Advertisement

ದರೋಡೆಕೋರ, ದನಗಳ್ಳನ ಬಂಧನ: ಈತನ ಮೇಲಿತ್ತು 24ಕ್ಕೂ ಅಧಿಕ ಪ್ರಕರಣ

11:34 PM Aug 07, 2022 | Team Udayavani |

ಬಜಪೆ: ಮೂಡುಬಿದಿರೆ ಠಾಣೆಯ ಪಿ.ಎಸ್‌.ಐ ಸುದೀಪ್‌ ಮತ್ತು ಸಿಬಂದಿ ಹಾಗೂ ಬಜಪೆ ಪೊಲೀಸ್‌ ಠಾಣೆಯ ಪೊಲೀಸರು ನ್ಯಾಯಾಲಯದ ವಾರಂಟ್‌ಗೆ ಸಂಬಂಧಿಸಿ ಆರೋಪಿ ಮೊಹಮ್ಮದ್‌ ಮನ್ಸೂರ್‌ ಯಾನೆ ಅದ್ಯಪಾಡಿ ಮನ್ಸೂರ್‌ (41) ಮನೆಗೆ ತೆರಳಿ ಆತನನ್ನು ಬಂಧಿಸಲು ಪ್ರಯತ್ನಿಸಿದಾಗ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಆತನ ಪತ್ನಿ ಮತ್ತು ಮನೆಯ ಇತರ ಸದಸ್ಯರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಮುಂದಾಗಿದ್ದಾರೆ.

Advertisement

ಆರೋಪಿ ಮನ್ಸೂರ್‌ ಮತ್ತು ಆತನ ಪತ್ನಿ ಆಸ್ಮತಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಅವರ ಮಾರ್ಗದರ್ಶನದಂತೆ ಡಿಸಿಪಿ ಅಂಶು ಕುಮಾರ್‌ ಮತ್ತು ದಿನೇಶ್‌ ಕುಮಾರ್‌ ಹಾಗೂ ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಎನ್‌. ಮಹೇಶ್‌ ಕುಮಾರ್‌ ಅವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಬಜಪೆ ಪೊಲೀಸ್‌ ಠಾಣೆಯ ನಿರೀಕ್ಷಕ ಪ್ರಕಾಶ್‌ ಮತ್ತು ಮೂಡುಬಿದಿರೆ ಠಾಣೆಯ ಪಿಎಸ್‌ಐ ಸುದೀಪ್‌ ನೇತೃತ್ವದ ಸಿಬಂದಿ ವರ್ಗದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈತನ ಮೇಲಿತ್ತು 24ಕ್ಕೂ ಅಧಿಕ ಪ್ರಕರಣ
ಆರೋಪಿ ಮನ್ಸೂರ್‌ ಅದ್ಯಪಾಡಿ ಸೈಟ್‌ ಹೌಸ್‌ನ ನಿವಾಸಿಯಾಗಿದ್ದು, ಆತನ ಮೇಲೆ ಬಜಪೆ ಠಾಣೆಯಲ್ಲಿ 6, ಮಡಿಕೇರಿ ಠಾಣೆಯಲ್ಲಿ 1, ತಿಪಟೂರು ಹುಳಿಯಾಲ ಠಾಣೆಯಲ್ಲಿ 1, ಕುಶಾಲನಗರ ಠಾಣೆಯಲ್ಲಿ 3, ಸಕಲೇಶಪುರ ಅರೆಹಳ್ಳಿ ಠಾಣೆಯಲ್ಲಿ 1, ಅಜೆಕಾರು ಠಾಣೆಯಲ್ಲಿ 1, ಕಾರ್ಕಳ ಠಾಣೆಯಲ್ಲಿ 1, ಸೋಮವಾರಪೇಟೆ ಠಾಣೆಯಲ್ಲಿ 3, ಕಾವೂರು ಠಾಣೆಯಲ್ಲಿ 1, ಸುರತ್ಕಲ್‌ ಠಾಣೆಯಲ್ಲಿ 1, ಮೂಡುಬಿದಿರೆ ಠಾಣೆಯಲ್ಲಿ 4 ಒಟ್ಟು 24ಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next