ಮಂಗಳೂರು:ಬಂದರು ದಕ್ಕೆ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ ನಿವಾಸಿ ರೀಮಾ (26) ಅವರು ಶುಕ್ರವಾರ ರಾತ್ರಿ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
Advertisement
ಅವರ ಗಂಡ ಅರ್ಜುನ್ (32)ಗೂ ತೀವ್ರ ಸುಟ್ಟ ಗಾಯಗಳಾ ಗಿವೆ.ಅರ್ಜುನ್ ನಗರದಲ್ಲಿ ಐಸ್‌ಕ್ರೀಂ ವ್ಯಾಪಾರ ಮಾಡುತಿದ್ದು, ಪತ್ನಿ ರೀಮಾ ಹಲವು ಸಮಯದಿಂದ ಅಸೌಖ್ಯದಿಂದಿದ್ದರು. ಇದರಿಂದ ನೊಂದು ಶುಕ್ರವಾರ ತಡರಾತ್ರಿ ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದರು.ಬೊಬ್ಬೆ ಕೇಳಿ ಪತಿ ಅರ್ಜುನ್ ಓಡಿ ಬಂದಿದ್ದು, ಉರಿಯುತ್ತಿದ್ದ ಪತ್ನಿಯನ್ನು ರಕ್ಷಿಸಲು ಮುಂದಾಗಿದ್ದರು. ಇದರಿಂದ ಅರ್ಜುನ್‌ಗೂ ಬೆಂಕಿ ತಗುಲಿದೆ.ಕೂಡಲೇ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ರೀಮಾ ಸಾವನ್ನಪ್ಪಿದರು. ಪಾಂಡೇಶ್ವರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಕಟೀಲು ಬಸ್ ನಿಲ್ದಾಣದ ಬಳಿ ಅಸ್ವಸ್ಥಗೊಂಡು ಬಿದ್ದಿªದ್ದ ಸುಮಾರು 60 ವರ್ಷ ಪ್ರಾಯದ ಬಾಬು ಪೂಜಾರಿ ಎಂಬವರು ವೆನಾÉಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಎ. 13ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾ ಗಿತ್ತು. ವಾರಸುದಾರರು ಬಜಪೆ ಠಾಣೆಯನ್ನು ಸಂಪರ್ಕಿಸಬಹುದು. ಬಾಲಕರಿಗೆ ಲೈಂಗಿಕ ದೌರ್ಜನ್ಯ: ಜಾಮೀನು ನಿರಾಕರಣೆ
ಉಡುಪಿ: ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಆರೋಪಿ ಚಂದ್ರ ಹೆಮ್ಮಾಡಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಸಿ.ಎಂ.ಜೋಷಿ ಅವರು ತಿರಸ್ಕರಿಸಿದ್ದಾರೆ.
Related Articles
Advertisement
ದೇಶದಲ್ಲಿ ಪೋಕೊ ಕಾಯಿದೆ ಜಾರಿಗೆ ಬಂದ ಅನಂತರ ಒಬ್ಬನ ವಿರುದ್ಧ ಇಷ್ಟು ಸಂಖ್ಯೆಯಲ್ಲಿ ಪ್ರಕರಣ ದಾಖಲಾಗಿರುವುದು ಇದೇ ಮೊದಲು ಎನ್ನಲಾಗಿದೆ. ಸರಕಾರದ ಪರವಾಗಿ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ವಾದಿಸಿದರು.
ಉಳ್ಳಾಲ: ಅಕ್ರಮ ಕಸಾಯಿಖಾನೆಗೆ ದಾಳಿಉಳ್ಳಾಲ: ಉಳ್ಳಾಲದ ಕೋಡಿತೋಟದಲ್ಲಿ ಅಕ್ರಮ ಕಸಾಯಿಖಾನೆಗೆ ಎಸಿಪಿ ರಾಮರಾವ್ ಮತ್ತು ಉಳ್ಳಾಲ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ನೇತೃತ್ವದ ಪೊಲೀಸರು ಶನಿವಾರ ರಾತ್ರಿ ದಾಳಿ ನಡೆಸಿ ಅಕ್ರಮವಾಗಿ ಕಟ್ಟಿಹಾಕಲಾಗಿದ್ದ 20 ಜಾನುವಾರು, 20 ಕೆ.ಜಿ. ದನದ ಮಾಂಸ ಹಾಗೂ ರಿûಾವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಇಬ್ರಾಹಿಂ ಪರಾರಿಯಾಗಿದ್ದಾನೆ. ವಶಪಡಿಸಿ ಕೊಳ್ಳಲಾದ ಜಾನುವಾರುಗಳನ್ನು ಪಜೀರು ಗೋವನಿತಾ ಶ್ರಯಕ್ಕೆ ಹಸ್ತಾಂತರಿಸಲಾಗಿದೆ. ಆರೋಪಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆಯೂ ಆರೋಪಿ ವಿರುದ್ಧ ಗೋಕಳವು ಸಹಿತ ಜಾನುವಾರು ಮಾಂಸ ಸಾಗಾಟ ಪ್ರಕರಣಗಳು ಉಳ್ಳಾಲ ಠಾಣೆಯಲ್ಲಿ ದಾಖಲಾಗಿವೆ. ಬ್ಯಾರಿಕೇಡ್‌ಗೆ ಸ್ಕೂಟಿ ಢಿಕ್ಕಿ: ಸವಾರ ಸಾವು
ಪಡುಬಿದ್ರಿ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಏಕಮುಖ ಸಂಚಾರ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ಸಂಚರಿಸುತ್ತಿದ್ದ ಸ್ಕೂಟಿಯೊಂದು ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಕಾಪು ಕೈಪುಂಜಾಲಿನ ಶಕಿತ್(24) ಸಾವನ್ನಪ್ಪಿದ್ದು, ಹಿಂಬದಿ ಸವಾರ ಹರ್ಷಿತ್ ಗಾಯಗೊಂಡಿದ್ದಾರೆ. ಹೆಜಮಾಡಿಕೋಡಿಯಲ್ಲಿ ಮೆಹಂದಿ ಕಾರ್ಯಕ್ರಮ ಮುಗಿಸಿ ಗೆಳೆಯನೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಶಕಿತ್ ಜೀವ ಉಳಿಸಲಾಗ ಲಿಲ್ಲ.ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಲ್ಕೇರಿಮೊಗ್ರು: ಯುವತಿ ನಾಪತ್ತೆ
ವೇಣೂರು: ಸುಲ್ಕೇರಿಮೊಗ್ರು ಗ್ರಾಮದ ಮೇಗಿನ ಹೊಕ್ಕಳ ಮನೆ ಕೂಕ್ರ ಪೂಜಾರಿ ಅವರ ಪುತ್ರಿ ಮಲ್ಲಿಕಾ(18) ಎ.15ರಿಂದ ನಾಪತ್ತೆಯಾಗಿದ್ದಾರೆ. ಬೆಳ್ಳಾರೆಯ ಬಟ್ಟೆ ಅಂಗಡಿಯಲ್ಲಿ ಕೆಲಸದಲ್ಲಿದ್ದ ಈಕೆ ಸುಮಾರು ಒಂದು ತಿಂಗಳಿನಿಂದ ಕೆಲಸ ಬಿಟ್ಟು ಮನೆಯಲ್ಲಿದ್ದಳು. ಆಕೆಯು ಈ ಹಿಂದೆ ದುಡಿದಿದ್ದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ನೊಂದಿಗೆ ಪರಾರಿಯಾಗಿರುವ ಶಂಕೆ ಇದ್ದು, ಅವರಿಬ್ಬರ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಳಲಗಿರಿ: ಮನೆಯಿಂದ ಕಳವು
ಬ್ರಹ್ಮಾವರ: ಕೊಳಲಗಿರಿ ದೊಂಪದಕುಮೇರಿಯ ಬ್ಯಾಪ್ತಿಸ್ಟ್ ಡಿ’ ಸೋಜಾ ಅವರ ಮನೆಯಲ್ಲಿ ಶುಕ್ರವಾರ ಕಳವು ನಡೆದಿದೆ. ಕಪಾಟಿನಲ್ಲಿದ್ದ ನೆಕ್ಲೆಸ್,ಚೈನ್,ಹವಳ ಸರ,ಬಳೆ, ಕಿವಿಯೋಲೆ ಸಹಿತ ಸುಮಾರು 78 ಗ್ರಾಂ ತೂಕದ ಸುಮಾರು 2 ಲ.ರೂ. ಮೌಲ್ಯದ ಚಿನ್ನಾಭರಣ ಕಳವಾಗಿದೆ. ಜಾತಿನಿಂದನೆ: ಖುಲಾಸೆ
ಉಡುಪಿ: ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದ ಆರೋ ಪಿಗಳನ್ನು ಉಡುಪಿ ನ್ಯಾಯಾಲಯ ದೋಷಮುಕ್ತಿಗೊಳಿಸಿದೆ. 2012ರ ಫೆ.4ರಂದು ಉಡುಪಿ ಸುಬ್ರಹ್ಮಣ್ಯ ನಗರ ಪುತ್ತೂರಿನ ಬಬ್ಬುಸ್ವಾಮಿ ದೈವಸ್ಥಾನ ಬಳಿ ದಿತಿನ, ದೀಕ್ಷಿತ, ದೇವರಾಜ ಕಟ್ಟಿ, ಪ್ರಕಾಶ್, ಅಜರ್, ರವಿ ಅವರು ಸ್ಥಳೀಯ ನಿವಾಸಿ ಪ್ರವೀಣ್, ಶ್ಯಾಮಲಾ, ಶಾರದಾ ಅವರಿಗೆ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪ ಸಾಬೀತಾಗದ ಹಿನ್ನೆಲೆ ಯಲ್ಲಿ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಜೋಷಿ ಅವರು ದೋಷಮುಕ್ತಗೊಳಿಸಿ ಆದೇಶ ನೀಡಿದ್ದಾರೆ. ಆರೋಪಿಗಳ ಪರವಾಗಿ ವೈ.ಟಿ.ರಾಘವೇಂದ್ರ, ವಾಣಿಶ್ರೀ ರವಿರಾಜ್, ಕ್ಲಿಂಟನ್ ಡಿ’ಸಿಲ್ವಾ ಮತ್ತು ಅಕ್ಷಯ್ ಕುಮಾರ್ ಎಂ. ವಾದಿಸಿದ್ದರು. ಕಾರಿಗೆ ರಿಕ್ಷಾ ಢಿಕ್ಕಿ
ಉಡುಪಿ: ಆಟೋರಿಕ್ಷಾ ಮತ್ತು ಕಾರು ಪರಸ್ಪರ ಢಿಕ್ಕಿ ಹೊಡೆದು ಮೂವರು ಗಾಯಗೊಂಡ ಘಟನೆ ಕಾರ್ಕಳ-ಉಡುಪಿ ಮುಖ್ಯರಸ್ತೆಯ ಪರ್ಕಳ ಹೈಸ್ಕೂಲ್ ಸಮೀಪ ಎ.19ರಂದು ಸಂಜೆ ಸಂಭವಿಸಿದೆ. ಬಸೂÅರು: ಆತ್ಮಹತ್ಯೆ
ಕುಂದಾಪುರ: ಬಸೂÅರು ಮೂಡೆRàರಿ ನಿವಾಸಿ ರಾಘವೇಂದ್ರ (29) ಎ. 19ರಂದು ರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಪರಿಚಿತ ಶವ ಪತ್ತೆ
ಸುರತ್ಕಲ್: ಕುಳಾಯಿ ಗುಡ್ಡೆ ಬರ್ಕೆಯ ಬಾವಿಯಲ್ಲಿ ಶನಿ ವಾರ 45ರ ಹರೆಯದ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ತೆಕ್ಕಟ್ಟೆ: ಹಲ್ಲೆ; ಇತ್ತಂಡದಿಂದ ದೂರು ದಾಖಲು
ಕೋಟ: ಸಮುದ್ರ ತೀರದಲ್ಲಿ ಸ್ಥಳೀಯರಿಗೆ ತೊಂದರೆಯಾಗುವಂತೆ ವರ್ತಿಸಿದ್ದನ್ನು ಖಂಡಿಸಿ ಯುವಕರ ಗುಂಪೊಂದು ಸ್ಥಳೀಯರ ಮೇಲೆ ಹಲ್ಲೆ ನಡೆಸಿದೆ ಎಂದು ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ. ತೆಕ್ಕಟ್ಟೆಯ ಯೋಗೇಶ್, ಸಂತೋಷ, ರಾಘವೇಂದ್ರ (ಪಾಂಡು) ಹಾಗೂ ಪವನ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಇವರು ಕೊಮೆ ಸಮುದ್ರ ತೀರದಲ್ಲಿ ಮದ್ಯ ಸೇವಿಸುತ್ತಿದ್ದರು. ಇದನ್ನು ಪ್ರಶ್ನಿಸಿದ ಸ್ಥಳೀಯರಾದ ಸಂದೀಪ, ಲೋಕೆಶ್ ಮತ್ತು ಸಂದೇಶ ಅವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ. ಪ್ರತಿದೂರು: ತೆಕ್ಕಟ್ಟೆ ಬಾರಾಳಿಬೆಟ್ಟಿನ ಯೋಗೇಶ್ ಮತ್ತು ಸ್ನೇಹಿತ ರಾಘವೇಂದ್ರ ಎ.18ರಂದು ಕೊಮೆ ಸಮುದ್ರ ತೀರದ ಕಟ್ಟೆಯ ಮೇಲೆ ಕುಳಿತಿ ದ್ದು ದನ್ನು ಆಕ್ಷೇಪಿಸಿ ಸ್ಥಳೀಯರಾದ ಲೋಕೇಶ್ ಯಾನೆ ಮಧು, ಸಂದೇಶ ಮತ್ತು ಸಂತೋಷ, ಉಮೇಶ್, ಪ್ರಮೋದ್, ಸಂತೋಷ್, ಸಂದೀಪ್ ಇತರ ರೊಂದಿಗೆ ಸೇರಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿದೂರು ದಾಖಲಾಗಿದೆ. ಮಹಿಳೆಗೆ ಹಲ್ಲೆ
ಕಾಪು: ಹಣದ ವ್ಯವ ಹಾರಕ್ಕೆ ಸಂಬಂಧಿಸಿ ಉದ್ಯಾವರ ಕೇದಾರ್ ನಿವಾಸಿ ಸುಜಾತಾ (35) ಅವ ರಿಗೆ ಉದ್ಯಾವರದಲ್ಲಿ ಅಂಗಡಿ ಹೊಂದಿರುವ ಲಕ್ಷ್ಮಣ (45) ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಇವ ರಿಬ್ಬರ ನಡುವೆ ಹಣಕಾಸಿನ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದ್ದು, ಸುಜಾ ತಾ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದರಿಂದ ಲಕ್ಷ್ಮಣ್ ಹಲ್ಲೆ ನಡೆಸಿರುವುದಾಗಿ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ಶವ:ಮನವಿ
ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ಕೆರೆಯ ಬಳಿ ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿ ಮಂಗಳೂರಿನ ವೆನಾÉ ಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ವಾರಸುದಾರರು ಪುತ್ತೂರು ಠಾಣೆಯನ್ನು ಸಂಪರ್ಕಿಸಬಹುದು.ಎ.17ರಂದು ಅಸ್ವಸ್ಥರಾಗಿ ಬಿದ್ದಿದ್ದ ಅವರು ಎ.18ರಂದು ಮೃತಪಟ್ಟಿದ್ದಾರೆ. ಗಣೇಶಪುರ: ಅಪರಿಚಿತ ಸಾವು
ಸುರತ್ಕಲ್: ಗಣೇಶಪುರದ ಗಣೇಶಕಟ್ಟೆ ಬಳಿ ಸುಮಾರು 50ರ ಹರೆಯದ ಅಪರಿಚಿತ ಮೃತಪಟ್ಟಿದ್ದಾರೆ. ಕೃಷ ಶರೀರ , ಕುರುಚಲು ಗಡ್ಡ ಹೊಂದಿದ್ದ ಆತ ಅನಾರೋಗ್ಯದಿಂದ ಮೃತಪಟ್ಟಿರ ಬೇಕು ಎಂದು ಶಂಕಿಸಲಾಗಿದೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.