Advertisement

Olympic status: ಒಲಿಂಪಿಕ್ಸ್ ನಲ್ಲಿನ್ನು ಚೆಂಡು ದಾಂಡಿನ ಆಟ; ಕ್ರಿಕೆಟ್ ಸೇರ್ಪಡೆಗೆ ಸಮ್ಮತಿ

03:48 PM Oct 16, 2023 | Team Udayavani |

ಮುಂಬೈ: ಒಂದು ಶತಮಾನದ ಕಾಯುವಿಕೆಯ ಬಳಿಕ ಕೊನೆಗೂ ಕ್ರೀಡಾ ಮಹಾಹಬ್ಬ ಒಲಿಂಪಿಕ್ಸ್ ಗೆ ಕ್ರಿಕೆಟ್ ಸೇರ್ಪಡೆಯಾಗಿದೆ. ಮುಂಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಗಿದೆ.

Advertisement

ಒಟ್ಟು ಐದು ಆಟಗಳನ್ನು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಗೆ ಸೇರಿಸಿಲು ಸಮಿತಿಯಲ್ಲಿ ತೀರ್ಮಾನಿಸಲಾಯಿತು. ಅವುಗಳೆಂದರೆ ಕ್ರಿಕೆಟ್, ಫ್ಲ್ಯಾಗ್ ಫುಟ್ ಬಾಲ್, ಬೇಸ್‌ಬಾಲ್-ಸಾಫ್ಟ್‌ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವಾಷ್.

ಒಂದು ವಾರದ ಹಿಂದೆ ಲಾಸ್ ಏಂಜಲೀಸ್ ಅಧಿಕಾರಿಗಳು ಪ್ರಸ್ತಾಪಿಸಿದ ಮತ್ತು ಐಒಸಿ ಕಾರ್ಯಕಾರಿ ಮಂಡಳಿಯು ಶುಕ್ರವಾರ ಶಿಫಾರಸು ಮಾಡಿದ ಕ್ರೀಡಾ ಪಟ್ಟಿ ಒಲಿಂಪಿಕ್ ಸಂಸ್ಥೆಯ ಪೂರ್ಣ ಸದಸ್ಯತ್ವದಿಂದ ಸೋಮವಾರ ಅಂತಿಮ ಮುದ್ರೆ ಪಡೆಯಿತು.

ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 90 ಸದಸ್ಯರ ಮುಂದೆ ಎಲ್ಲಾ ಐದು ಆಟಗಳನ್ನು ಒಂದೇ ಪ್ಯಾಕೇಜ್‌ನಲ್ಲಿ ಮತ ಹಾಕಲಾಯಿತು. ಕೇವಲ ಎರಡು ಮತಗಳು ವಿರುದ್ಧವಾಗಿ ಬಿದ್ದವು.

Advertisement

1900ರ ಬಳಿಕ ಮೊದಲ ಬಾರಿಗೆ ಕ್ರಿಕೆಟನ್ನು ಒಲಿಂಪಿಕ್ ಸ್ಥಾನಮಾನ ಲಭಿಸಿದೆ. ಒಲಿಂಪಿಕ್ ಕಾರ್ಯಕ್ರಮಕ್ಕೆ ಕ್ರಿಕೆಟನ್ನು ಸೇರಿಸುವುದರಿಂದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಭಾರತದ ಪ್ರಸಾರ ಹಕ್ಕುಗಳ ಮೌಲ್ಯವನ್ನು 100 ಮಿಲಿಯನ್‌ ಡಾಳರ್ ಗಿಂತ ಹೆಚ್ಚು ವೃದ್ದಿಸುವ ನಿರೀಕ್ಷೆಯಿದೆ. ಟಿ20 ಮಾದರಿಯಲ್ಲಿ ಪುರುಷರು ಮತ್ತು ಮಹಿಳೆಯರ ಕ್ರಿಕೆಟ್ ನಡೆಯಲಿದೆ.

2024ರ ಒಲಿಂಪಿಕ್ ಕೂಟವು ಪ್ಯಾರಿಸ್ ನಲ್ಲಿ ನಡೆಯಲಿದೆ. 2028ರ ಒಲಿಂಪಿಕ್ ಕೂಟ ಲಾಸ್ ಏಂಜಲೀಸ್ ನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next