ಮಂಗಳೂರು: ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿ, ಸುಳ್ಯದ ಅರಂತೋಡು ನಿವಾಸಿ ನಿತ್ಯಾನಂದ (42) ಅಸೌಖ್ಯದಿಂದ ಸೋಮವಾರ ಸಾವನ್ನಪ್ಪಿದ್ದಾನೆ. ಮೇ 13ರಂದು ಅಕ್ರಮ ಮದ್ಯ ಮಾರಾಟ ಪ್ರಕರಣದಲ್ಲಿ ಜೈಲು ಸೇರಿದ್ದ ಆತನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೆ ವಿಪರೀತ ಮದ್ಯ ಸೇವಿಸುತ್ತಿದ್ದ ಈತ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಜೈಲಿನಲ್ಲಿ ಅಸೌಖ್ಯಕ್ಕೀಡಾಗಿದ್ದು, ಮೇ 14ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅರೆಪ್ರಜ್ಞಾ ವಸ್ಥೆಯಲ್ಲಿದ್ದ ಕಾರಣ ಆತನನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ಬೆಳಗ್ಗೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ಮಧ್ಯಾಹ್ನ ಮಹಜರು ನಡೆಸಿ ಮೃತದೇಹವನ್ನು ಕುಟುಂಬದವರಿಗೆ ಬಿಟ್ಟು ಕೊಡಲಾಯಿತು.
*
Advertisement
ಬೊಳುವಾರು: ದೇವಳದ ಕಾಣಿಕೆ ಡಬ್ಬಿ ಕಳವುಪುತ್ತೂರು: ಇಲ್ಲಿನ ಬೊಳುವಾರು ಶ್ರೀ ದುರ್ಗಾಪರಮೇಶ್ವರಿ(ಉಳ್ಳಾಲ್ತಿ) ಮಲರಾಯ ಸಪರಿವಾರ ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿ ಕಳವಾಗಿದೆ. ಸೋಮವಾರ ಬೆಳಗ್ಗೆ ಅರ್ಚಕರು ಬಾಗಿಲು ತೆರೆಯುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಕಾಣಿಕೆ ಡಬ್ಬಿ ಹಾಗೂ ಕ್ಷೇತ್ರದ ಕಚೇರಿಯ ಪಕ್ಕದ ಟೇಬಲ್‌ನ ಡ್ರಾವರ್ ಅನ್ನು ಕದ್ದೊಯ್ಯಲಾಗಿದೆ. ಎದುರಿನ ಬಾಗಿಲಿನ ಚಿಲಕ ಮುಗಿದು ಒಳ ನುಗ್ಗಿದ್ದ ಕಳ್ಳರು ಗರ್ಭಗುಡಿಯ ಬಾಗಿಲು ಮುರಿಯಲು ಯತ್ನಿಸಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.
ಅಕ್ರಮ ದನ ಸಾಗಾಟ: ಇಬ್ಬರ ಸೆರೆ
ಹೆಬ್ರಿ: ನಾಯರ್‌ಕೊಡು ಕ್ರಾಸ್ ಬಳಿ ಗೂಡ್ಸ್ ಟೆಂಪೋ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ತಂಡವನ್ನು ಹೆಬ್ರಿ ಪೊಲೀಸರು ಮೇ 18ರಂದು ಬಂಧಿಸಿದ್ದಾರೆ. ಬಂಧಿ ತ ರಾದ ಸಂದೇಶ, ಜಯಕರ ಅವರು ಯಾವುದೇ ದಾಖಲೆಗಳಿಲ್ಲದೆ 4 ದನಗಳ ಕೈಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದರು ಎಂದು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೆಂದೂರುಕಟ್ಟೆ: ಬೆಂಕಿ ಆಕಸ್ಮಿಕ
ಉಡುಪಿ : ದೆಂದೂರುಕಟ್ಟೆಯಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿತು. ಉಡುಪಿ ಅಗ್ನಿಶಾಮಕ ದಳದವರು ಬೆಂಕಿ ನಿಯಂತ್ರಿಸಿದರು. ಪಕ್ಕದ ಮನೆಗಳಿಗೆ ವ್ಯಾಪಿಸುವುದನ್ನು ತಪ್ಪಿಸಿದರು.
Related Articles
ಕಾರ್ಕಳ: ಪೇಟೆಯ ಮಾರ್ಕೆಟ್ ವಠಾರದ ಬಳಿ ಪುರಸಭೆ ಕಟ್ಟಡವೊಂದರ ಮೆಟ್ಟಿಲಿನಿಂದ ಬಿದ್ದು ಮಿಯ್ನಾರು ಗ್ರಾಮದ ಬೆರ್ಕೆಮನೆ ವಲೇರಿಯನ್ ಡಿ’ಸೋಜಾ (51) ಅವರು ಮೃತಪಟ್ಟ ಘಟನೆ ರವಿವಾರ ನಡೆದಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement