Advertisement

ಎಚ್ಚರ! ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚುವ ಸಾಧ್ಯತೆಯಿದೆ : ಭಾಸ್ಕರ್ ರಾವ್

11:12 AM Jun 02, 2020 | sudhir |

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ನಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಜನತೆಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಇದರಿಂದ ತಮ್ಮ ಮತ್ತು ತಮ್ಮವರ ರಕ್ಷಣೆ ತಾವೇ ಮಾಡಿಕೊಳ್ಳಬೇಕಾಗಿದೆ ಸಾಕಷ್ಟು ಮಂದಿಗೆ ಕೆಲಸವಿಲ್ಲದೇ ಆದಾಯವೇ ಇಲ್ಲದಂತಾಗಿದೆ. ಪರಿಣಾಮ ಯಾವ ಕೃತ್ಯಕ್ಕಾದರೂ ಪ್ರಚೋದನೆ ಸಂಭವಿಸುವ ಸಾಧ್ಯತೆ ಇದೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ. ಹೀಗಾಗಿ ಕೆಲವೊಂದು ಅಗತ್ಯ ಅಂಶಗಳನ್ನು ಮನದಲ್ಲಿಟ್ಟುಕೊಂಡಿರಲು ಅವರು ಮನವಿ ಮಾಡಿದ್ದಾರೆ .

Advertisement

1. ಜನರು ತುಂಬಾ ಜಾಗರೂಕರಾಗಿರಬೇಕು ಮತ್ತು ಮನೆಯಲ್ಲಿರುವವರು, ಸ್ಕೂಲ್​ಗೆ ಹೋಗುವ ಮಕ್ಕಳು, ಕಾಲೇಜಿಗೆ ಹೋಗುವ ಹುಡುಗ ಅಥವಾ ಹುಡುಗಿಯರು, ಕೆಲಸಕ್ಕೆ ಹೋಗುವ ಹೆಂಗಸರು ಅಥವಾ ಗಂಡಸರು ಜಾಗ್ರತೆಯಿಂದಿರಬೇಕು .

2. ಯಾರೂ ಸಹ ದುಬಾರಿ ವಾಚ್ ಧರಿಸಬೇಡಿ .

3. ದುಬಾರಿ ಬೆಲೆಯ ಸರಗಳು, ಬಳೆಗಳು, ಕಿವಿಯೋಲೆ ಧರಿಸಬೇಡಿ ಮತ್ತು ನಿಮ್ಮ ಕೈಚೀಲದ ಬಗ್ಗೆ ಜೋಪಾನವಿರಲಿ .

4. ಗಂಡಸರೇ ಅದಷ್ಟೂ ದುಬಾರಿ, ವಾಚ್, ಬ್ರಾಸ್ಲೈಟ್ ಮತ್ತು ಚೈನ್ ಧರಿಸುವುದರಿಂದ ದೂರವಿರಿ .

Advertisement

5. ಸಾರ್ವಜನಿಕವಾಗಿ ಹೆಚ್ಚು ಮೊಬೈಲ್ ಪೋನ್ ಬಳಕೆ ಮಾಡಬೇಡಿ. ಅದಷ್ಟೂ ಕಡಿಮೆ ಬಳಸಿ .

6. ಯಾವುದೇ ಅಪರಿಚಿತರಿಗೆ ತಮ್ಮ ವಾಹನದಲ್ಲಿ ಡ್ರಾಪ್ ನೀಡಬೇಡಿ .

7. ಅಗತ್ಯಕ್ಕಿಂತ ಹೆಚ್ಚು ಹಣವನ್ನು ಜೊತೆಯಲ್ಲಿಟ್ಟುಕೊಂಡು ಓಡಾಡಬೇಡಿ .

8. ಚಾಲನೆಯ ವೇಳೆ ನಿಮ್ಮ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಗ್ಗೆ ಎಚ್ಚರವಹಿಸಿ .

9. ಆಗಾಗ ಮನೆಗೆ ಕರೆ ಮಾಡಿ ನಿಮ್ಮ ಕುಟುಂಬದವರ ಜೊತೆ ಮಾತನಾಡಿ, ಹಿರಿಯರು, ಮಕ್ಕಳ ಬಗ್ಗೆ ತಿಳಿದುಕೊಳ್ಳಿ .

10. ನಿಮ್ಮ ಮನೆಯವರಿಗೆ ತಿಳಿಸಿ, ಹಿರಿಯರು ಮಹಿಳೆಯರು ಬಾಗಿಲು ತೆಗೆಯುವ ವೇಳೆ ಸುರಕ್ಷತೆ ವಹಿಸಲು ತಿಳಿಸಿ, ಗೇಟ್ ಅಥವಾ ಗ್ರಿಲ್ ಲಾಕ್ ಮಾಡಿರಿ . ಯಾವುದೇ ಪಾರ್ಸಲ್ ತೆಗೆದುಕೊಳ್ಳುವ ವೇಳೆ ಗೇಟ್ ಅಥವಾ ಗ್ರಿಲ್ ಬಳಿ ತುಂಬಾ ಹತ್ತಿರ ಹೋಗಬೇಡಿ .

11. ಮನೆಯಾಚೆ ಹೋಗುವ ಮಕ್ಕಳಿಗೆ ಅದಷ್ಟೂ ಬೇಗ ಮನೆಗೆ ವಾಪಸ್ ಆಗಲು ತಿಳಿಸಿ .

12. ಮನೆಗೆ ಹೋಗುವಾಗ ಯಾವುದೇ ಶಾರ್ಟ್​ಕಟ್ ರಸ್ತೆಗಳನ್ನ ಬಳಸಬೇಡಿ, ಅದಷ್ಟೂ ಪ್ರಮುಖ ರಸ್ತೆಗಳನ್ನೇ ಬಳಸಿ .

13. ಯುವಕರು ಮನೆಯಾಚೆ ಇರುವ ವೇಳೆ ಆದಷ್ಟೂ ನಿಮ್ಮ ಸುತ್ತಮುತ್ತಲಿನ ಘಟನೆಗಳ ಬಗ್ಗೆ ಗಮನವಿಡಿ .

14. ಆದಷ್ಟೂ ಮೊಬೈಲ್​ನಲ್ಲಿ ಎಮರ್ಜೆನ್ಸಿ ನಂಬರ್ ಇಟ್ಟುಕೊಂಡಿರಿ .

15. ಆದಷ್ಟೂ ಜನರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಅಲ್ಲದೇ ಸಾರ್ವಜನಿಕರು ಆದಷ್ಟೂ ಮಾಸ್ಕ್ ಧರಿಸಿರಬೇಕು .

16. ಕ್ಯಾಬ್ ಸರ್ವೀಸ್ ಪಡೆಯುವವರು ಆದಷ್ಟೂ ನಿಮ್ಮ ಟ್ರಾವೆಲ್ ಡಿಟೇಲ್ಸ್ ಅನ್ನು ನಿಮ್ಮ ಪೋಷಕರಿಗೆ, ಸಂಬಂಧಿಕರಿಗೆ, ಒಡಹುಟ್ಟಿದವರಿಗೆ, ಸ್ನೇಹಿತರಿಗೆ, ಕೇರ್ ಟೇಕರ್ಸ್ ಜೊತೆ ಹಂಚಿಕೊಂಡು ಓಡಾಡಿ .

17. ಸರ್ಕಾರಿ ವಾಹನದ ಸರ್ವೀಸ್ ಹೆಚ್ಚು ಬಳಸಲು ಯತ್ನಿಸಿ. ಅದರಲ್ಲೂ ಹೆಚ್ಚು ರಷ್ ಇರುವ ಬಸ್​ಗಳನ್ನು ಸಹ ಅವೈಡ್ ಮಾಡಿ.

18. ಆದಷ್ಟೂ ಬೆಳಗ್ಗೆ 6 ಗಂಟೆಯ ನಂತರ ವಾಕ್​ಗೆ ಹೋಗಿ, ಸಂಜೆ 8ರ ಒಳಗೆ ವಾಕ್ ಮುಗಿಸಿ ಮನೆ ಸೇರಿಕೊಳ್ಳಿ, ಅದಷ್ಟೂ ಮುಖ್ಯ ರಸ್ತೆಯ ಅಕ್ಕ-ಪಕ್ಕದಲ್ಲೇ ವಾಕ್ ಮಾಡಿ .

20. ಮಾಲ್, ಬೀಚ್, ಪಾರ್ಕ್​ಗಳಲ್ಲಿ ಹೆಚ್ಚು ಸಮಯ ಕಳೆಯಬೇಡಿ .

21. ಚಿಕ್ಕ ಮಕ್ಕಳನ್ನು ಟ್ಯೂಷನ್​ಗೆ ದೊಡ್ಡವರೇ ಕರೆದುಕೊಂಡು ಹೋಗಿ ಕರೆದುಕೊಂಡು ಬನ್ನಿ.

22. ಬೆಲೆಬಾಳುವ ವಸ್ತುಗಳನ್ನ ವಾಹನದಲ್ಲಿ ಇಡಬೇಡಿ .

Advertisement

Udayavani is now on Telegram. Click here to join our channel and stay updated with the latest news.

Next