Advertisement
ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಅಧಿಕಾರಿಯಾಗಿರುವ (ಎಪಿಐ) ಸುರೇಖಾ ಅವರಿಗೆ ಮಗ ಕ್ರಿಕೆಟರ್ ಆಗುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಆದರೆ ಸ್ವತಃ ಕ್ರೀಡಾಪಟು ವಾಗಿರುವ ತಂದೆಗೆ ಮಗನ ಕ್ರೀಡಾ ಪ್ರತಿಭೆಯ ಮೇಲೆ ಭಾರೀ ಭರವಸೆ. ಈತ 22 ಯಾರ್ಡ್ ಅಂಕಣದಲ್ಲಿ ದೊಡ್ಡದೊಂದು ಸಾಧನೆ ಮಾಡಲಿದ್ದಾನೆಂದು ಸ್ಪಷ್ಟವಾಗಿ ಊಹಿಸಿದ್ದರು. ಇದೀಗ ನಿಜವಾಗಿದೆ.
ಮೊದಲು ಸುನೀಲ್ ಗಾವಸ್ಕರ್, ಬಳಿಕ ಸಚಿನ್ ತೆಂಡುಲ್ಕರ್ ಅವರ ಕಟ್ಟಾ ಅಭಿಮಾನಿ ಯಾಗಿದ್ದ ಕಾರಣ ಮಗನಿಗೂ ಸಚಿನ್ ಹೆಸರನ್ನೇ ಇರಿಸಿದ್ದರು ಸಂಜಯ್ ಧಾಸ್. ತೆಂಡುಲ್ಕರ್ ಅವರಂತೆ 10ನೇ ನಂಬರ್ ಜೆರ್ಸಿ ಧರಿಸಿ ಆಡ ಲಿಳಿಯುತ್ತಾರೆ. ಮತ್ತೋರ್ವ ಲೆಜೆಂಡ್ರಿ ಆಟಗಾರ ವಿರಾಟ್ ಕೊಹ್ಲಿ ಅವರ ಅಭಿಮಾನಿಯೂ ಹೌದು.
“ಸಚಿನ್‌ಗೆ ಯಾರೂ ದೋಸ್ತಿಗಳಿಲ್ಲ. ನಾನೇ ಅವನ ಗೆಳೆಯ. ಆತ ಯಾವುದೇ ಸಮಾರಂಭ ಗಳಿಗೆ ಹೋದವನಲ್ಲ. ಹೀಗಾಗಿ ಕ್ರಿಕೆಟ್ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸಲು ಆತನಿಗೆ ಸಾಧ್ಯವಾಯಿತು’ ಎನ್ನುತ್ತಾರೆ ಸಂಜಯ್ ಧಾಸ್. ಇವರು ಮಹಾರಾಷ್ಟ್ರದ ಹಳ್ಳಿ ಪ್ರದೇಶವಾದ ಬೀಡ್ ಮೂಲದವರು. ಸಂಜಯ್ ಕಾಲೇಜು ದಿನಗಳಲ್ಲಿ ಕಬಡ್ಡಿ, ವಿವಿ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದಾರೆ. ಸಹೋದರಿ ಪ್ರತೀಕ್ಷಾ ಪುಣೆಯಲ್ಲಿ ಯುಎಸ್‌ಪಿಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.
Related Articles
“ಮಗನ ತರಬೇತಿಗಾಗಿ ಸಾಲ ಮಾಡಿ ಟರ್ಫ್ ವಿಕೆಟ್‌ಗಳನ್ನು ಸಿದ್ಧಪಡಿಸಿದ್ದೆ. ಆದರೆ ಬೀಡ್ ನಲ್ಲಿ ನೀರಿನ ಸಮಸ್ಯೆ. ಪಿಚ್‌ಗಳನ್ನು ತಾಜಾ ಆಗಿರಿಸಿಕೊಳ್ಳುವುದು ದೊಡ್ಡ ಸವಾಲು. ಹೀಗಾಗಿ 2-3 ದಿನಗಳಿಗೊಮ್ಮೆ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದೆ’ ಎಂದು ಸಂಜಯ್ ಧಾಸ್ ಆಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಕೋಚ್ ಅಜರ್ ಅವರ ಮಾರ್ಗದರ್ಶನವನ್ನು ಉಲ್ಲೇಖೀಸಲು ಮರೆಯುವುದಿಲ್ಲ.
Advertisement
ಬಿರುಸಿನ ಬ್ಯಾಟರ್ಸಚಿನ್ ಧಾಸ್ ಕೆಳ ಕ್ರಮಾಂಕದ ಬಿರುಸಿನ ಆಟಗಾರ. ಇವರು ಸಿಕ್ಸರ್ ಬಾರಿಸುವ ರೀತಿಯೇ ವಿಚಿತ್ರ. ಸಂಘಟಕರಿಗೆ ಒಂಥರ ಗೊಂದಲ. ಅವರ ಬ್ಯಾಟ್ ಗಾತ್ರವನ್ನು ಪರಿಶೀಲಿಸಿದ ವಿದ್ಯಮಾನವೂ ಸಂಭವಿಸಿದೆ!
ಅಗ್ರ ಕ್ರಮಾಂಕದಲ್ಲಿ ಮುಶೀರ್ ಖಾನ್, ಉದಯ್ ಸಹಾರಣ್ ಕ್ರೀಸ್ ಆಕ್ರಮಿಸಿ ಕೊಳ್ಳು ವುದರಿಂದ ಧಾಸ್‌ಗೆ ಅವಕಾಶ ಕಡಿಮೆ ಸಿಗುತ್ತಿತ್ತು. ಆದರೆ ಸಿಕ್ಕಿದ ಅವಕಾಶಗಳನ್ನು ವ್ಯರ್ಥ ಗೊಳಿಸುತ್ತಿರಲಿಲ್ಲ. ನೇಪಾಲ ವಿರುದ್ಧದ ಸೂಪರ್ ಸಿಕ್ಸ್ ಪಂದ್ಯದಲ್ಲಿ ಧಾಸ್‌ಗೆ ಭಡ್ತಿ ನೀಡಲಾಯಿತು. ಇದು ಭರ್ಜರಿ ಯಶಸ್ಸು ಕಂಡಿತು. ದಾಸ್ 116 ರನ್ ಸಿಡಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತೀವ್ರ ಕುಸಿತದಲ್ಲಿದ್ದುದನ್ನೂ ಲೆಕ್ಕಿಸದೆ ಬಿರುಸಿನ ಬ್ಯಾಟಿಂಗ್ ನಡೆಸಿದರು. ಸತತ 2ನೇ ಶತಕಕ್ಕೆ ಅಡ್ಡಿಯಾದದ್ದು ಬರೀ 4 ರನ್. ಆದರೆ ತಂಡವನ್ನು ಸೋಲಿನಿಂದ ಬಚಾವ್ ಮಾಡಿದ ಸಾಹಸ ಎಲ್ಲಕ್ಕೂ ಮಿಗಿಲು. ರವಿವಾರದ ಅಕಾಡೆಮಿ ಗ್ರೌಂಡ್‌ನಲ್ಲಿ ದೈತ್ಯ ಪರದೆ ಅಳವಡಿಸಿ, 200 ಯುವ ಕ್ರಿಕೆಟ್ ಪ್ರತಿಭೆ ಗಳೊಂದಿಗೆ ಫೈನಲ್ ಪಂದ್ಯ ವೀಕ್ಷಿ ಸುವುದು ಸಂಜಯ್ ಧಾಸ್ ಅವರ ಯೋಜನೆ.