Advertisement

ಅನೈತಿಕ ಸಂಬಂಧ: ‘ವಿಸ್ಮಯ’ಸಿನಿಮಾ ಪ್ರೇರಣೆಯಿಂದ ಪ್ರಿಯಕರನ ಜತೆಗೂಡಿ ಪತಿಯನ್ನು ಕೊಂದ ಪತ್ನಿ

01:53 PM Dec 04, 2020 | keerthan |

ಮಂಡ್ಯ: ಅನೈತಿಕ ಸಂಬoಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ‘ವಿಸ್ಮಯ’ ಸಿನಿಮಾದಿಂದ ಪ್ರೇರಣೆಗೊಂಡು ಪತ್ನಿಯೇ ತನ್ನ ಪ್ರಿಯಕರನ ಜತೆಗೂಡಿ ಕೊಲೆ ಮಾಡಿರುವ ಘಟನೆ ತಾಲೂಕಿನ ಹನಕೆರೆ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Advertisement

ಹನಕೆರೆ ಗ್ರಾಮದ ಪ್ರದೀಪ್‌ಕುಮಾರ್ ಕೊಲೆಯಾದ ವ್ಯಕ್ತಿ. ಈತನ ಪತ್ನಿ ಶಿಲ್ಪಾ ಹಾಗೂ ಪ್ರಿಯಕರ ಮಧುಸೂದನ್ ಕೊಲೆ ಮಾಡಿದ ಆರೋಪಿಗಳಾಗಿದ್ದು, ಇಬ್ಬರೂ ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ.

ಏನಿದು ಘಟನೆ?

ಮೃತ ಪ್ರದೀಪ್‌ ಕುಮಾರ್ ಹಾಗೂ ಶಿಲ್ಪಾ ಒಂದೇ ಗ್ರಾಮದ ಅಕ್ಕಪಕ್ಕದ ಮನೆಯವರಾಗಿದ್ದರು. ಕಳೆದ 12 ವರ್ಷಗಳ ಹಿಂದೆ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಒಬ್ಬ ಗಂಡು ಮಗನಿದ್ದಾನೆ.

ಇದನ್ನೂ ಓದಿ:ಅರೆಬೆಂದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಶವಪತ್ತೆ: ಬೇರೆಡೆ ಕೊಲೆ ಮಾಡಿ ತಂದು ಸುಟ್ಟಿರುವ ಶಂಕೆ

Advertisement

ಶಿಲ್ಪಾ ಮಂಡ್ಯದಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದಳು. ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಹೋಬಳಿಯ ಗ್ರಾಮವೊಂದರ ಮಧುಸೂದನ್ ಅವಿವಾಹಿತನಾಗಿದ್ದು, ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ಕೊಡಿಸುವ ಕೆಲಸ ಮಾಡಿಕೊಂಡು ಮಂಡ್ಯದಲ್ಲೇ ವಾಸವಾಗಿದ್ದನು. ಕಳೆದ ಮೂರು ವರ್ಷಗಳ ಹಿಂದೆ ಶಿಲ್ಪಾ ಪರಿಚಯವಾಗಿ ಸ್ನೇಹ ಬೆಳೆದಿದೆ. ಅದು ಪ್ರೀತಿಗೆ ತಿರುಗಿ ಇಬ್ಬರ ನಡುವೆ ಅನೈತಿಕ ಸಂಬಂಧಕ್ಕೆ ತಿರುಗಿತ್ತು.

ಇಬ್ಬರ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂದು ತಿಳಿದ ಪತ್ನಿ ಶಿಲ್ಪಾ ಪ್ರತಿನಿತ್ಯ ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನ ಜತೆ ಸೇರುತ್ತಿದ್ದಳು. ಈ ವಿಚಾರ ಪ್ರದೀಪ್‌ ಕುಮಾರ್‌ ಗೆ ತಿಳಿದು ಬುದ್ಧಿಮಾತು ಹೇಳಿದ್ದ. ಆದರೆ ಅದನ್ನು ಲೆಕ್ಕಿಸದ ಪತ್ನಿ ಶಿಲ್ಪಾ ನ.17ರಂದು ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರ ಮಧುಸೂದನ್ ಜತೆ ಸೇರಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ನಂತರ ಆಸ್ಪತ್ರೆಗೆ ಕರೆದೊಯ್ದು ಸಾವು ಖಚಿತಪಡಿಸಿಕೊಂಡು ಮನೆಯವರಿಗೆ ಹೃದಯಾಘಾತ ಎಂದು ನಂಬಿಸಿದ್ದಳು.

ಗಂಡನ ಅಂತ್ಯಕ್ರಿಯೆಯ ನಂತರ ಆಕೆಯ ವರ್ತನೆ ಬದಲಾಗಿತ್ತು. ಇದನ್ನು ಗಮನಿಸಿದ್ದ ಪ್ರದೀಪ್‌ ಕುಮಾರ್ ಸಹೋದರ ಪ್ರತಾಪ್ ಅವರು ಶಿಲ್ಪಾ ಹಾಗೂ ಪ್ರಿಯಕರ ಮಧುಸೂದನ್ ವಿರುದ್ಧ ಡಿ.1ರಂದು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಅದರಂತೆ ಪೊಲೀಸರು ಶಿಲ್ಪಾಳವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next