Advertisement
ಕಾರ್ಕಳ ತಾಲೂಕು ನೂರಾಳ್‌ಬೆಟ್ಟುವಿನ ಹೆಬ್ಟಾರು ಬೆಟ್ಟು ನಿವಾಸಿ ಜಿನೇಶ್ ಅವರು ಬಜಗೋಳಿ ಮಾರ್ಕೆಟ್ ಪ್ರಾಂಗಣದಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡಿದ್ದು, ಎದುರಿನ ಅಂಗಡಿಯ ಪ್ರಸನ್ನ ಅವರು ಮಧ್ಯಾಹ್ನ ಜಿನೇಶ್ ಅವರ ಅಂಗಡಿಗೆ ಬಂದು ಎರಡು ಕಟ್ಟು ಸ್ಪ್ರಿಂಗ್ ಆನಿಯನ್ ಬೇಕೆಂದು ಖರೀದಿಸಿದ್ದರು. ಇದಕ್ಕೆ 40 ರೂ. ಹಣ ಕೇಳಿದಾಗ ನಿರಾಕರಿಸಿ, ಸ್ಪ್ರಿಂಗ್ ಆನಿಯನ್ ಅನ್ನು ಅಲ್ಲೇ ಎಸೆದು ಕ್ರೇಟ್‌ನಲ್ಲಿದ್ದ ಚೂರಿಯಿಂದ ಜಿನೇಶ್ ಅವರ ಬೆನ್ನಿಗೆ ಇರಿದು ಗಾಯಗೊಳಿಸಿದ್ದಾರೆ. ಬಳಿಕ ಬೆದರಿಕೆ ಒಡ್ಡಿದ್ದಾರೆ ಎಂದು ಜಿನೇಶ್ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಸನ್ನ ವಿರುದ್ಧ ಪ್ರಕರಣ ದಾಖಲಾಗಿದೆ.
Advertisement
ತರಕಾರಿ ವ್ಯಾಪಾರಿಗಳ ನಡುವೆ ಜಗಳ; ದೂರು, ಪ್ರತಿದೂರು ದಾಖಲು
11:44 PM Sep 11, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.