ಚಿತ್ರದುರ್ಗ: ಸಾಮಾಜಿಕ ಪಿಡುಗಾಗಿರುವ ಬಾಲಕಾರ್ಮಿಕ ಮತ್ತು ಬಾಲ್ಯವಿವಾಹ ಪದ್ಧತಿಗಳನ್ನು ನಿರ್ಮೂಲನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ ಹೇಳಿದರು.
ಮೆದೇಹಳ್ಳಿ ಗ್ರಾಮ ಪಂಚಾಯತ್‌ದಲ್ಲಿ ಶಿಕ್ಷಣ ಇಲಾಖೆ, ವಿಮುಕ್ತಿ ವಿದ್ಯಾಸಂಸ್ಥೆ, ಚಿತ್ರ ಡಾನ್‌ಬಾಸ್ಕೋ ಮತ್ತು ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ವತಿಯಿಂದ ಆಯೋಜಿಸಿದ್ದ ಬಾಲ್ಯವಿವಾಹ ತಡೆಗಾಗಿ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿಗೂ ನಮ್ಮ ನಡುವೆ ಬಾಲಕಾರ್ಮಿಕರು ಕಾಣಿಸಿಕೊಳ್ಳುತ್ತಿದ್ದಾರೆ. ಎಳೆಯ ವಯಸ್ಸಿನ ಮಕ್ಕಳನ್ನು ದುಡಿಯಲು ಹಚ್ಚುವುದು ಹಾಗೂ ದುಡಿಸಿಕೊಳ್ಳುವುದು ಅಪರಾಧ. ಅದೇ ರೀತಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಮದುವೆ ಮಾಡುವುದು ಕೂಡಾ ಶಿಕ್ಷಾರ್ಹ ಅಪರಾಧವಾಗಿದ್ದು ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ. ಜತೆಗೆ ಇಂತಹ ಘಟನೆಗಳು ಕಣ್ಣಿಗೆ ಬಿದ್ದಾಗ ತಡೆಯುವುದು ಎಲ್ಲರ ಕರ್ತವ್ಯ ಎಂದರು.
ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಸದಸ್ಯೆ ಕೆ.ಬಿ. ರೂಪ ನಾಯಕ್ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸರ್ಕಾರ ಹಲವು ಕಾನೂನುಗಳನ್ನು ರೂಪಿಸಿದೆ. ಆದರೂ ಮಕ್ಕಳನ್ನು ಶಾಲೆಯಿಂದ ಹೊರಗೆ ನೋಡಬೇಕಾದ ಪರಿಸ್ಥಿತಿ ಇರುವುದು ಆಶ್ಚರ್ಯಕರ ಸಂಗತಿ. ಆದ್ದರಿಂದ ಪ್ರತಿಯೊಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.
ದೆಹಲಿ ಸರ್ಕಾರ, ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಂತಲೂ ಅದ್ಭುತವಾಗಿ ರೂಪಿಸಿದೆ. ಸರ್ಕಾರಿ ಶಾಲೆಗಳಿಗೆ ವಿಶೇಷ ಕಟ್ಟಡಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಮೈದಾನ ವ್ಯವಸ್ಥೆ ಮಾಡಿಕೊಟ್ಟಿದೆ. ಅಲ್ಲದೆ ಎಸಿಯನ್ನು ಶಾಲಾ ಕೊಠಡಿಗಳಿಗೆ ಅಳವಡಿಸಿರುವುದರಿಂದ ಯಾರೂ ಸಹ ಖಾಸಗಿ ಶಾಲೆಗಳಿಗೆ ಸೇರಿಸುವುದಿಲ್ಲ. ಆದ್ದರಿಂದ ಎಲ್ಲಾ ಸರ್ಕಾರಿ ಶಾಲೆಗಳು ಅತ್ಯುತ್ತಮ ಶಾಲೆಗಳಾಗಿ ಪರಿವರ್ತನೆ ಆಗಬೇಕಿದೆ ಎಂದರು.
ಮೆದೇಹಳ್ಳಿ ಗ್ರಾಪಂ ಅಧ್ಯಕ್ಷ ಉಜ್ಜನಿಸ್ವಾಮಿ, ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್, ಚಿತ್ರ ಡಾನ್‌ಬಾಸ್ಕೋ ಸಂಸ್ಥೆಯ ಫಾದರ್ ಸೋನಿ ಮ್ಯಾಥ್ಯು, ವೀಣಾ, ಮಂಜುನಾಥ್ ವಿಮುಕ್ತಿ ವಿದ್ಯಾಸಂಸ್ಥೆಯ ಕುಮಾರ್, ಅರಣ್ಯಸಾಗರ್, ಬಿಆರ್‌ಸಿ ಮೀನಾಕ್ಷಿ, ಈಶ್ವರಪ್ಪ, ಗ್ರಾಪಂ ಮಾಜಿ