ವಿಜಯಪುರ: ಪೋಕ್ಸೋ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಡಿಎನ್‌ಎ. ಪರೀಕ್ಷೆಗಾಗಿ ತಿಪ್ಪೆ ಗುಂಡಿಯಲ್ಲಿ ಹೂತಿದ್ದ ಮಗುವಿನ ಮೃತ ದೇಹವನ್ನು ಉಪವಿಭಾಗಾಧಿಕಾರಿ ಅನುಮತಿ ಪಡೆದು ತಹಶೀಲ್ದಾರ್ ಸಮ್ಮುಖದಲ್ಲಿ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಶ್ರೀನಿವಾಸ್ ಮಾಹಿತಿ ನೀಡಿದರು.
ಪಟ್ಟಣ ಸಮೀಪದ ಹಳಿಯೂರು ಗ್ರಾಮದಲ್ಲಿ ಗಾರೆ ಕೆಲಸಕ್ಕೆಂದು ಬಂದಿದ್ದ ಚಿಂತಾಮಣಿ ತಾಲೂಕಿನ ಯುವಕನೊಬ್ಬ ಇದೇ ಗ್ರಾಮದ ಅಪ್ರಾಪ್ತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ವಿಟ್ಟುಕೊಂಡು ಪರಾರಿಯಾಗಿರುವ ಘಟನೆ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ;- ಸಪ್ಪಾದ ಹಸಿ ಮೆಣಸಿನಕಾಯಿ
ಯುವತಿಗೆ ಪ್ರಸವವಾದ ನಂತರ ಮಗು ಜನಿಸುವಾಗಲೇ ಮೃತಪಟ್ಟಿದ್ದರಿಂದ ಗ್ರಾಮದ ತಿಪ್ಪೆಗುಂಡಿಯಲ್ಲಿ ಹೂತಿದ್ದು, ತಿಳಿದು ಬಂದಿದ್ದರಿಂದ ವಿಜಯಪುರ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆ ತಾಯಿ ದೂರು ನೀಡಿ ದ್ದರು. ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ.
ನಂತರ ಆರೋಪಿಯನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಮುಂದಿನ ತನಿಖೆಗೆ ಅನುಕೂಲಕ್ಕಾಗಿ ಪೊಲೀಸರು, ಎಸಿ ಅನುಮತಿ ಪಡೆದುಕೊಂಡು ತಿಪ್ಪೆಗುಂಡಿಯಲ್ಲಿ ಹೂತಿದ್ದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತಹಶೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ವೈದ್ಯಡಾ.ಭಗವಾನ್, ನಂದೀಶ್ ಇದ್ದರು.