Advertisement

New record: 29ನೇ ಬಾರಿಗೆ ಎವರೆಸ್ಟ್‌ ಏರಿದ ಕಾಮಿ ರಿತಾ

12:09 AM May 13, 2024 | Team Udayavani |

ಕಠ್ಮಂಡು(ನೇಪಾಲ): ಸತತವಾಗಿ 29ನೇ ಬಾರಿಗೆ ವಿಶ್ವದ ಅತ್ಯಂತ ಎತ್ತರದ ಮೌಂಟ್‌ ಎವರೆಸ್ಟ್‌ ಪರ್ವತ ಏರುವ ಮೂಲಕ ಖ್ಯಾತ ಪರ್ವತಾರೋಹಿ ಕಾಮಿ ರಿತಾ ಶೆರ್ಪಾ ತಮ್ಮದೇ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ. 54 ವರ್ಷದ ಕಾಮಿ, ರವಿವಾರ ಬೆಳಗ್ಗೆ 7:25 ಗಂಟೆಗೆ 8,849 ಮೀಟರ್‌ ಎತ್ತರದ ಶಿಖರದ ತುತ್ತ ತುದಿ ತಲುಪಿದ್ದಾರೆ. ಕಳೆದ ವರ್ಷ 28ನೇ ಬಾರಿಗೆ ಎವರೆಸ್ಟ್‌ ಏರಿದ ಕಾಮಿ, ಈಗ 29ನೇ ಬಾರಿಗೆ ಏರುವ ಮೂಲಕ ಅತೀ ಹೆಚ್ಚು ಬಾರಿ ಎವರೆಸ್ಟ್‌ ಏರಿದ ಪರ್ವತಾರೋಹಿ ಎಂಬ ದಾಖಲೆ ಸೃಷ್ಟಿಸಿದ್ದಾರೆ. 1994ರಲ್ಲಿ ಕಾಮಿ ಮೊದಲ ಬಾರಿಗೆ ಎವರೆಸ್ಟ್‌ ಏರಿದ್ದರು. ಸೆವೆನ್‌ ಸಮ್ಮಿಟ್‌ ಟ್ರೆಕ್ಸ್‌ ವತಿಯಿಂದ ಆಯೋಜಿಸಿದ್ದ ಪರ್ವತಾರೋಹಣದಲ್ಲಿ ಅಮೆರಿಕ, ಕೆನಡಾ, ಕಜಕಿಸ್ಥಾನ, ನೇಪಾಲ ದೇಶಗಳ 20 ಪರ್ವತಾರೋಹಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next