ಐಸಿಸಿ ತಿಂಗಳ ಕ್ರಿಕೆಟಿಗರ ಪ್ರಶಸ್ತಿ ಇತಿಹಾಸದಲ್ಲಿ ಒಂದೇ ದೇಶದ ಕ್ರಿಕೆಟಿಗರು ಆಯ್ಕೆಯಾದ ಕೇವಲ 2ನೇ ನಿದರ್ಶನ ಇದಾಗಿದೆ. ಅದೂ ಒಂದೇ ವರ್ಷದಲ್ಲಿ. ಕಳೆದ ಜೂನ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಮತ್ತು ಸ್ಮತಿ ಮಂಧನಾ ಈ ಗೌರವಕ್ಕೆ ಪಾತ್ರರಾಗಿದ್ದರು.
Advertisement
ದುನಿತ್ ವೆಲ್ಲಲಗೆ ಪ್ರವಾಸಿ ಭಾರತದೆ ದುರಿನ ತವರಿನ ಏಕದಿನ ಸರಣಿಯಲ್ಲಿ ಆಲ್‌ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. 2 ಪಂದ್ಯಗಳಲ್ಲಿ ಅಜೇಯ 67 ಮತ್ತು 39 ರನ್ ಜತೆಗೆ 7 ವಿಕೆಟ್ ಕೂಡ ಹಾರಿಸಿದ್ದರು. ಅಂತಿಮ ಪಂದ್ಯದಲ್ಲಿ 27ಕ್ಕೆ 5 ವಿಕೆಟ್ ಉರುಳಿಸಿದ ಸಾಧನೆ ಇವರದಾಗಿತ್ತು. ಪ್ರಶಸ್ತಿ ರೇಸ್‌ನಲ್ಲಿದ್ದ ಉಳಿದವರೆಂದರೆ ಕೇಶವ್ ಮಹಾರಾಜ್ ಮತ್ತು ಜೇಡನ್ ಸೀಲ್ಸ್.
ಹರ್ಷಿತಾ ಸಮರವಿಕ್ರಮ ಅವರು ಐರ್ಲೆಂಡ್ ಪ್ರವಾಸದ ವೇಳೆ ಆಡಲಾದ 2 ಟಿ20 ಪಂದ್ಯಗಳಲ್ಲಿ 151 ರನ್, 3 ಏಕದಿನ ಪಂದ್ಯಗಳಲ್ಲಿ 172 ರನ್ ಹೊಡೆದಿದ್ದರು. ದ್ವಿತೀಯ ಏಕದಿನ ಪಂದ್ಯದಲ್ಲಿ 105 ರನ್ ಬಾರಿಸಿದ ಸಾಧನೆ ಇವರದಾಗಿತ್ತು. ಹರ್ಷಿತಾ ಐಸಿಸಿ ತಿಂಗಳ ಪ್ರಶಸ್ತಿಗೆ ಪಾತ್ರರಾದ ಲಂಕೆಯ ಕೇವಲ 2ನೇ ಆಟಗಾರ್ತಿ. ಚಾಮರಿ ಅತಪಟ್ಟು ಮೊದಲಿಗರು.