Advertisement

ಸ್ಮಿತ್‌,ವಾರ್ನರ್‌ಗೆ 1ವರ್ಷ,ಬ್ಯಾನ್‌ಕ್ರಾಫ್ಟ್ ಗೆ 9 ತಿಂಗಳು ನಿಷೇಧ

02:56 PM Mar 28, 2018 | Team Udayavani |

ಸಿಡ್ನಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಬಾಲ್‌ ಟ್ಯಾಂಪರಿಂಗ್‌ ಮಾಡುವ ಮೂಲಕ ಕಳಂಕ ತಂದಿಟ್ಟ ಆಟಗಾರರ ವಿರುದ್ದ ಕ್ರಿಕೆಟ್‌ ಆಸ್ಟ್ರೇಲಿಯಾ ಕಠಿಣ ಕ್ರಮ ಕೈಗೊಂಡಿದ್ದು  ಸ್ಟೀವನ್‌ ಸ್ಮಿತ್‌ ಮತ್ತು ಡೆವೀಡ್‌ ವಾರ್ನರ್‌ಗೆ ತಲಾ 1 ವರ್ಷ ತಂಡವನ್ನು ಪ್ರತಿನಿಧಿಸುವುದಕ್ಕೆ ನಿಷೇಧ ಹೇರಿದ್ದು , ಆರಂಭಿಕ ಆಟಗಾರ ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್ಗೆ 9 ತಿಂಗಳ ಕಾಲ ನಿಷೇಧ ಹೇರಿರುವ ಕುರಿತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. 

Advertisement

ಬಾಲ್‌ ಟ್ಯಾಂಪರಿಂಗ್‌ ವಿಚಾರ ಸುದ್ದಿಯಾದ ಬೆನ್ನಲ್ಲೇ ಕ್ರಿಕೆಟ್‌ ಆಸ್ಟ್ರೇಲಿಯಾ ತನಿಖೆಗೆ ಆದೇಶಿಸಿತ್ತು.ಬುಧವಾರ ಮಹತ್ವದ ಸಭೆ ಕರೆದು ಮೂವರಿಗೆ ನಿಷೇಧದ ಶಿಕ್ಷೆ ನೀಡಿದೆ ಎಂದು ತಿಳಿದು ಬಂದಿದೆ.

ಆಸೀಸ್‌ ಬ್ಯಾನ್‌ ಹೇರಿದ ಬೆನ್ನಲ್ಲೇ ಸ್ಮಿತ್‌ ಮತ್ತು ವಾರ್ನರ್‌ಗೆ  ಪ್ರಸಕ್ತ ಸಾಲಿನ ಐಪಿಎಲ್‌ ಪಂದ್ಯಾವಳಿಗಳಲ್ಲಿ ಆಡಲು ಬಿಸಿಸಿಐ ನಿಷೇಧ ಹೇರಿದೆ. 

ಸ್ಮಿತ್‌ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕತ್ವ ಮತ್ತು ವಾರ್ನರ್‌ ಹೈದರಾಬಾದ್‌ ತಂಡದ ನಾಯಕತ್ವ ವಹಿಸಬೇಕಾಗಿತ್ತು. ಆರೋಪ ಕೇಳಿ ಬಂದ ತಕ್ಷಣ ಇಬ್ಬರನ್ನೂ ನಾಯಕತ್ವದಿಂದ ಕೈ ಬಿಡಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next