Advertisement

Bantwal ಆಟೋರಿಕ್ಷಾ – ಸ್ಕೂಟರ್‌ ಢಿಕ್ಕಿ; ಸವಾರರಿಗೆ ಗಾಯ

12:14 AM Apr 07, 2024 | Team Udayavani |

ಬಂಟ್ವಾಳ: ಫರಂಗಿಪೇಟೆಯಲ್ಲಿ ಆಟೋರಿಕ್ಷಾ – ಸ್ಕೂಟರ್‌ ಢಿಕ್ಕಿಯಾದ ಪರಿಣಾಮ ಸವಾರರಿಬ್ಬರು ಗಾಯ ಗೊಂಡ ಘಟನೆ ಎ. 4ರಂದು ನಡೆದಿದೆ.

Advertisement

ಸವಾರ ಅಡ್ಯಾರ್‌ ಗ್ರಾಮ ನಿವಾಸಿ ಅಬ್ದುಲ್‌ ಹಮೀದ್‌ ಶೋಹೆಬ್‌ ಹಾಗೂ ಸಹಸವಾರೆ ಫಾತಿಮಾ ಗಾಯಗೊಂಡವರು. ಚಾಲಕ ಮಹಮ್ಮದ್‌ ಶಫೀಕ್‌ ಆಟೋ ರಿಕ್ಷಾವನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿಗೆ ಢಿಕ್ಕಿ ಹೊಡೆದರು ಎಂದು ಪೊಲೀಸ್‌ ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆಯಲ್ಲಿ ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದು, ಅಬ್ದುಲ್‌ ಹಮೀದ್‌ ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next