Advertisement

ಆಟೋ ರಿಕ್ಷಾ ಢಿಕ್ಕಿಯಾಗಿ ಪಾದಚಾರಿ ಸಾವು: ದೋಷಮುಕ್ತ

12:42 AM Sep 13, 2022 | Team Udayavani |

ಕಾರ್ಕಳ: ನಗರದ ಮೂರುಮಾರ್ಗದಲ್ಲಿ ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸತ್ರ ನ್ಯಾಯಾಧೀಶರು ಆರೋಪ ಎದುರಿಸುತ್ತಿದ್ದ ರಿಕ್ಷಾ ಚಾಲಕ ರವಿ ನಿರ್ದೋಷಿ ಎಂದು ತೀರ್ಪು ನೀಡಿದ್ದಾರೆ.

Advertisement

2016ರ ಮಾ. 6ರಂದು ಸಂಜೆ ಸದಾಶಿವ ಆಚಾರ್ಯ (80) ಅವರು ಕಾರ್ಕಳ ನಗರದ ಮೂರುಮಾರ್ಗದ ರಸ್ತೆ ಬದಿಯಲ್ಲಿ ನಡೆದುಕೊಂಡು ಮನೆಗೆ ಹೊಗುತ್ತಿದ್ದ ಸಂದರ್ಭ ಹಿಂಬದಿಯಿಂದ ಬಂದಿದ್ದ ರಿಕ್ಷಾ ಢಿಕ್ಕಿ ಹೊಡೆದಿತ್ತು. ಪರಿಣಾಮ ಅವರು ಮೃತಪಟ್ಟಿದ್ದರು.

ಘಟನೆಗೆ ಸಂಬಂಧಿಸಿ ಕಾರ್ಕಳ ಪುರಸಭೆಯ ಘನ ತ್ಯಾಜ್ಯ ಸಾಗಣೆ ಮಾಡುವ ಟ್ರಾಕ್ಟರ್‌ ಚಾಲಕ ರವಿ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಠಾಣಾಧಿಕಾರಿ ಕಾರ್ಕಳ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ನ್ಯಾಯಿಕ ದಂಡಾಧಿಕಾರಿ ಈ ಪ್ರಕರಣದಲ್ಲಿ ವಿಚಾರಣೆ ನಡೆಸಿ ಆರೋಪಿ ತಪ್ಪಿತಸ್ಥನೆಂದು ಶಿಕ್ಷೆಯನ್ನು ಘೋಷಿಸಿದ್ದರು. ಇದನ್ನು ಪ್ರಶ್ನಿಸಿ ಆರೋಪಿಯು ಸತ್ರ ನ್ಯಾಯಾಲಯಕ್ಕೆ ಕ್ರಿಮಿನಲ್‌ ಅಪೀಲು ಸಲ್ಲಿಸಿದ್ದು, ನ್ಯಾಯಾಧೀಶ ಹೆಚ್ಚುವರಿ ಸತ್ರ ನ್ಯಾಯಾಧೀಶ ದಿನೇಶ್‌ ಹೆಗ್ಡೆ ಅವರು ಆರೋಪಿ ಪರ ವಕೀಲರ ಹಾಗೂ ಸರಕಾರಿ ವಕೀಲರ ವಾದ, ಪ್ರತಿವಾದವನ್ನು ಆಲಿಸಿ ಕೆಳ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿ ಆರೋಪಿಯನ್ನು ಬಿಡುಗಡೆ ಮಾಡಿದ್ದಾರೆ. ಆರೋಪಿ ಪರ ಕೆ. ಬಾಲಕೃಷ್ಣ ಶೆಟ್ಟಿ ವಾದಿಸಿದ್ದರು. ಶಬ್ನಮ್‌ ಖಾನ್‌ ಮತ್ತು ಶುಭರಾಜ್‌ ವಿ. ಸಹಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next