Advertisement

ಬ್ಯಾಂಕ್‌ ನಿರ್ದೇಶಕರ ಸಾಲ ಮಿತಿ 5 ಕೋಟಿಗೆ ಏರಿಕೆ : ಆರ್ ಬಿಐ ಆದೇಶ

09:47 PM Jul 23, 2021 | Team Udayavani |

ನವದೆಹಲಿ: ಇತರೆ ಬ್ಯಾಂಕುಗಳ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಅವರ ಸಹವರ್ತಿಗಳಿಗೆ ಸಾಲ ನೀಡುವಿಕೆಯ ಮೊತ್ತವನ್ನು 25 ಲಕ್ಷ ರೂ.ಗಳಿಂದ 5 ಕೋಟಿ ರೂ.ಗಳಿಗೆ ಏರಿಸಿ, ಭಾರತೀಯ ರಿಸರ್ವ್‌ ಬ್ಯಾಂಕ್‌ ಆದೇಶ ಹೊರಡಿಸಿದೆ.

Advertisement

ಕಳೆದ 26 ವರ್ಷಗಳಲ್ಲಿ ಇಂಥದ್ದೊಂದು ಮಹತ್ವದ ನಿರ್ಧಾರ ಕೈಗೊಳ್ಳುತ್ತಿರುವುದು ಇದೇ ಮೊದಲು. 1996ರಲ್ಲಿ ಯಾವುದೇ ಬ್ಯಾಂಕ್‌, ಸಾಲ ಕೇಳುವ ಇತರ ಬ್ಯಾಂಕ್‌ನ ಆಡಳಿತ ಮಂಡಳಿ ಅಧ್ಯಕ್ಷರಿಗೆ ಹಾಗೂ ಸಂಬಂಧಿಕರಿಗೆ ಸಾಲ ನೀಡುವ ಬ್ಯಾಂಕಿನ ಆಡಳಿತ ಮಂಡಳಿಯ ಯಾವುದೇ ಪೂರ್ವಾನುಮತಿಯಿಲ್ಲದೆ, 25 ಲಕ್ಷ ರೂ.ಗಳವರೆಗೆ ಸಾಲ ನೀಡುವ ಸೌಕರ್ಯ ಕಲ್ಪಿಸಿತ್ತು.

ಈಗ ಈ ಮಿತಿಯನ್ನು 5 ಕೋಟಿ ರೂ.ಗಳಿಗೆ ಏರಿಸಲಾಗಿದ್ದು, ಅನುಮತಿ ವಿಚಾರದಲ್ಲೂ ಅದೇ ನಿಯಮವನ್ನು ಮುಂದುವರಿಸಲಾಗಿದೆ.

ಇದನ್ನೂ ಓದಿ :ನಕಲಿ ಮತದಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು : ಸುಪ್ರೀಂ ಅಭಿಪ್ರಾಯ

Advertisement

Udayavani is now on Telegram. Click here to join our channel and stay updated with the latest news.

Next