Advertisement

ಮೈಸೂರು ವಾರಿಯರ್ಸ್‌ನಿಂದ ಕ್ರಿಕೆಟ್‌ ಟ್ಯಾಲಂಟ್‌ ಹಂಟ್‌

09:23 PM Jul 20, 2019 | Team Udayavani |

ಮೈಸೂರು: 2019ರ ಕೆಪಿಎಲ್‌ಗೆ ಮೈಸೂರು ವಾರಿಯರ್ಸ್‌ ಮಾಲೀಕರಾಗಿರುವ ಎನ್‌.ಆರ್‌. ಸಮೂಹ ಹಮ್ಮಿಕೊಂಡಿದ್ದ ಕ್ರಿಕೆಟ್‌ ಪ್ರತಿಭಾನ್ವೇಷಣೆಯ (ಟ್ಯಾಲಂಟ್‌ ಹಂಟ್‌) ಆರನೇ ಆವೃತ್ತಿಯಲ್ಲಿ ಟೂ ಲೆಗ್ಸ್‌ ಆಟಗಾರರಿಂದ 40 ರಿಂದ 50 ಜನ ಆಯ್ಕೆಯಾಗಿದ್ದು, 23ರಂದು ಮಂಡ್ಯದ ಪಿಇಟಿ ಮೈದಾನದಲ್ಲಿ ನಡೆಯಲಿರುವ ಟ್ರಯಲ್‌ ಪಂದ್ಯಾವಳಿಯಲ್ಲಿ ಆಟಗಾರರು ಭಾಗವಹಿಸಲಿದ್ದಾರೆ.

Advertisement

ಬೆಂಗಳೂರಿನ ಯಲಹಂಕದ ಜಸ್ಟ್‌ ಕ್ರಿಕೆಟ್‌ ಅಕಾಡೆಮಿ ಹಾಗೂ ಮೈಸೂರಿನ ಎಸ್‌ಡಿಎನ್‌ಆರ್‌ ಕ್ರೀಡಾಂಗಣದಲ್ಲಿ ಪ್ರತಿಭಾನ್ವೇಷಣೆಯ ಪಂದ್ಯಗಳು ನಡೆದವು. ಮೈಸೂರಿನಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಸುಮಾರು 215 ಉತ್ಸಾಹಿ ಆಟಗಾರರು ಭಾಗವಹಿಸಿದ್ದರು. ಅವರಲ್ಲಿ 35 ಬ್ಯಾಟ್ಸ್‌ಮನ್‌ಗಳು, 58 ಜನ ಆಲ್‌ರೌಂಡರ್‌ಗಳು 32ಜನ ಸ್ಪಿನರ್‌ಗಳು, 85 ಜನ ಮತ್ತು 5 ಜನ ವಿಕೆಟ್‌ ಕೀಪರ್‌ಗಳು ಇದ್ದರು.

ಯಲಹಂಕದ ಜಸ್ಟ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ನಡೆದ ಆಯ್ಕೆ ಪಂದ್ಯಾವಳಿಯಲ್ಲಿ 300 ಯುವ, ಉತ್ಸಾಹಿ ಕ್ರಿಕೆಟ್‌ ಆಟಗಾರರು ಸ್ಪರ್ಧೆಗಿಳಿದು ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದ್ದರು. ಅವರಲ್ಲಿ 70 ಜನ ಮಧ್ಯಮ ವೇಗಿ ಬೌಲರ್‌ಗಳು, 50 ಜನ ಸ್ಪಿನರ್‌ಗಳು, 75 ಬ್ಯಾಟ್ಸ್‌ಮನ್‌ಗಳು, 80 ಜನ ಆಲ್‌ ರೌಂಡರ್‌ಗಳು ಮತ್ತು 25 ಜನ ವಿಕೆಟ್‌ ಕೀಪರ್‌ಗಳು ಇದ್ದರು.

ಈ ಪೈಕಿ ಟೂ ಲೆಗ್ಸ್‌ ಆಟಗಾರರಿಂದ 40-50ಜನ ಆಯ್ಕೆಯಾಗಿದ್ದು, ಇದೇ 23ರಂದು ಮಂಡ್ಯದ ಪಿಇಟಿ ಮೈದಾನದಲ್ಲಿ ನಡೆಯಲಿರುವ ಟ್ರಯಲ್‌ ಪಂದ್ಯಾವಳಿಯಲ್ಲಿ ಆಟಗಾರರು ಭಾಗವಹಿಸಲಿದ್ದಾರೆ. ಆಯ್ಕೆಯಾಗುವ ಆಟಗಾರರು ಸೈಕಲ್‌ ಪ್ಯೂರ್‌ ಅಗರಬತ್ತೀಸ್‌ ಪ್ರಾಯೋಜಕತ್ವದಲ್ಲಿ ನಡೆಯಲಿರುವ 2019ರ ಕೆಪಿಎಲ್‌ನಲ್ಲಿ ಆಡುವ ಅವಕಾಶ ಪಡೆಯುತ್ತಾರೆ.

ಪ್ರತಿಭಾನ್ವೇಷಣೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಮೈಸೂರು ವಾರಿಯರ್ಸ್‌ನ ಮಾಲೀಕ ಅರ್ಜುನ್‌ ರಂಗ, ಪ್ರತಿಭಾನ್ವೇಷಣೆಗೆ ಕರ್ನಾಟಕದ ಕ್ರಿಕೆಟ್‌ ಸಮುದಾಯದಿಂದ ಪ್ರತಿವರ್ಷವೂ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಇಷ್ಟು ದೊಡ್ಡ ಸಂಖ್ಯೆಯ ಕ್ರಿಕೆಟ್‌ ಪ್ರತಿಭೆಗಳ ಉತ್ಸಾಹ ಮತ್ತು ಶ್ರದ್ಧೆ ಕಂಡು ನಮಗೆ ಸಂತೋಷವಾಯಿತು.

Advertisement

ಈ ಪ್ರತಿಭೆಗಳಲ್ಲಿ ಕೆಲವರನ್ನೇ ಆಯ್ಕೆ ಮಾಡುವುದು ಕಷ್ಟವಾದರೂ, ಈ ಪ್ರಕ್ರಿಯೆ ಯಾವಾಗಲೂ ಮೈಸೂರು ವಾರಿಯರ್ಸ್‌ ತಂಡಕ್ಕೆ ಅದ್ಭುತ ಆಟಗಾರರನ್ನು ನೀಡಿದೆ. ಇಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಆಯ್ಕೆಯಾಗುವ ಆಟಗಾರರು 2019ರ ಕೆಪಿಎಲ್‌ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next