್ದ.
ಬೆಂಗಳೂರಿನಲ್ಲಿದ್ದ ಪುನೀತ ಲಾಕ್‌ಡೌನ್ ನಿಂದಾಗಿ ಗ್ರಾಮಕ್ಕೆ ವಾಪಸ್ಸಾಗಿ ತಾಯಿಯ ಜೊತೆ ಇದ್ದ. ಆತ ಎರಡು ಬಾರಿ ತೆಂಗಿನ ತೋಟದಲ್ಲಿ ಕಾಯಿಗಳನ್ನು ಕಿತ್ತು ಮಾರಾಟ ಮಾಡಿದ್ದ. ಇದರಿಂದ ಸಿಟ್ಟಿಗೆದ್ದಿದ್ದ ತಂದೆ ಹೇಮಂತ್ ತನ್ನ ಮಗ ಪುನೀತನ ಹತ್ಯೆಗೆ 2 ಲಕ್ಷ ರೂ. ಸುಪಾರಿ ನೀಡಿದ್ದ. ಚಿನ್ನಾಭರಣಗಳನ್ನು ಅಡವಿಟ್ಟು 2 ಲಕ್ಷ ರೂ. ತಂದು ಮನೆಯಲ್ಲಿಟ್ಟುಕೊಂಡಿದ್ದ ಅತ ಕಾಂತರಾಜ, ನಂದೀಶ ಮತ್ತು ಸುನೀಲ್‌ಗೆ ಮುಂಗಡವಾಗಿ 5001ರೂ. ನೀಡಿದ್ದ.
ಬಂದೂಕು, ನಗದು ವಶ: ಸುಪಾರಿ ಪಡೆದಿದ್ದ ಈ ಮೂವರು ಕೆ.ಆರ್.ಪೇಟೆಯ ನಾಗರಾಜ ಅವರಿಂದ ಬಂದೂಕು ಖರೀದಿಸಿ ಆ.27ರಂದು ರಾತ್ರಿ ಬೇಡಿಗನಳ್ಳಿ ಮತು ಜಿ. ಹೊಸೂರು ಗ್ರಾಮದ ನಡುವಿನ ಕೆರೆಯ ಏರಿಯ ಮೇಲೆ ಪುನೀತನಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆರೋಪಿಗಳಿಂದ6ಬಂದೂಕು, ಬೈಕ್, ಮಾರುತಿ ವ್ಯಾನ್, 1.80 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಕೊಲೆ ಬಂಧಿಸಲು ಶ್ರಮಿಸಿದ ಇನ್‌ಸ್ಪೆಕ್ಟರ್‌ಗಳಾದ ಬಿ.ಜಿ.ಕುಮಾರ್, ಇ,ವಿ.ವಿನಯ್, ಪಿಎಸ್‌ಐಗಳಾದ ವಿನೋದ್‌ರಾಜ್, ಶ್ರೀನಿವಾಸ್, ಕಾವ್ಯಾ, ಸಿಬ್ಬಂದಿಗಳಾದ ಕುಮಾರಸ್ವಾಮಿ, ಜವರೇಗೌಡ, ಸುರೇಶ್, ಜಯಪ್ರಕಾಶ್ ನಾರಾಯಣ, ಮಹೇಶ್, ಅರುಣ, ನಾಗೇಂದ್ರ, ಅರುಣ, ಬೀರಲಿಂಗ ಶರತ್‌ಕುಮಾರ್ ಮತ್ತಿತರರನ್ನು ಶ್ಲಾಘಿಸಿದ್ದಾರೆ.