ನೀವು ಇಲ್ಲಿಯವರೆಗೆ ಅನೇಕ ಕ್ರಿಕೆಟ್ ಪಂದ್ಯಗಳನ್ನು ನೋಡಿರಬಹುದು, ಆದರೆ ತಂಡದ ಆಟಗಾರರೆಲ್ಲರೂ ಧೋತಿ ಧರಿಸಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಯಾವುದೇ ಪಂದ್ಯವನ್ನು ನೀವು ನೋಡಿದ್ದೀರಾ? ಒಂದು ವೇಳೆ ಇಲ್ಲ ಎಂದಾದಲ್ಲಿ ಇಲ್ಲಿದೆ ನೋಡಿ. ಅಷ್ಟುಮಾತ್ರವಲ್ಲೇ ಇಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ಕಾಮೆಂಟರಿಯನ್ನು ಸಂಸ್ಕೃತದಲ್ಲಿ ಮಾಡಲಾಗಿದೆ.
ಅಂದಹಾಗೆ ಇದಕ್ಕೆ ಒಂದು ಕಾರಣವಿದೆ.. ಈ ಪಂದ್ಯ ನಡೆದಿರುವುದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಇಲ್ಲಿನ ಸಂಸ್ಕೃತಿ ಬಚಾವೋ ಸಂಘ ಆಯೋಜಿಸಿದ್ದು ಆಟಗಾರರು ‘ಧೋತಿ’ ಮತ್ತು ‘ಕುರ್ತಾ’ ಧರಿಸಿ ಮೈದಾನಕ್ಕೆ ಪ್ರವೇಶಿಸಿದರು. ಈ ಪಂದ್ಯದಲ್ಲಿ ಕಾಮೆಂಟರಿ ಕೂಡ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಇರಲಿಲ್ಲ ಬದಲಾಗಿ ಸಂಸ್ಕೃತದಲ್ಲಿತ್ತು. ಆಟಗಾರರು ಧೋತಿ ಮತ್ತು ಕುರ್ತಾ ಧರಿಸಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದರು.
ಶುಕ್ರವಾರದಿಂದ ಈ ಕ್ರಿಕೆಟ್ ಪಂದ್ಯಾಟ ಆರಂಭವಾಗಿದ್ದು. ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿವೆ. ವಿಶೇಷವೆಂದರೆ ಈ ಪಂದ್ಯಾವಳಿಯಲ್ಲಿ ವಿಜೇತರಾದ ತಂಡದ ಸದಸ್ಯರನ್ನು ಸಂಸ್ಕೃತಿ ಬಚಾವೋ ಸಂಘ ಅಯೋಧ್ಯೆ ದರ್ಶನಕ್ಕೆ ಕರೆದೊಯ್ಯುಲಿದೆಯಂತೆ.
ಇದನ್ನೂ ಓದಿ: Ramanagara; ಡೈರಿ ಕಾರ್ಯದರ್ಶಿಯ ಭ್ರಷ್ಟಾಚಾರ ವಿರೋಧಿಸಿ ಜೆಡಿಎಸ್ ಪ್ರತಿಭಟನೆ