Advertisement

ಬಂಡೇಮಠ ಚಿತಾಗಾರ ಹೊಗೆ ಸಮಸ್ಯೆ ಪರಿಹರಿಸಿ

07:55 PM Apr 09, 2021 | Team Udayavani |

ಕೆಂಗೇರಿ: ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ವಾರ್ಡ್‌ ಕೊಮ್ಮಘಟ್ಟ ರಸ್ತೆಯಲ್ಲಿರುವ ವಿದ್ಯುತ್‌ ಚಿತಾಗಾರದಿಂದ ಸುತ್ತಲಿನ ಬಂಡೇಮಠ ಬಡಾವಣೆ, ಸನ್‌ಸಿಟಿ, ವಿನಾಯಕನಗರ ಬಡಾವಣೆ, ಬಿಎಸ್‌ಎಮ್‌ ವಿಲಾಸ್‌ ಬಡಾವಣೆ, ಕೆಎಚ್‌ಬಿ ಡೈಮಂಡ್‌ ವಸತಿ ಸಮುತ್ಛಯ ಹಾಗೂ ಬೀಡಿಕಾಲೋನಿ ಸೇರಿದಂತೆ ಸುತ್ತಲ ಬಡಾವಣೆಯ ನಾಗರಿಕರು ಹಲವು ಕಾಯಿಲೆಯಿಂದ ನರಳುವಂತಾಗಿದೆ.

Advertisement

ಕಳೆದ 8-10 ವರ್ಷಗಳ ಹಿಂದೆ ಈ ಚಿತಾಗಾರವೂ ಊರಿನ ಹೊರಗಿತ್ತು. ಕಾಲಕ್ರಮೇಣ ಹೊಸ ಬಡಾವಣೆಗಳು ತಲೆ ಎತ್ತಿ ಸಾಕಷ್ಟು ಮನೆಗಳು ನಿರ್ಮಾಣವಾಗಿ ಸಾವಿರಾರು ಜನರು ವಾಸ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳನ್ನು ಇಲ್ಲಿ ದಹನ ಮಾಡುತ್ತಿರುವು  ದರಿಂದ ವಿದ್ಯುತ್‌ ಚಿತಾಗಾರದಿಂದ ನಿರಂತರವಾಗಿ 2-3 ಗಂಟೆಗಳ ಕಾಲ ಸತತ ವಾಗಿ ದಟ್ಟವಾದ ಹೊಗೆ ಹೊರಬರುತ್ತಿದ್ದು, ಈ ಸಮಯದಲ್ಲಿ ಸುತ್ತಲ ಬಡಾವಣೆಗಳಿಗೆ ಗಾಳಿಯ ಮೂಲಕ ಹರಡಿ ದುರ್ನಾತ ಬೀರುತ್ತಿದ್ದು ಜನರು ಮನೆಗಳಲ್ಲಿ ವಾಸಿಸಲು ಪರದಾಡುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಚಿಮಣಿಯನ್ನು ಮತ್ತಷ್ಟು ಎತ್ತರಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಬಗ್ಗೆ ಉದಯವಾಣಿ ಜೊತೆ ಬಿಬಿಎಂಪಿ ವಿದ್ಯುತ್‌ ವಿಭಾಗದ ಸಹಾ  ಯಕ ಕಾರ್ಯಪಾಲಕ ಅಭಿಯಂತರ ರಮೇಶ್‌ ಮಾತನಾಡಿ, ಸಾಮಾನ್ಯ ದಿನಗಳಲ್ಲಿ 5-6 ಶವಗಳು ಬರುತ್ತಿದ್ದು, ಒಂದು ವರ್ಷದಿಂದ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಹೆಚ್ಚಾಗಿ ಶವಗಳು ಬರುತ್ತಿವೆ. ನೂತನ ವಿದ್ಯುತ್‌ ಚಿತಾಗಾರ ನಿರ್ಮಾಣ ಮಾಡುವಾಗ ಸುತ್ತಲು ಯಾವುದೇ ಬಡಾವಣೆಗಳಿರಲಿಲ್ಲ. ಕ್ರಮೇಣ ಅಭಿವೃದ್ಧಿ ಹೊಂದು  ತ್ತಿದ್ದು ಸುತ್ತಲು ವಸತಿ ಸಮುತ್ಛಯ ಹಾಗೂ ನೂತನ ಬಡಾವಣೆಗಳು ತಲೆಯತ್ತಿರುವುದರಿಂದ ಇದು ಊರಿನ ಮದ್ಯಭಾಗದಲ್ಲಿ ಬಂದಂತಿದೆ.

ರಾಜರಾಜೇಶ್ವರಿ ವಲಯ ಜಂಟಿ ಆಯುಕ್ತರಿಗೆ ಚಿಮಣಿ ಎತ್ತರಿಸಲು ಪ್ರಸ್ತಾ  ವನೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿಯೇ ಸುಮಾರು 10 ರಿಂದ 15 ಅಡಿಗಳಷ್ಟು ಎತ್ತರಿಸಿ ಸಮಸ್ಯೆಗೆ ಪರಿಹಾರವನ್ನು ನೀಡಲಾಗುವುದು ಎಂದರು. ಪಾಲಿಕೆ ಮಾಜಿ ಸದಸ್ಯ ವಿ.ವಿ.ಸತ್ಯನಾರಾಯಣ ಮಾತನಾಡಿ, ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದು, ಈಗಾಗಲೇ ರಾಜರಾಜೇಶ್ವರಿ ವಲಯ ಜಂಟಿ ಆಯುಕ್ತ ನಾಗರಾಜು ಅವರಿಗೆ ಕ್ಷೇತ್ರದ ಶಾಸಕರು, ಸಹಕಾರ ಸಚಿವರಾದ ಎಸ್‌.ಟಿ.ಸೋಮಶೇಖರ್‌ ಚರ್ಚಿಸಿ ಕೂಡಲೇ ಚಿಮಣಿ ಎತ್ತರಿಸಲು ತಗಲುವ ವೆಚ್ಚವನ್ನು ಪರಿಶೀಲಿಸಿ ತಕ್ಷಣ ಚಿಮಣಿ ಎತ್ತರಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕಾಗದೆ ಎಂದರು.

  • ರವಿ ವಿ.ಆರ್‌. ಕೆಂಗೇರಿ

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next