Advertisement
ವರದಿಯ ಪ್ರಕಾರ, ಕಂಪ್ಯೂಟರ್ ವಿಶನ್ ಭಾಗದಲ್ಲಿರುವ ಎಂಟು (ಹಾಕ್ ಐ) ಹೈಸ್ಪೀಡ್ ಕ್ಯಾಮರಾಗಳು ಮೈದಾನದ ಸುತ್ತಲೂ ಹದ್ದಿನ ಕಣ್ಣಿಟ್ಟು ಕಾಯಲಿವೆ. ಈ ವಿಭಾಗದಲ್ಲಿರುವ ಇಬ್ಬರು ನಿರ್ವಾಹಕರು ಟಿವಿ ಅಂಪಾರ್‌ಗಳ ಜತೆ ಕಾರ್ಯ ನಿರ್ವಹಿಸುತ್ತಾರೆ. ಹೀಗಾಗಿ, ಆಟದ ಎಲ್ಲಾ ಮೂಲೆಗಳ ಚಿತ್ರಣ ಸಿಗುವುದರಿಂದ ಟಿವಿ ಅಂಪಾಯರ್ ನಿರ್ಧಾರ ಪ್ರಕಟಿಸುವಾಗ ಗೊಂದಲದ ಸನ್ನಿವೇಶ ಸೃಷ್ಟಿಯಾಗದಂತೆ ಇವು ನೆರವಾಗುತ್ತವೆ.
ಉದಾಹರಣೆಗೆ; ಪಂದ್ಯಗಳ ವೇಳೆ ಫೀಲ್ಡರ್ ಒಬ್ಬ ಬೌಂಡರಿ ಲೈನ್ ಬಳಿ ಕ್ಯಾಚ್ ಪಡೆದಾಗ, ಆತನ ಕಾಲು ಬೌಂಡರಿ ಲೈನ್ ತಾಗಿದೆಯೇ ಇಲ್ಲವೇ ಎಂದು ನಿರ್ಧರಿಸಲು ಕೆಲವೊಮ್ಮೆ ಸವಾಲೆನಿಸುತ್ತಿತ್ತು. ಆದರೆ ಹೊಸ ವ್ಯವಸ್ಥೆಯಿಂದ ಇಂಥ ಸಂದರ್ಭಗಳಲ್ಲಿ ತೀರ್ಪು ಪ್ರಕಟಿಸಲು ಸುಲಭವಾಗಲಿದೆ ಎನ್ನಲಾಗಿದೆ.