Advertisement

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪರ್ಯಾಯವಾಗಿ ಕನ್ನಡ ಫಿಲಂ ಚೇಂಬರ್ ರಚನೆ

12:06 PM May 31, 2024 | Team Udayavani |

ದಾವಣಗೆರೆ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪರ್ಯಾಯವಾಗಿ ಕನ್ನಡ ಫಿಲಂ ಚೇಂಬರ್ ರಚಿಸಲಾಗಿದೆ ಎಂದು ಚೇಂಬರ್ ನೂತನ ಅಧ್ಯಕ್ಷ ಎಂ.ಎಸ್. ರವೀಂದ್ರ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈಗಾಗಲೇ ಕಳೆದ 80 ವರ್ಷದಿಂದ ಅಸ್ತಿತ್ವದಲ್ಲಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕೇವಲ ನಿರ್ಮಾಪಕರು, ವಿತರಕರು, ಹಂಚಿಕೆದಾರರಿಗೆ ಮಾತ್ರವೇ ಸದಸ್ಯತ್ವ ನೀಡಲಾಗುತ್ತದೆ. ‌ಅದು ವರ್ಷಕ್ಕೆ ಒಂದು ಲಕ್ಷ ಸದಸ್ಯತ್ವ ಶುಲ್ಕ ನೀಡಬೇಕು ಮತ್ತು ನವೀಕರಣ ಮಾಡಿಕೊಳ್ಳಬೇಕು. ಹಾಗಾಗಿ ಪರ್ಯಾಯ ಚೇಂಬರ್ ಅನ್ನು ಅಸ್ತಿತ್ವಕ್ಕೆ ತರಲಾಗಿದೆ. ಈವರೆಗೆ 384 ಜನರು ಸದಸ್ಯತ್ವ ಪಡೆದಿದ್ದಾರೆ ಅಲ್ಲದೆ 19 ಚಿತ್ರಗಳ ಹೆಸರು ನೋಂದಣಿಯಾಗಿದೆ ಎಂದು ತಿಳಿಸಿದರು.

ಒಂದು ಚಿತ್ರವಾಗಬೇಕಾದರೆ ನಟ, ನಟಿ, ಪೋಷಕ ನಟರು, ತಂತ್ರಜ್ಞರು ಎಲ್ಲರೂ ಬೇಕು. ಆದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸದಸ್ಯತ್ವವನ್ನೇ ನೀಡುವುದಿಲ್ಲ. ಮಂಡಳಿಯ ಪದಾಧಿಕಾರಿ ಆಗಲು ತಮಗೆ ಅನುಕೂಲ ಆಗುವಂತೆ ಬೈಲಾ ರಚಿಸಿಕೊಳ್ಳಲಾಗಿದೆ. ಚಿತ್ರರಂಗದ ಎಲ್ಲರಿಗೂ ಮುಕ್ತ ಅವಕಾಶ ದೊರೆಯಬೇಕು ಎಂಬ ಸದುದ್ದೇಶದಿಂದ ಪ್ರತ್ಯೇಕ ಮಂಡಳಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next