Advertisement

ಕ್ರಿಕೆಟ್‌ ಭದ್ರತಾ ವ್ಯವಸ್ಥೆ ಪುನರ್‌ ಪರಿಶೀಲನೆ: ಐಸಿಸಿ

11:48 AM May 24, 2017 | |

ಲಂಡನ್‌: ಮ್ಯಾಂಚೆಸ್ಟರ್‌ನಲ್ಲಿ ನಡೆದ ಆತ್ಮಾಹುತಿ ಬಾಂಬರ್‌ ದಾಳಿಯ ಬಳಿಕ ಚಾಂಪಿಯನ್ಸ್‌ ಟ್ರೋಫಿ ಹಾಗೂ ವನಿತಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಭದ್ರತಾ ವ್ಯವಸ್ಥೆಯನ್ನು ಪುನರ್‌ ಪರಿಶೀಲನೆಗೆ ಒಳಪಡಿಸಲಾಗುವುದು ಎಂದು ಐಸಿಸಿ ತಿಳಿಸಿದೆ. ಈ ದಾಳಿಯ ವೇಳೆ 22 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

Advertisement

ಚಾಂಪಿಯನ್ಸ್‌ ಟ್ರೋಫಿ ಜೂ. ಒಂದರಿಂದ 18ರ ತನಕ ಲಂಡನ್‌, ಬರ್ಮಿಂಗಂ ಮತ್ತು ಕಾರ್ಡಿಫ್ನಲ್ಲಿ ನಡೆಯಲಿದೆ. ವನಿತಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಜೂ. 24ರಿಂದ ಜು. 23ರ ತನಕ ಇಂಗ್ಲೆಂಡ್‌ ಆತಿಥ್ಯದಲ್ಲೇ ಸಾಗಲಿದೆ.
 
“ನಾವು ಪಂದ್ಯಾವಳಿಯ ಭದ್ರತಾ ನಿರ್ದೇಶಕರ ಸಲಹೆಯನ್ನು ಸತತವಾಗಿ ಗಮನಿಸುತ್ತಿದ್ದು, ಇಸಿಬಿ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ಎರಡೂ ಕೂಟಗಳು ಯಾವುದೇ ಆತಂಕವಿಲ್ಲದೆ ನಡೆಯುವ ನಿಟ್ಟಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಪುನರ್‌ ಪರಿಶೀಲನೆಗೆ ಒಳಪಡಿಸಲಾಗುವುದು’ ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಜತೆಗೆ ಸೋಮವಾರದ ದಾಳಿಯಲ್ಲಿ ಮೃತ ಪಟ್ಟವರಿಗೆ ತನ್ನ ಸಂತಾಪವನ್ನು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next