Advertisement

ಬಿಜೆಪಿ ಸರ್ಕಾರದಿಂದ ಅರಾಜಕತೆ ಸೃಷ್ಟಿ

03:41 PM Apr 18, 2022 | Team Udayavani |

ಹೊಳಲ್ಕೆರೆ: ರಾಜ್ಯದಲ್ಲಿ ಸಂವಿಧಾನಗಳ ಆಶಯಕ್ಕೆ ವಿರುದ್ಧವಾಗಿ ಅನೈತಿಕವಾಗಿ ಅಧಿಕಾರ ಬಂದ ಸರಕಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಶ್ರೀಸಾಮಾನ್ಯರ ಬದುಕು ನಾಶ ಮಾಡುತ್ತಿದೆ ಎಂದು ಜಿಡಿಎಸ್‌ ಪಕ್ಷದ ಜಿಲಾಧ್ಯಕ್ಷ ಯಶೋಧರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದ ಜೆಡಿಎಸ್‌ ಪಕ್ಷದ ಕಚೇರಿಯಲ್ಲಿ ತಾಲೂಕು ಜೆಡಿಎಸ್‌ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಜಲಧಾರೆ ಯಾತ್ರೆ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶದಲ್ಲಿ ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರಕಾರ ಇದ್ದರೆ ಹೊನ್ನಿನ ಮಳೆ ಹರಿಯುತ್ತಿದೆ ಎನ್ನುವ ಆಶಯದಿಂದ ಜನರು ಅಧಿಕಾರಕ್ಕೆ ತಂದ ಬಿಜೆಪಿ ಆಡಳಿತದಿಂದ ಜನರು ಬೇಸತ್ತಿದ್ದರೆ. ಅನೈತಿಕ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ನಿತ್ಯ ಬೆಲೆ ಏರಿಕೆಯನ್ನೇ ಉದ್ಯೋಗ ಮಾಡಿಕೊಂಡಿದೆ. ಇಂದು ಪೆಟ್ರೋಲ್‌, ಡಿಸೇಲ್‌, ಗ್ಯಾಸ್‌, ಅಡುಗೆ ಎಣ್ಣೆ, ಆಹಾರ ಪರ್ದಾಥಗಳ ಬೆಲೆ ಏರಿಕೆ ಬಲೆಯಲ್ಲಿ ಸಿಕ್ಕಿಕೊಂಡಿರುವ ರಾಜ್ಯದ ಜನರು ಬದುಕು ನಡೆಸಲು ಆಸಾಧ್ಯ ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಬಿಜೆಪಿ ಸರಕಾರದ ಭ್ರಷ್ಟಾಚಾರದ ದೂರಾಡಳಿತವೇ ಕಾರಣ ಎಂದು ದೂರಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಧ್ಯಕ್ಷರಾದ ಜಿ.ಬಿ. ಶೇಖರ್‌, ತಾಲೂಕು ಜೆಡಿಎಸ್‌ ಪಕ್ಷದ ಅಧ್ಯಕ್ಷ ಪರಮೇಶ್ವರಪ್ಪ, ಪಕ್ಷದ ಮುಖಂಡರಾದ ಮಾಳೆನಹಳ್ಳಿ ವೆಂಕಟೇಶ್‌, ಜಯ್ಯಣ್ಣ, ಕೇಶವಮೂರ್ತಿ, ಲಿಂಗನಾಯ್ಕ, ಸೈಪುಲ್ಲಾ ಖಾನ್‌, ವಕೀಲರಾದ ಎನ್‌. ಎಚ್‌. ಶಾಂತವೀರಪ್ಪ, ಮೂಲೆಮನೆ, ಕಾರ್ಯದರ್ಶಿ ಪರಮೇಶ್ವರಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next