Advertisement

WC23; ಫೈನಲ್ ಪಂದ್ಯ ಗೆಲ್ಲುವುದು ಸುಲಭವಲ್ಲ,ಆದರೆ..: ಟ್ಯಾರೋ ಕಾರ್ಡ್‌ ಭವಿಷ್ಯದಲ್ಲಿ ಏನಿದೆ?

11:07 AM Nov 19, 2023 | Team Udayavani |

ಮುಂಬೈ: ಕಳೆದ ಒಂದೂವರೆ ತಿಂಗಳಿನಿಂದ ನಡೆಯುತ್ತಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಇದೀಗ ಮುಕ್ತಾಯದ ಹಂತದಲ್ಲಿದೆ. ವಿಶ್ವ ಕ್ರಿಕೆಟ್ ನ ಎರಡು ದಿಗ್ಗಜ ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಕೂಟದಲ್ಲಿ ಆಡಿದ ಎಲ್ಲಾ ಹತ್ತು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಮತ್ತು ಸತತ ಎಂಟು ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ತಂಡಗಳು ಇಂದು ಕ್ರಿಕೆಟ್ ನ ಅತ್ಯುನ್ನತ ಪ್ರಶಸ್ತಿಗಾಗಿ ಸೆಣಸಾಡಲಿದೆ.

Advertisement

ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳ ಎದುರು ಫೈನಲ್ ಪಂದ್ಯ ನಡೆಯಲಿದೆ. 2011ರ ಬಳಿಕ ಮೊದಲ ಬಾರಿಗೆ ಫೈನಲ್ ತಲುಪಿರುವ ಭಾರತ ಕಪ್ ಗೆಲ್ಲಬಹುದೇ ಅಥವಾ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಮತ್ತೊಂದು ಬಾರಿ ಪ್ರಶಸ್ತಿ ಗೆಲ್ಲಬಹುದೇ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.

ಜ್ಯೋತಿಷಿ ಮತ್ತು ಟ್ಯಾರೋ ತಜ್ಞ ರೋಸಿ ಜಸ್ರೋಟಿಯಾ ಅವರು ಉಭಯ ತಂಡಗಳ ಟ್ಯಾರೋ ಕಾರ್ಡ್‌ ಗಳನ್ನು ಆಧರಿಸಿ ಇಂದಿನ ಆಟದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

“ಟ್ಯಾರೋ ರೀಡಿಂಗ್ ಪ್ರಕಾರ, ಇಂದು ಜಡ್ಜ್‌ಮೆಂಟ್ ಕಾರ್ಡ್ ಭಾರತಕ್ಕೆ ಬಂದಿದೆ, ಜಡ್ಜ್‌ಮೆಂಟ್ ಕಾರ್ಡ್ ಸಕಾರಾತ್ಮಕ ಕಾರ್ಡ್ ಆಗಿದೆ. ಆದರೆ ಏಕಪಕ್ಷೀಯವಾಗಿ ಪಂದ್ಯ ನಡೆಯುವುದಿಲ್ಲ ಎಂದು ಭವಿಷ್ಯ ನುಡಿದಿದೆ. ಭಾರತಕ್ಕೆ ಗೆಲ್ಲಲು ತುಂಬಾ ಸುಲಭವಿಲ್ಲ, ಆಸ್ಟ್ರೇಲಿಯಾ ಸಮಾನ ಸ್ಪರ್ಧಿಯಾಗಲಿದೆ. ಭಾರತಕ್ಕೆ ಈ ಪಂದ್ಯವು ಹಾವಿನಿಂದ ‘ನಾಗಮಣಿ’ಯನ್ನು ಎಳೆದಂತೆ, ಈ ಬಾರಿ ಭಾರತಕ್ಕೆ ಗೆಲ್ಲುವ ಸಾಧ್ಯತೆಗಳು ಹೆಚ್ಚು. ‘ನಾಗಮಣಿ’ ಸಿಗುವುದು ಖಚಿತ” ಎಂದು ರೋಸಿ ಜಸ್ರೋಟಿಯಾ ಹೇಳುತ್ತಾರೆ.

ಕಳೆದ ಬುಧವಾರ ಮುಂಬೈನಲ್ಲಿ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿ ಭಾರತವು ಫೈನಲ್ ಪ್ರವೇಶ ಮಾಡಿದ್ದರೆ, ಗುರುವಾರ ಕೋಲ್ಕತ್ತಾದಲ್ಲಿ ನಡೆದ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಆಸ್ಟ್ರೇಲಿಯಾ ಅಂತಿಮ ಸುತ್ತು ತಲುಪಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next