ಬೆಂಗಳೂರು: ಜೈಲಿಗೆ ಹೋಗಲು ಮಸಲತ್ತು ನಡೆಸಿದ್ದಕ್ಕಾಗಿ ಆಟೋ ಚಾಲಕನನ್ನು ಹತ್ಯೆ ಮಾಡಿದ 11 ಮಂದಿಯ ಗ್ಯಾಂಗ್ ಬ್ಯಾಟ ರಾಯನಪುರ ಠಾಣಾ ಪೊಲೀಸರ ಬಲೆಗೆ ಬಿದ್ದಿದೆ.
ಹರೀಶ್ ಹಾಗೂ ಆತನ ಸಹೋದರ ಮಧು, ಸಹಚರ ಪ್ರಶಾಂತ್ ಸೇರಿದಂತೆ 11 ಮಂದಿ ಆರೋಪಿಗಳನ್ನು ಪೊಲೂಸರು ಬಂಧಿಸಿ ದ್ದಾರೆ. ಬ್ಯಾಟ ರಾಯನ ಪುರದ ಟಿಂಬರ್ ಯಾರ್ಡ್ ಲೇಔಟ್‌ನ ಅರುಣ್ (24) ಕೊಲೆಯಾದ ಆಟೋ ಚಾಲಕ.
ಪ್ರಕರಣದ ಪ್ರಮುಖ ಆರೋಪಿ ಹರೀಶ್ ಈ ಹಿಂದೆ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು, ಇದಕ್ಕೆ ಅರುಣ್ ಕಾರಣ ವಾಗಿದ್ದ. ಈ ವಿಚಾರ ಹರೀಶ್ ಗಮನಕ್ಕೆ ಬಂದು ಅರುಣ್ ಜತೆಗೆ ಜಗಳ ಮಾಡಿದ್ದ. ಇಷ್ಟಕ್ಕೆ ಸುಮ್ಮನಾಗದ ಅರುಣ್ ಇತ್ತೀಚೆಗೆ ಆರೋಪಿ ಹರೀಶ್ ವಿರೋಧಿಗಳಿಗೆ ಸಹಾಯ ಮಾಡುತ್ತಿದ್ದ ಎನ್ನಲಾಗಿದೆ. ಜತೆಗೆ ಆಗಾಗ ಹರೀಶ್ ಮನೆ ಬಳಿ ಸಹಚರರ ಜತೆಗೆ ಓಡಾಡಿ, ಆತನ ಚಟುವಟಿಕೆಗಳನ್ನು ಗಮನಿಸುತ್ತಿದ್ದ. ಇದು ಹರೀಶ್‌ನನ್ನು ಮತ್ತಷ್ಟು ಕೆರಳುವಂತೆ ಮಾಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಹರೀಶ್ ತನ್ನ ಸಹಚರರ ಜತೆಗೆ ಸೇರಿಕೊಂಡು ಅರುಣ್‌ನನ್ನು ಮುಗಿಸಲು ಸಂಚು ರೂಪಿಸಿದ್ದ. ಅದರಂತೆ ಡಿ.5ರಂದು ಕೆಲಸ ಮುಗಿಸಿ ಕೊಂಡು ಮನೆಗೆ ಬಂದಿದ್ದ ಅರುಣ್ ಮನೆ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಹರೀಶ್ ಸಹಚರರ ಜತೆಗೆ ಎಂಟ್ರಿ ಕೊಟ್ಟಿದ್ದ.
ಬಳಿಕ 11 ಜನ ಏಕಾಏಕಿ ಮಾರಕಾಸ್ತ್ರಗಳಿಂದ ಅರುಣ್ ದೇಹದ ವಿವಿಧ ಭಾಗಗಳಿಗೆ ಗಂಭೀರವಾಗಿ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು. ಬ್ಯಾಟ ರಾಯ ನಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದಾಗ ಸಿಕ್ಕಿದ ಒಂದೊಂದೇ ಸುಳಿವಿನ ಆಧಾರದಲ್ಲಿ ಪ್ರಮುಖ ಆರೋಪಿ ಹರೀಶ್‌ನನ್ನು ಬಲೆಗೆ ಬೀಳಿಸಿದ್ದಾರೆ. ಆತ ಕೊಟ್ಟ ಮಾಹಿತಿ ಆಧರಿಸಿ ಇತರ ಆರೋಪಿಗಳನ್ನು ಬಂಧಿಸಿ ವಿಚಾ ರಣೆ ನಡೆಸಿ ದಾಗ ಕೊಲೆಯ ಹಿಂದಿನ ರಹಸ್ಯ ಗೊತ್ತಾಗಿದೆ.
ಇನ್ನು ಹತ್ಯೆಯಾದ ಅರುಣ್ ವಿರುದ್ಧವೂ ಈ ಹಿಂದೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.