Advertisement

Cricket: ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20: ಕರ್ನಾಟಕವನ್ನು ಬಗ್ಗುಬಡಿದ ಬರೋಡ

02:06 AM Dec 04, 2024 | Team Udayavani |

ಇಂದೋರ್‌: ಬರೋಡ ಸವಾಲನ್ನು ಮೆಟ್ಟಿ ನಿಲ್ಲುವಲ್ಲಿ ವಿಫ‌ಲವಾದ ಕರ್ನಾಟಕ ತಂಡದ “ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ’ ಟಿ20 ಪಂದ್ಯಾವಳಿಯ ನಾಕೌಟ್‌ ಸುತ್ತಿನ ಹಾದಿ ಅಧಿಕೃತವಾಗಿ ಅಂತ್ಯ ಕಂಡಿದೆ. ಮಂಗಳವಾರ ನಡೆದ “ಬಿ’ ವಿಭಾಗದ ಮುಖಾಮುಖೀಯಲ್ಲಿ ಬರೋಡ 4 ವಿಕೆಟ್‌ಗಳಿಂದ ಮಾಯಾಂಕ್‌ ಅಗರ್ವಾಲ್‌ ಪಡೆಯನ್ನು ಮಣಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಕರ್ನಾಟಕ 8 ವಿಕೆಟಿಗೆ 169 ರನ್‌ ಗಳಿಸಿದರೆ, ಬರೋಡ 18.5 ಓವರ್‌ಗಳಲ್ಲಿ 6 ವಿಕೆಟಿಗೆ 172 ರನ್‌ ಬಾರಿಸಿ ಗೆದ್ದು ಬಂದಿತು.
ಇದು 6 ಪಂದ್ಯಗಳಲ್ಲಿ ಕರ್ನಾಟಕಕ್ಕೆ ಎದುರಾದ 3ನೇ ಸೋಲು. ಅಂಕ 12ಕ್ಕೆ ಸೀಮಿತಗೊಂಡಿದೆ. ಇನ್ನೊಂದೆಡೆ ಸೌರಾಷ್ಟ್ರ, ಗುಜರಾತ್‌ ಮತ್ತು ಬರೋಡ 6 ಪಂದ್ಯಗಳಲ್ಲಿ ಐದನ್ನು ಗೆದ್ದು 20 ಅಂಕ ಗಳಿಸಿವೆ. ಎಲ್ಲ ತಂಡಗಳಿಗೂ ಇನ್ನೊಂದು ಲೀಗ್‌ ಪಂದ್ಯ ಬಾಕಿ ಇದೆ. ಕರ್ನಾಟಕ ತಂಡ ಗುರುವಾರ ಗುಜರಾತ್‌ ವಿರುದ್ಧ ಆಡಲಿದೆ. ಇದನ್ನು ಗೆದ್ದರೂ ಅಗರ್ವಾಲ್‌ ಪಡೆಗೆ ಯಾವುದೇ ಲಾಭವಾಗದು.

ಅಭಿನವ್‌ ಅರ್ಧ ಶತಕ
ಕರ್ನಾಟಕ ಅಬ್ಬರದ ಆರಂಭ ಕಂಡಿ ತಾದರೂ ಮಾಯಾಂಕ್‌ ಅಗರ್ವಾಲ್‌ (1), ಮನೀಷ್‌ ಪಾಂಡೆ (10) ಮತ್ತು ಕೃಷ್ಣನ್‌ ಶ್ರೀಜಿತ್‌ (22) 3 ಓವರ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ಆಗ 34 ರನ್‌ ಒಟ್ಟುಗೂಡಿತ್ತು. ಶ್ರೇಯಸ್‌ ಗೋಪಾಲ್‌ (18) ಕೂಡ ಹೆಚ್ಚು ವೇಳೆ ನಿಲ್ಲಲಿಲ್ಲ.

ಅಭಿನವ್‌ ಮನೋಹರ್‌ ಅವರ ಸಿಡಿಲಬ್ಬ ರದ ಬ್ಯಾಟಿಂಗ್‌ನಿಂದಾಗಿ ಕರ್ನಾ ಟಕದ ಇನ್ನಿಂಗ್ಸ್‌ ಚೇತರಿಕೆ ಕಂಡಿತು. ಅಭಿನವ್‌ 34 ಎಸೆತಗಳಿಂದ 56 ರನ್‌ ಮಾಡಿ ಅಜೇಯರಾಗಿ ಉಳಿದರು. ಇದು 6 ಪ್ರಚಂಡ ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಸ್ಮರಣ್‌ ರವಿಚಂದ್ರನ್‌ 38 ರನ್‌ ಬಾರಿಸಿ ದರು. ಬರೋಡ ಪರ ನಾಯಕ ಕೃಣಾಲ್‌ ಪಾಂಡ್ಯ, ಅತೀತ್‌ ಶೇಠ್‌ ತಲಾ 2 ವಿಕೆಟ್‌ ಕೆಡವಿದರು.

ಪಾಂಡ್ಯ ಬ್ರದರ್ ಗೋಲ್ಡನ್‌ ಡಕ್‌
ಚೇಸಿಂಗ್‌ ವೇಳೆ ಬರೋಡದ ಆರಂಭ ಕಾರ ಶಾಶ್ವತ್‌ ರಾವತ್‌ 63, ಭಾನು ಪನಿಯಾ 42 ರನ್‌ ಕೊಡುಗೆ ಸಲ್ಲಿಸಿದರು. ಪಾಂಡ್ಯ ಸೋದರರಿಬ್ಬರೂ ಗೋಲ್ಡನ್‌ ಡಕ್‌ ಅವ ಮಾನಕ್ಕೆ ಸಿಲುಕಿದರು. ಇವರನ್ನು ಶ್ರೇಯಸ್‌ ಗೋಪಾಲ್‌ ಸತತ ಎಸೆತಗಳಲ್ಲಿ ಕೆಡವಿದರು. 13ನೇ ಓವರ್‌ನಲ್ಲಿ 117 ರನ್ನಿಗೆ ಬರೋಡದ 5 ವಿಕೆಟ್‌ ಉರುಳಿಸಿದಾಗ ಕರ್ನಾಟಕಕ್ಕೆ ಗೆಲುವಿನ ಅವಕಾಶವಿತ್ತು. ಆದರೆ ಶಿವಾಲಿಕ್‌ ಶರ್ಮ (22) ಮತ್ತು ವಿಷ್ಣು ಸೋಲಂಕಿ (ಔಟಾಗದೆ 28) ಸೇರಿಕೊಂಡು ಬರೋಡವನ್ನು ದಡ ಸೇರಿಸಿದರು.

Advertisement

ಉರ್ವಿಲ್‌ ಮತ್ತೆ ಸಿಡಿಲಬ್ಬರದ ಶತಕ
ಗುಜರಾತ್‌ ತಂಡದ ಬಿಗ್‌ ಹಿಟ್ಟರ್‌ ಉರ್ವಿಲ್‌ ಪಟೇಲ್‌ “ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ’ ಪಂದ್ಯಾ ವಳಿಯಲ್ಲಿ ಮತ್ತೂಂದು ಸಿಡಿಲಬ್ಬರದ ಶತಕ ಬಾರಿಸಿದ್ದಾರೆ. ಕಳೆದ ವಾರ ತ್ರಿಪುರ ವಿರುದ್ಧ ಕೇವಲ 28 ಎಸೆತಗಳಲ್ಲಿ ಸೆಂಚುರಿ ಬಾರಿಸಿ ಭಾರತೀಯ ದಾಖಲೆ ಬರೆದು ಸುದ್ದಿಯಾಗಿದ್ದ ಪಟೇಲ್‌, ಮಂಗಳವಾರ ಉತ್ತರಾಖಂಡದ ವಿರುದ್ಧ 36 ಎಸೆತಗಳಲ್ಲಿ ಸೆಂಚುರಿ ಬಾರಿಸಿ ಮೆರೆದರು. ಇದರೊಂದಿಗೆ 40 ಎಸೆತಗಳೊಳಗೆ 2 ಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗನೆಂಬ ದಾಖಲೆ ನಿರ್ಮಿಸಿದರು.

ಆರಂಭಿಕನಾಗಿ ಇಳಿದ ವಿಕೆಟ್‌ ಕೀಪರ್‌-ಬ್ಯಾಟರ್‌ ಉರ್ವಿಲ್‌ ಪಟೇಲ್‌ ಚೇಸಿಂಗ್‌ ವೇಳೆ ಅಬ್ಬರಿಸಿದರು. 41 ಎಸೆತಗಳಿಂದ 115 ರನ್‌ ಬಾರಿಸಿ ಅಜೇಯ ರಾಗಿ ಉಳಿದರು. ಸಿಡಿಸಿದ್ದು 11 ಸಿಕ್ಸರ್‌ ಹಾಗೂ 8 ಬೌಂಡರಿ. ಉರ್ವಿಲ್‌ ಸಾಹಸದಿಂದ ಗುಜರಾತ್‌ ಈ ಪಂದ್ಯ ವನ್ನು 41 ಎಸೆತ ಬಾಕಿ ಇರುವಂತೆಯೇ 8 ವಿಕೆಟ್‌ಗಳಿಂದ ಜಯಿಸಿತು. ಉತ್ತರಾಖಂಡ 7 ವಿಕೆಟಿಗೆ 182 ರನ್‌ ಬಾರಿಸಿದರೆ, ಗುಜರಾತ್‌ 13.1 ಓವರ್‌ಗಳಲ್ಲಿ 2 ವಿಕೆಟಿಗೆ 185 ರನ್‌ ಮಾಡಿತು.

ಸಂಕ್ಷಿಪ್ತ ಸ್ಕೋರ್‌:
ಕರ್ನಾಟಕ-8 ವಿಕೆಟಿಗೆ 169 (ಅಭಿನವ್‌ ಔಟಾಗದೆ 56, ಸ್ಮರಣ್‌ 38, ಶ್ರೀಜಿತ್‌ 22, ಕೃಣಾಲ್‌ 19ಕ್ಕೆ 2, ಅತೀತ್‌ 45ಕ್ಕೆ 2). ಬರೋಡ-18.5 ಓವರ್‌ಗಳಲ್ಲಿ 6 ವಿಕೆಟಿಗೆ 172 (ರಾವತ್‌ 63, ಭಾನು 42, ಸೋಲಂಕಿ ಔಟಾಗದೆ 28, ಶ್ರೇಯಸ್‌ ಗೋಪಾಲ್‌ 19ಕ್ಕೆ 4).

ಪಂದ್ಯಶ್ರೇಷ್ಠ: ಶಾಶ್ವತ್‌ ರಾವತ್‌.

Advertisement

Udayavani is now on Telegram. Click here to join our channel and stay updated with the latest news.

Next