Advertisement

ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕ್ರೀಡಾಂಗಣ ಮೇಲ್ಛಾವಣಿ ನಿರ್ಮಾಣ ಕಾರ್ಯ ಚುರುಕು

03:13 PM Jan 18, 2021 | Team Udayavani |

ಗದಗ: ಕ್ರಿಕೆಟ್‌ ನೆಟ್‌ ಪ್ರ್ಯಾಕ್ಟೀಸ್‌ ಪಿಚ್‌, ಒಳಂಗಣ ಕ್ರೀಡಾಂಗಣ, ಕ್ರೀಡಾ ವಸತಿ ಶಾಲೆಗಳಿಂದಾಗಿ ಅವಳಿ ನಗರ ಕ್ರೀಡಾ ನಗರಿಯಾಗುವತ್ತ ದಾಪುಗಾಲಿಡುತ್ತಿದೆ. ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಇಲ್ಲಿನ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗೆ ಟೆನ್ಸ್ವೆಲ್‌ ಮೇಲ್ಛಾವಣಿ ನಿರ್ಮಾಣ ಕಾರ್ಯ ಮತ್ತೆ ಚುರುಕು ಪಡೆದಿದೆ. ಎಲ್ಲವೂ ಅಂದುಕೊಂಡಂತೆ
ಆದರೆ ಈ ಬಾರಿಯ ಗಣರಾಜ್ಯೋತ್ಸವದ ವೇಳೆಗೆ ಛಾವಣಿ ಸಿದ್ಧವಾಗಲಿದೆ.

Advertisement

ನಗರದ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣವು ಸುಮಾರು 8.37 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಕ್ರೀಡಾಂಗಣದಲ್ಲಿ 4*4
ಮೀಟರ್‌ ಸಿಂಥಟಿಕ್‌ ಟ್ರ್ಯಾಕ್‌, ಎತ್ತರ ಮತ್ತು ಉದ್ದ ಜಿಗಿತಕ್ಕೆ ಅನುಕೂಲವಾಗುವಂತೆ ಸೌಕರ್ಯ ಕಲ್ಪಿಸಲಾಗಿದೆ. ಅದರೊಂದಿಗೆ ಒಳ ಭಾಗದಲ್ಲಿ ಫುಟ್‌ಬಾಲ್‌ ಸೇರಿದಂತೆ ವಿವಿಧ ಆಟಗಳಿಗೆ ಮೈದಾನ ಹೇಳಿ ಮಾಡಿಸಿದಂತಿದೆ. ಜೊತೆಗೆ ಸುಸಜ್ಜಿತವಾದ
ಹೊರಾಂಗಣ ಮತ್ತು ಒಳಾಂಗಣವನ್ನು ಹೊಂದಿದೆ.

ಇಂತಹ ಸುಸಜ್ಜಿತ ಕ್ರೀಡಾಂಗಣ ಅಥ್ಲೆಟಿಕ್‌ ಸೇರಿದಂತೆ ವಿವಿಧ ಕ್ರೀಡೆಗಳ ರಾಜ್ಯಮಟ್ಟದ ಪಂದ್ಯಾವಳಿಗೂ ಹೇಳಿ ಮಾಡಿಸಿದಂತಿದೆ. ಆದರೆ, ಹೊರಾಂಗಣದ ಪ್ರೇಕ್ಷಕರ ಗ್ಯಾಲರಿಗೆ ಕೊರತೆಯಾಗಿದ್ದ ಮೇಲ್ಛಾವಣಿ ನಿರ್ಮಾಣ ಕಾರ್ಯ ಪುನಾರಂಭಗೊಂಡಿದ್ದು,
ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.

ಇದನ್ನೂ ಓದಿ:ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಸ್ವಯಂಘೋಷಿತ ಮುಖ್ಯಮಂತ್ರಿ: ಈಶ್ವರಪ್ಪ ವ್ಯಂಗ್ಯ

ಹೈಟೆಕ್‌ ಪ್ರೇಕ್ಷಕರ ಗ್ಯಾಲರಿ ನಿರ್ಮಾಣ: ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯಲ್ಲಿ 8 ಬ್ಲಾಕ್‌ಗಳಿದ್ದು, 7 ಮೆಟ್ಟಿಲುಗಳಿಗೆ ನೆರಳು ಒದಗಿಸಲು ಟೆನ್ಸೆçಲ್‌ ಮುಂಬ್ರೇನ್‌ ಮೇಲ್ಛಾವಣಿ ನಿರ್ಮಿಸಲಾಗುತ್ತಿದೆ. ಪ್ರತಿ ಬ್ಲಾಕ್‌ನಲ್ಲಿ 5-6 ಮೀಟರ್‌ ಎತ್ತರ 300 ಅಡಿ ಉದ್ದ, 7- 8 ಮೀಟರ್‌ ಅಗಲ ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತಿದೆ. ಎಷ್ಟೇ ಬಿಸಿಲಿನ ಉಷ್ಣಾಂಶವಿದ್ದರೂ ಪ್ರೇಕ್ಷಕರ ಗ್ಯಾಲರಿಯಲ್ಲಿ
ಕುಳಿತವರಿಗೆ ತಂಪಾದ ನೆರಳು ಕಲ್ಪಿಸುತ್ತದೆ. ಅದರಂತೆ ಬಿರುಗಾಳಿ ಸಹಿತ ಧಾರಾಕಾರ ಮಳೆಯಾದರೂ ಛಾವಣಿಗೆ ಧಕ್ಕೆಯಾಗುವುದಿಲ್ಲ. ಸುದೀರ್ಘ‌ ಕಾಲ ಬಾಳಿಕೆ ಬರುತ್ತದೆ ಎಂಬುದು ಟೈನ್ಸೆçಲ್‌ ನಿರ್ಮಾಣದ ಗುತ್ತಿಗೆ ಸಂಸ್ಥೆಯ ಅಧಿಕಾರಿಗಳ ಮಾತು. ಕ್ರೀಡಾಂಗಣದ 8 ಬ್ಲಾಕ್‌ಗಳಲ್ಲಿ ವೇದಿಕೆ ಬ್ಲಾಕ್‌ನ ಮೇಲ್ಛಾವಣಿಯನ್ನು ಅತ್ಯಾಧುನಿಕ ಹಾಗೂ ಅತ್ಯಂತ ಆಕರ್ಷಕವಾಗಿ ನಿರ್ಮಿಸಲಾಗುತ್ತದೆ. ಈವರೆಗೆ ನಾಲ್ಕು ಬ್ಲಾಕ್‌ಗಳ ಮೇಲ್ಛಾವಣಿ ನಿರ್ಮಾಣ ಪೂರ್ಣಗೊಂಡಿದೆ.

Advertisement

ಕ್ರೀಡಾಂಗಣದ ವೇದಿಕೆ ಗ್ಯಾಲರಿಯನ್ನು ಅತ್ಯಾಕರ್ಷಕವಾಗಿ ಮೇಲ್ಛಾವಣಿ ನಿರ್ಮಾಣಕ್ಕೆ ಉದ್ದೇಶಿಸಿದೆ. ಅದಕ್ಕಾಗಿ ಗುತ್ತಿಗೆ ಸಂಸ್ಥೆ ಈಗಾಗಲೇ ಸಿದ್ಧಪಡಿಸಿದ್ದ ವಿನ್ಯಾಸವನ್ನು ಬದಲಾಯಿಸಿದೆ. ಒಂದು ವಾರದಲ್ಲಿ ಪೂರ್ಣಗೊಳ್ಳಲಿದೆ. ಅದರೊಂದಿಗೆ ಇನ್ನುಳಿದ
ಬ್ಲಾಕ್‌ಗಳನ್ನೂ ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎನ್ನುತ್ತಾರೆ ಕಾಮಗಾರಿ ಸೂಪರ್‌ವೈಸರ್‌ ಮನೋಜ್‌.

ಅನುದಾನ ಕೊರತೆಯಿಂದ ವಿಳಂಬ: ಜಿಲ್ಲಾ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯಲ್ಲಿರುವ ಏಳು ಬ್ಲಾಕ್‌ಗಳಿಗೆ ಮೇಲ್ಛಾವಣಿ ಅಳವಡಿಸಲು ಲೋಕೋಪಯೋಗಿ ಇಲಾಖೆಯಿಂದ ಸುಮಾರು 7.80 ಕೋಟಿ ರೂ. ಮೊತ್ತದಲ್ಲಿ ಅಂದಾಜು ಪಟ್ಟಿ ತಯಾರಿಸಿತ್ತು. ಅದರಂತೆ 2016ರಲ್ಲಿ ಗೋವಾ ಮೂಲದ ಸಂಸ್ಥೆಗೆ ಗುತ್ತಿಗೆ ನೀಡಿ, ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ, ಸರಕಾರದಿಂದ
ಅನುದಾನ ಬಿಡುಗಡೆಯಾಗದ ಕಾರಣ ಕಾಮಗಾರಿ ಸುಮಾರು ಮೂರು ವರ್ಷಗಳ ಕಾಲ ವಿಳಂಬವಾಗಿದೆ. ಇದೀಗ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪುನಾರಂಭಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next