Advertisement
ಮಕ್ಕಳ ಪರೀûಾ ಫಲಿತಾಂಶ ಬಂದಾಗ ಎಷ್ಟು ಸ್ಕೋರ್ ಎಂದು ಕೇಳುತ್ತಾರೆ. ಕ್ರಿಕೆಟ್ ಮ್ಯಾಚ್ ನಡೆದಾಗ ಸ್ಕೋರ್ ಎಷ್ಟು ಎಂದು ವಿಚಾರಿಸುತ್ತಾರೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಪದೇ ಪದೇ ಕೇಳುತ್ತಿರುವ ಈ ಸಿಬಿಲ… ಸ್ಕೋರ್ ಅನ್ನು. ಅರೆ ಸಿಬಿಲ್ ಸ್ಕೋರ್ ಎಂದರೇನು? ಇದು ಉಳಿದ ಸ್ಕೋರ್‌ಗಳಂತೆ ಮನೆ- ಮನೆಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಅಥವಾ ರಸ್ತೆ- ಬೀದಿ. ಆಫೀಸು- ಅಂಗಡಿ ಮುಂಗಟ್ಟುಗಳಲ್ಲಿ ಕೇಳಿಬರುವುದಿಲ್ಲ. ಇದನ್ನು ಯಾರು ಕೇಳುತ್ತಾರೆ? ಯಾರನ್ನು ಕೇಳುತ್ತಾರೆ? ಎಲ್ಲಿ ಕೇಳುತ್ತಾರೆ ಮತ್ತು ಯಾವಾಗ ಕೇಳುತ್ತಾರೆ?ಹೌದು, ಸಾಲ ಮಾಡೋಕೆ ಹೋದಾಗ ಸ್ಕೋರ್ ಬಹಳ ಮುಖ್ಯವಾಗುತ್ತದೆ.
ಕ್ರೆಡಿಟ… ಇನ್‌ಫಾರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್ ಇದನ್ನು ಸಂಕ್ಷಿಪ್ತವಾಗಿ ದಿನನಿತ್ಯದ ಬಳಸುವಿಕೆಗೆ ಅನುಕೂಲವಾಗುವಂತೆ ಸಿಬಿಲ್ ಎಂದು ಕರೆಯುತ್ತಾರೆ. ಇದು ಭಾರತದ ಅತಿ ಹಳೆಯದಾದ, ಆಗಸ್ಟ್ 2000ರಲ್ಲಿ ಸ್ಥಾಪಿತಗೊಂಡ, ಕ್ರೆಡಿಟ್ ಮಾಹಿತಿ ಸಂಸ್ಥೆ. ಇದರಲ್ಲಿ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್.ಡಿ.ಎಫ್.ಸಿ ಲಿಮಿಟೆಡ್, ಡನ್ ಬ್ರಾಡ್ ಸ್ಟ್ರೀಟ್ ಮತ್ತು ಟ್ರಾನ್ಸ ಯೂನಿಯನ್ ಸಂಸ್ಥೆ ಗಳು 40:40:10:10 ಅನುಪಾತದಲ್ಲಿ ಪಾಲು ಹೊಂದಿದ್ದು, ಈಗ ಬೇರೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳೂ ಪಾಲು ತೆಗೆದುಕೊಂಡಿದ್ದು ಪಾಲುಗಾರಿಕೆ ಅನುಪಾತ ಬದಲಾಗಿದೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಇಂಥ ನಾಲ್ಕು ಸಂಸ್ಥೆಗಳಿದ್ದು, ಸಿಬಿಲ್ ಸ್ವಲ್ಪ ಹಳೆಯದಾಗಿದ್ದು ಹೆಚ್ಚು ಪ್ರಚಲಿತವಾಗಿದೆ. ಇದು ತನ್ನ ಗ್ರೂಪ್‌ನ ಬ್ಯಾಂಕ್ ಗ್ರಾಹಕರ (ವೈಯಕ್ತಿಕ ಮತ್ತು ವಾಣಿಜ್ಯ ಉದ್ದೇಶದ ಕಂಪನಿ, ಪಾಲುಗಾರಿಕೆ ಮುಂತಾದ ) ಸಾಲ ಮತ್ತು ಕ್ರೆಡಿಟ್ ಕಾರ್ಡ್ ಬಗೆಗೆ ಮತ್ತು ಅವುಗಳ ಮರುಪಾವತಿಯ ಸ್ಥಿತಿಗತಿಗಳ ಬಗೆಗೆ ಮಾಹಿತಿಯನ್ನು ಕಲೆಹಾಕುತ್ತದೆ ಮತ್ತು ತಮ್ಮೊಳಗೆ ಅದನ್ನು ಹಂಚಿಕೊಳ್ಳುತ್ತವೆ.
Related Articles
Advertisement
ಸಿಬಿಲ್ ಸ್ಕೋರನ್ನು ಹೇಗೆ ಲೆಕ್ಕ ಹಾಕುತ್ತದೆ?ಒಬ್ಬ ಗ್ರಾಹಕ ತೆಗೆದುಕೊಂಡ ಹಿಂದಿನ ಎÇÉಾ ಸಾಲಗಳ ಮರುಪಾವತಿಯ ವಿವರಗಳನ್ನು ವಿಶ್ಲೇಷಿಸುತ್ತಾರೆ. ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ್ದರೆ ಹೆಚ್ಚಿನ ಸ್ಕೋರ್ ನೀಡಲಾಗುವುದು. ಮರುಪಾವತಿಯಲ್ಲಿ ವಿಳಂಬವಾದರೆ ರೇಟಿಂಗ್ ಕಡಿಮೆಯಾಗುವುದು. ಇತ್ತೀಚೆಗಿನ ಮರುಪಾವತಿಯನ್ನು ವಿಳಂಬ ಮಾಡಿದರೆ ಸ್ಕೋರ್ ಮೇಲೆ ನೆಗೆಟೀವ್ ಪರಿಣಾಮವಾಗುತ್ತದೆ. ಇತ್ತೀಚೆಗೆ ಯಾವುದಾದರೂ ಸಾಲವನ್ನು ಮನ್ನಾ ಮಾಡಿದ್ದರೆ, ಹಲವು ಬಾರಿ ಮನ್ನಾ ಮಾಡಿದ್ದರೆ, ಸ್ಕೋರ್ ಕಡಿಮೆಯಾಗುತ್ತದೆ. ಭದ್ರತೆ ಇರುವ ಸಾಲದ ಮರು ಪಾವತಿಯಲ್ಲಿ ವಿಳಂಬವಿದ್ದರೆ ಅಥವಾ ಮರುಪಾವತಿ ಯಾಗದಿದ್ದರೆ ಸ್ಕೋರ್ ಹೆಚ್ಚಿಗೆ ನೆಗೆಟೀವ್ ಆಗುತ್ತದೆ. ಸಾಲದ ಬಾಕಿ ಕಡಿಮೆ ಇದ್ದರೆ , ಸಾಲದ ಸರಿಯಾದ ಉಪಯೋಗ ಎಂದು ಅರ್ಥೈಸಿ ಹೆಚ್ಚಿನ ಸ್ಕೋರ್ ನೀಡಲಾಗುವುದು. ಸಾಲದ ಬಾಕಿ ಹೆಚ್ಚಿದ್ದರೆ, ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಹಾಗೆಯೆ ಭಾರೀ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಕಡಿಮೆ ಸ್ಕೋರ್ ನೀಡುತ್ತದೆ. ಸಾಲಕ್ಕಾಗಿ ಹೆಚ್ಚಿಗೆ ವಿಚಾರಿಸಿದರೆ ಸಾಲದ ಹಸಿವು ಎಂದು ಸ್ಕೋರ ಅನ್ನು ಕಡಿಮೆ ಮಾಡುತ್ತದೆ. ಈ ಸ್ಕೋರ್‌ಗಳ ಅರ್ಥವೇನು?
– ಸಿಬಿಲ್ 300 ರಿಂದ 900 ರವರೆಗೆ ಸ್ಕೋರ್ ನೀಡುತ್ತಿದ್ದು, ಅಕಸ್ಮಾತ್ 0 ಅಥವಾ 1 ನೀಡಿದರೆ, ಆ ಗ್ರಾಹಕನಿಗೆ ಸಾಲದ ಯಾವುದೇ ಇತಿಹಾಸ ಇಲ್ಲ ಎನ್ನುವ ಮಾಹಿತಿ. – 350 ರಿಂದ 550ರ ವರೆಗೆ, ಗ್ರಾಹಕನ ಬಗೆಗೆ ಎಚ್ಚರಿಕೆ ಘಂಟೆಯ ಸಂಕೇತ. ಸಾಲ ಮರುಪಾವತಿ ಇರುವುದಿಲ್ಲ ಮತ್ತು ಹೊಸದಾಗಿ ಸಾಲ ಪಡೆಯುವ ಸಾಧ್ಯತೆ ಕಡಿಮೆ. -550 ರಿಂದ 650 ಸ್ಕೋರ್ ಸಾಲ ಮರುಪಾವತಿಯಲ್ಲಿ ಹೆಚ್ಚು ಕಡಿಮೆ ರೆಗ್ಯುಲರ್ ಸಾಲಗಾರನಲ್ಲಿ ವಿಶ್ವಾಸ ಇಡಬಹುದು. ಸಾಲ ದೊರಕುವ ಸಾಧ್ಯತೆ ಪಾಸಿಟಿವ್. -650 ರಿಂದ 750 ಸ್ಕೋರ್ ಗ್ರಾಹಕ ಸರಿಯಾದ ಮಾರ್ಗದಲ್ಲಿ ಸಾಲ ಸಂಬಂಧಿ ಯಾವುದೇ ಸಮಸ್ಯೆಗಳಿರುವುದಿಲ್ಲ. -750 ರಿಂದ 90 0 ಅರ್ಹ ಗ್ರಾಹಕ. ಬ್ಯಾಂಕ್ ಮರು ಮಾತನಾಡದೇ ಸಾಲ ಕೊಡಬಹುದು. ಸಿಬಿಲ್ ಸ್ಕೋರ್ ಮೇಲೆ ಬಡ್ಡಿದರ ಹೇಗಿರುತ್ತದೆ?
ಬ್ಯಾಂಕುಗಳಲ್ಲಿ ಸಾಲದ ಮೇಲಿನ ಬಡ್ಡಿದರ ನಿರ್ಧರಿಸುವಾಗ ಅವರದೇ ಆದ ಮಾನದಂಡ ಮತ್ತು ಲೆಕ್ಕಾಚಾರ ಇರುತ್ತದೆ. ಆದರೂ ಸಿಬಿಲ… ಸ್ಕೋರ್ ಮೇಲೆ ಈ ಕೆಳಗಿನಂತೆ ಬಡ್ಡಿದರವನ್ನು ತಳಹದಿಯಾಗಿ ಪರಿಗಣಿಸುತ್ತಾರಂತೆ. ಸ್ಕೋರ್ 760 ಕ್ಕಿಂತ ಹೆಚ್ಚು 8.35%
ಸ್ಕೋರ್ 725 ನಿಂದ 759 8.85%
ಸ್ಕೋರ್ 724 ಕ್ಕಿಂತ ಕಡಿಮೆ 9.35% ಸ್ಕೋರ್ ಹೆಚ್ಚಿಸಿಕೊಳ್ಳೋದು ಹೀಗೆ
– ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ.
– ಕ್ರೆಡಿಟ ಕಾರ್ಡ್ ಬಿಲ್ ಅನ್ನು ಸ್ವಲ್ಪವೂ ಬಾಕಿ ಇರಿಸದೇ ಪೂರ್ಣವಾಗಿ ಪಾವತಿಸುವುದು.
– ಮಂಜೂರಿಯಾದ ಸಾಲದ ಮಿತಿಯನ್ನು ಸರಿಯಾಗಿ ಮತ್ತು ಪೂರ್ಣವಾಗಿ ಉಪಯೋಗಿಸಿಕೊಳ್ಳುವುದು. ಸಾಲದ ಕಂತನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು.
– ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಸರಿಯಾದ ಲೆಕ್ಕ ಪತ್ರಗಳನ್ನು ಮತ್ತು ದಾಖಲೆಗಳನ್ನು ಸಲ್ಲಿಸುವುದು. ಹುಷಾರ್ ಹೀಗೆ ಮಾಡಿದರೆ ಸ್ಕೋರ್ ಕಡಿಮೆಮಾಡುತ್ತವೆ
– ಬ್ಯಾಲೆನ್ಸ ಕೊರತೆಯಿಂದ ನೀಡಿದ ಚೆಕ್‌ಗಳು ಬೌನ್ಸ್ ಆದರೆ ಸಾಲ ಮರುಪಾತಿಯಲ್ಲಿ ವೈಫಲ್ಯ ಅಥವಾ ಅನಿಯಮಿತತನ ಕ್ರೆಡಿಟ್ ಕಾರ್ಡ್ ಬಿಲ್ಲ ಪಾವತಿಸದಿರುವುದು ಅಥವಾ ವಿಳಂಬವಾಗಿ ಪಾವತಿಸುವುದು.
– ಬೇರೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲದ ಬಗೆಗೆ ವಿಚಾರಣೆ.
– ಭದ್ರತೆಇಲ್ಲದ ಸಾಲಗಳು ಮತ್ತು ವಿವಿಧ ರೀತಿಯ ವೈಯಕ್ತಿಕ ಸಾಲಗಳು.
– ಭದ್ರತೆ ಇಲ್ಲದ ಹಲವು ಸಾಲ ಬೇಡಿಕೆ ಮತ್ತು ಅವುಗಳ ತಿರಸ್ಕಾರಗಳು.
– ಗ್ಯಾರಂಟರ್ ಅಗಿ ಕರ್ತವ್ಯ ನಿಭಾಯಿಸದಿರುವುದು.
– ಮಂಜೂರಿಯಾದ ಸಾಲ ಮಿತಿ ಮೀರಿ ಸಾಲ ಬಳಕೆ.
– ಸಲ್ಲಿಸಿದ ದಾಖಲೆಗಳಲ್ಲಿ ತಪ್ಪು ಮಾಹಿತಿಗಳು
ಸಾಲ ಮಂಜೂರು ಮಾಡುವ ಮೊದಲು ಬ್ಯಾಂಕುಗಳು ಮತ್ತು ಸಾಲ ನೀಡುವ ಹಣಕಾಸು ಸಂಸ್ಥೆಗಳು ಸಿಬಿಲ… ನಿಂದ ಗ್ರಾಹಕನ ಬಗೆಗೆ ವರದಿ ಪಡೆಯುತ್ತವೆ. – ರಮಾನಂದ ಶರ್ಮ