Advertisement

Pune: ಉತ್ತರಕನ್ನಡ ಮೂಲದ ಮಾಜಿ ಕ್ರಿಕೆಟಿಗ, ನಟ ಸಲೀಲ್‌ ತಾಯಿ ಶವ ಪತ್ತೆ, ಗಂಟಲು ಸೀಳಿ ಕೊಲೆ?

03:37 PM Oct 05, 2024 | Team Udayavani |

ಪುಣೆ: ಉತ್ತರ ಕನ್ನಡ ಮೂಲದ ಮಾಜಿ ಕ್ರಿಕೆಟ್‌ ಆಟಗಾರ ಸಲೀಲ್‌ ಅಂಕೋಲಾ ಅವರ ತಾಯಿಯ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಪುಣೆಯ ಫ್ಲ್ಯಾಟ್‌ ನಲ್ಲಿ ಶುಕ್ರವಾರ (ಅ.04) ಪತ್ತೆಯಾಗಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮಾಲಾ ಅಶೋಕ್‌ ಅಂಕೋಲಾ (77ವರ್ಷ) ಅವರ ಶವ ಡೆಕ್ಕನ್‌ ಜಿಮ್ಕಾನಾ ಪ್ರದೇಶದ ಪ್ರಭಾತ್‌ ರಸ್ತೆಯಲ್ಲಿರುವ ಫ್ಲ್ಯಾಟ್‌ ನಲ್ಲಿ ಪತ್ತೆಯಾಗಿದೆ. ಶುಕ್ರವಾರ ಮಧ್ಯಾಹ್ನ ಮನೆಕೆಲಸದಾಕೆ ಮನೆಗೆ ಬಂದು ಬಾಗಿಲಿನ ಬೆಲ್‌ ಮಾಡಿದರೂ ಯಾವ ಪ್ರತಿಕ್ರಿಯೆ ಬಾರದಿದ್ದಾಗ, ಸಂಬಂಧಿಕರಿಗೆ ವಿಷಯ ತಿಳಿಸಿದ್ದರು.

ಆ ಬಳಿಕ ಬಾಗಿಲು ತೆರೆದು ನೋಡಿದಾಗ ಗಂಟಲು ಸೀಳಿದ ಸ್ಥಿತಿಯಲ್ಲಿ ಮಾಲಾ ಅವರ ಶವ ನೆಲದ ಮೇಲೆ ಬಿದ್ದಿರುವುದು ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಸ್ವಯಂ ಆಗಿ ಗಂಟಲು ಸೀಳಿಕೊಂಡಂತಿದೆ. ಆದರೆ ನಾವು ಎಲ್ಲಾ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಡೆಪ್ಯುಟಿ ಕಮಿಷನರ್‌ ಆಫ್‌ ಪೊಲೀಸ್‌ ಸಂದೀಪ್‌ ಸಿಂಗ್‌ ಗಿಲ್‌ ತಿಳಿಸಿದ್ದಾರೆ.

ಮಾಲಾ ಅಂಕೋಲಾ ಅವರು ಕೆಲವು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಗಿಲ್‌ ಮಾಹಿತಿ ನೀಡಿದ್ದಾರೆ. ಸಲೀಲ್‌ ಅಂಕೋಲಾ ಅವರು 1989 ರಿಂದ 1997ರವರೆಗೆ ಒಂದು ಟೆಸ್ಟ್‌ ಹಾಗೂ 20 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಇವರು ಕೆಲವು ಸಿನಿಮಾ ಹಾಗೂ ಟಿವಿ ಸೀರಿಯಲ್‌ ಗಳಲ್ಲೂ ನಟಿಸಿದ್ದರು.

Advertisement

ಸಲೀಲ್‌ ಅಂಕೋಲಾ ಪ್ರಣೀತಾ ಬ್ಯಾನರ್ಜಿಯನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು. ವಿಪರೀತ ಕುಡಿತದ ಚಟದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಸಲೀಲ್‌ ಅವರನ್ನು ಪುಣೆಯ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಇದರ ಪರಿಣಾಮ ದಂಪತಿ 2011ರಲ್ಲಿ ವಿಚ್ಛೇದನ ಪಡೆದಿದ್ದರು. 2013ರಲ್ಲಿ ಪುಣೆಯ ಗೀತಾ ಸೊಸೈಟಿ ನಿವಾಸದಲ್ಲಿ ಪ್ರಣೀತಾ ನೇಣಿಗೆ ಶರಣಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next