ಸಿಡ್ನಿ: ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾಗಿರುವ ಆಸ್ಟ್ರೇಲಿಯ ತಂಡದ ಕ್ರಿಕೆಟಿಗ ಸ್ಟೀವ್ ಸ್ಮಿತ್ ವಿವಾದವೇ ಈಗ ಜಾಹೀರಾತಿಗೆ ಸರಕು ಆಗಿದೆ. ಬ್ರಿಟನ್‌ನ ವೋಡಾಫೋನ್ ಸಮೂಹ “ಗಟ್ಸೆ ಈಸ್ ಕಾಲಿಂಗ್’ ಹೆಸರಲ್ಲಿ ಜಾಹೀರಾತು ಮಾಡಿದೆ. “ತಪ್ಪು ಮಾಡದವರು ಯಾರೂ ಇಲ್ಲ. ನಮ್ಮ ತಪ್ಪುಗಳನ್ನು ತಿದ್ದಿಕೊಂಡಿದ್ದೇವೆ’ ಎನ್ನುವ ಸಂದೇಶ ಸಾರಿದೆ. ವೀಡಿಯೋ ಆರಂಭಕ್ಕೂ ಮೊದಲು, ಸ್ಮಿತ್ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ಷಮೆ ಕೇಳುವ ವೀಡಿಯೋವನ್ನು ಬಳಸಲಾಗಿದೆ.
ಬಾಂಗ್ಲಾ ಲೀಗ್‌ಗೂ ಸ್ಮಿತ್ ಬೇಡ
ಸ್ಟೀವ್ ಸ್ಮಿತ್ ವಿವಾದ ಹಿನ್ನಲೆಯಲ್ಲಿ ಐಪಿಎಲ್‌ನಿಂದ ಹೊರಬಿದ್ದಿದ್ದರು.ಇದೀಗ ಬಾಂಗ್ಲಾ ಟಿ20 ಕೂಟದಿಂದಲೂ ಅವರನ್ನು ಕೈಬಿಡಲಾಗಿದೆ. ಯಾವುದೇ ಫ್ರಾಂಚೈಸಿಗಳು ಸ್ಮಿತ್ ಅವರನ್ನು ಖರೀದಿಸಲು ಮುಂದೆ ಬಂದಿಲ್ಲ. ಮಾತ್ರವಲ್ಲ, ಅವರು ಕೂಟದಲ್ಲಿ ಭಾಗವಹಿಸುವುದನ್ನು ಕೆಲವರು ಪ್ರಶ್ನಿಸಿದ್ದಾರೆ.