Advertisement

ಗಂಡನನ್ನೇ ಕೊಂದು ಹೂತು ಹಾಕಿದ ಪತ್ನಿ

03:12 PM Sep 06, 2020 | Suhan S |

ಚಿಕ್ಕೋಡಿ: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಗಂಡನನ್ನೇ ಹೆಂಡತಿ ಕೊಲೆ ಮಾಡಿ ಹೂತು ಹಾಕಿದ ಘಟನೆ ನಿಪ್ಪಾಣಿ ತಾಲೂಕಿನ ಹಂಚನಾಳ ಗ್ರಾಮದಲ್ಲಿ ತಡವಾಗಿ ಪತ್ತೆಯಾಗಿದೆ.

Advertisement

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್‌ ತಾಲೂಕಿನ ನೇರ್ಲೆ ಗ್ರಾಮದ ಸಚಿನ ಸದಾಶಿವ ಭೋಪಳೆ(35) ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದ ಪತ್ನಿ ಅನಿತಾ ಭೋಪಳೆ(33) ಸಹಚರ ಸಹೋದರ ಹಂಚಿನಾಳ ಗ್ರಾಮದ ಕೃಷ್ಣಾತ್‌ ರಾಜಾರಾಮ ಘಾಟಗೆ(26) ಹಾಗೂ ಪತ್ನಿಯ ಸಹೋದರಿ ಕಾಗಲ್‌ ತಾಲೂಕಿನ ಸಿದ್ಧನೇರ್ಲಿ ಗ್ರಾಮದ ವನಿತಾ ಕೃಷ್ಣಾತ್‌ ಚವ್ಹಾಣ(29) ಮೂವರೂ ಆರೋಪಿಗಳು ತಲೆಮರೆಸಿಕೊಂಡಿದ್ದು ಪೊಲೀಸರು ಅವರ ಶೋಧ ಕಾರ್ಯ ನಡೆಸಿದ್ದಾರೆ.

ಕೊಲೆಯಾದ ವ್ಯಕ್ತಿ ಪತ್ನಿ ಶೀಲದ ಬಗ್ಗೆ ಆಗಾಗ ಸಂಶಯ ವ್ಯಕ್ತಪಡಿಸಿ ಮದ್ಯದ ಅಮಲಿನಲ್ಲಿ ಕಿರುಕುಳ ಕೊಡುತ್ತಿದ್ದ ಎಂದು ಪೊಲೀಸರು ತಿಳಿಸಿದರು. ಕೆಲ ದಿನಗಳ ಹಿಂದೆ ಇಬ್ಬರೂ ಹಂಚಿನಾಳ ಗ್ರಾಮಕ್ಕೆ ಬಂದಿದ್ದರು. ಅಲ್ಲಿಯೂ ಸಹ ಸಚಿನ ಸೆ.3ರಂದು ಮದ್ಯದ ಅಮಲಿನಲ್ಲಿ ತನ್ನ ಪತ್ನಿ ಜತೆಗೆ ಜಗಳಕ್ಕಿಳಿದಿದ್ದ. ಈ ಜಗಳದಲ್ಲಿ ಪತ್ನಿ ಅನಿತಾ ಬಡಿಗೆಯಿಂದ ಆತನ ತಲೆಗೆ ಜೋರಾಗಿ ಪೆಟ್ಟು ಕೊಟ್ಟಿದ್ದಾಳೆ. ಇದರಲ್ಲಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಂತರ ಮನೆಯಲ್ಲಿ ಎಮ್ಮೆ ಸತ್ತಿದ್ದು ಅದನ್ನು ಅಂಗಳದಲ್ಲಿ ಹೂಳಲು ಜೆಸಿಬಿ ಚಾಲಕನಿಗೆ ರಾತ್ರೋರಾತ್ರಿ ಕರೆ ಮಾಡಿ ಕರೆಸಿ ದೊಡ್ಡ ತಗ್ಗು ತೆಗೆಸಿ, ನಂತರ ಅನಿತಾ ಮತ್ತು ಆಕೆಯ ಸಹೋದರ ಹಾಗೂ ಸಹೋದರಿ ಸಚಿನನ ಹೆಣವನ್ನು ಅಲ್ಲೇ ಮಣ್ಣು ಮಾಡಿದ್ದರು. ಶನಿವಾರ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ಗೊತ್ತಾಗಿ ತಪಾಸಣೆ ನಡೆಸಿದ ನಂತರ ಸತ್ಯ ಬಯಲಾಗಿದೆ. ಈ ಕುರಿತು ನಿಪ್ಪಾಣಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next