Advertisement

Morne Morkel: ಟೀಮ್‌ ಇಂಡಿಯಾದ ನೂತನ ಬೌಲಿಂಗ್‌ ಕೋಚ್‌ ಆಗಿ ಮಾರ್ನೆ ಮಾರ್ಕೆಲ್‌ ನೇಮಕ

04:44 PM Aug 14, 2024 | Team Udayavani |

ನವದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಾರ್ನೆ ಮಾರ್ಕೆಲ್‌(Morne Morkel) ಟೀಮ್‌ ಇಂಡಿಯಾದ (Team India) ನೂತನ ಬೌಲಿಂಗ್‌ ಕೋಚ್‌ ಆಗಿ ನೇಮಕವಾಗಿದ್ದಾರೆ ಎಂದು ʼಪಿಟಿಐʼ ವರದಿ ಮಾಡಿದೆ.

Advertisement

ಗೌತಮ್‌ ಗಂಭೀರ್‌ (Gautam Gambhir) ಟೀಮ್‌ ಇಂಡಿಯಾದ ಹಿರಿಯರ ತಂಡದ ಮುಖ್ಯ ಕೋಚ್‌ ಆದ ಬಳಿಕ,  ಸಹಾಯಕ ಕೋಚ್‌ಗಳಾಗಿ ಅಭಿಷೇಕ್‌ ನಾಯರ್‌ ಮತ್ತು ರಯಾನ್ ಟೆನ್‌ ಡೆಷ್ಕಾಟೆ ಇದ್ದರು. ಇಬ್ಬರು ಶ್ರೀಲಂಕಾ ಪ್ರವಾಸದಲ್ಲಿದ್ದರು.

ಹಂಗಾಮಿ ಬೌಲಿಂಗ್‌ ಕೋಚ್‌ ಆಗಿ ಸಾಯಿರಾಜ್ ಬಹುತುಳೆ ನೇಮಕವಾಗಿದ್ದರು. ಇದೀಗ ನೂತನ ಬೌಲಿಂಗ್‌ ಕೋಚ್‌ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಾರ್ನೆ ಮಾರ್ಕೆಲ್‌ ನೇಮಕವಾಗಿದ್ದಾರೆ.

ಈ ಹಿಂದೆ ಮಾರ್ಕೆಲ್‌ ಪಾಕಿಸ್ತಾನ ಕ್ರಿಕೆಟ್‌ ತಂಡದ ಬೌಲಿಂಗ್‌ ಕೋಚ್‌ ಆಗಿ ನೇಮಕವಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಆಡಿದ ಸಾಕಷ್ಟು ಅನುಭವ ಅವರಿಗಿದೆ.

Advertisement

ಮಾರ್ಕೆಲ್ ಗೌತಮ್‌ ಗಂಭೀರ್‌ ಜತೆ ಐಪಿಎಲ್‌ನಲ್ಲಿ ಕೆಕೆಆರ್‌‌ ತಂಡದ ಪರ ಮೂರು ಸೀಸನ್‌ ಗಳನ್ನು ಆಡಿದ್ದಾರೆ. ಇದಲ್ಲದೆ ಲಖನೌ ಸೂಪರ್‌ ಜಯಂಟ್ಸ್‌ ತಂಡದಲ್ಲಿಯೂ ಅವರು ಬೌಲಿಂಗ್‌ ಕೋಚ್‌ ಆಗಿ ಗಂಭೀರ್‌ ಜೊತೆ ಕಾರ್ಯನಿರ್ವಹಿಸಿದ್ದರು.

ಸೆ.1 ರಿಂದ ಭಾರತ ತಂಡದ ಜತೆ ಮಾರ್ಕೆಲ್‌ ಸೇರಿಕೊಳ್ಳಲಿದ್ದು, ಸೆ.19ರಿಂದ ಬಾಂಗ್ಲಾ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಅವರು‌ ಟೀಮ್‌ ಇಂಡಿಯಾದ ಬೌಲಿಂಗ್‌ ಕೋಚ್ ಆಗಿ ಮೈದಾನಕ್ಕೆ ಇಳಿಯಲಿದ್ದಾರೆ.

“ಮಾರ್ಕೆಲ್‌ ಅವರನ್ನು  ಟೀಮ್‌ ಇಂಡಿಯಾದ‌ ಪುರುಷರ ಸೀನಿಯರ್ ತಂಡಕ್ಕೆ ಬೌಲಿಂಗ್‌ ಕೋಚ್‌ ಆಗಿ ನೇಮಿಸಲಾಗಿದೆ” ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪಿಟಿಐಗೆ ಖಚಿತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಪರವಾಗಿ ಮಾರ್ಕೆಲ್ 86 ಟೆಸ್ಟ್‌ ಪಂದ್ಯಗಳು, 117 ಏಕದಿನ ಪಂದ್ಯಗಳು ಹಾಗೂ 44 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 309 ಟೆಸ್ಟ್‌ ವಿಕೆಟ್‌ಗಳು, 188 ಏಕದಿನ ವಿಕೆಟ್‌ಗಳು ಹಾಗೂ 47 ಟಿ20ಐ ವಿಕೆಟ್‌ಗಳನ್ನು ಅವರು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next