Advertisement

Cricket; ಈಗ ದ್ರಾವಿಡ್‌-ಸೆಹವಾಗ್‌ ಪುತ್ರರ ಸರದಿ

11:03 PM Dec 11, 2023 | Team Udayavani |

ವಿಜಯವಾಡ: ಭರ್ತಿ ಒಂದು ದಶಕದ ಬಳಿಕ ಭಾರತದ ಕ್ರಿಕೆಟ್‌ ಸ್ಕೋರ್‌ಕಾರ್ಡ್‌ ನಲ್ಲಿ ದ್ರಾವಿಡ್‌ ಮತ್ತು ಸೆಹವಾಗ್‌ ಹೆಸರು ಕಂಡುಬಂದಿದೆ. ಆದರೆ ಇದು ಸೀನಿಯರ್‌ಗಳದ್ದಲ್ಲ, ಜೂನಿಯರ್‌ಗಳದ್ದು!

Advertisement

ಸೋಮವಾರ ಇಲ್ಲಿ ಆರಂಭಗೊಂಡ “ವಿಜಯ್‌ ಮರ್ಚಂಟ್‌ ಟ್ರೋಫಿ’ ಅಂಡರ್‌-16 ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಕರ್ನಾಟಕ-ದಿಲ್ಲಿ ತಂಡಗಳು ಮುಖಾಮುಖಿಯಾಗಿವೆ. ಈ ತ್ರಿದಿನ ಪಂದ್ಯದಲ್ಲಿ ರಾಹುಲ್‌ ದ್ರಾವಿಡ್‌ ಮತ್ತು ವೀರೇಂದ್ರ ಸೆಹವಾಗ್‌ ಅವರ ಪುತ್ರರು ಆಡಲಿಳಿದಿದ್ದಾರೆ.

ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವವರು ರಾಹುಲ್‌ ದ್ರಾವಿಡ್‌ ಅವರ ಪುತ್ರ ಅನ್ವಯ್‌ ದ್ರಾವಿಡ್‌. ಇನ್ನೊಂದೆಡೆ ವೀರೇಂದ್ರ ಸೆಹವಾಗ್‌ ಪುತ್ರ ಆರ್ಯವೀರ್‌ ಸೆಹವಾಗ್‌ ದಿಲ್ಲಿ ತಂಡದ ಇನ್ನಿಂಗ್ಸ್‌ ಆರಂಭಿಸಿದರು.
ಮೊದಲ ದಿನದಾಟದಲ್ಲಿ 5ನೇ ಕ್ರಮಾಂಕದಲ್ಲಿ ಆಡಲಿಳಿದ ಜೂನಿಯರ್‌ ದ್ರಾವಿಡ್‌ ಖಾತೆ ತೆರೆಯದೆ ಔಟಾದರೆ, ಜೂನಿಯರ್‌ ಸೆಹವಾಗ್‌ 50 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಅನ್ವಯ್‌ ಅವರನ್ನು ದಿಲ್ಲಿಯ ಯಶಸ್ವಿ ಬೌಲರ್‌ ಆಯುಷ್‌ ಲಾಕ್ರಾ 2ನೇ ಎಸೆತದಲ್ಲೇ ಬೌಲ್ಡ್‌ ಮಾಡಿದರು.

ಮೊದಲು ಬ್ಯಾಟಿಂಗ್‌ ನಡೆಸಿದ ಕರ್ನಾಟಕ 144ಕ್ಕೆ ಆಲೌಟಾಗಿದ್ದು, ದಿಲ್ಲಿ ಒಂದು ವಿಕೆಟಿಗೆ 107 ರನ್‌ ಗಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next