Advertisement

ಮರುಪಾವತಿ ಆಗದ ಸಾಲ ಆನ್‌ಲೈನ್‌ನಲ್ಲಿ ಮಾರಾಟ?

10:35 AM Jan 22, 2018 | |

ಮುಂಬೈ: ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಮರುಪಾವತಿಯಾಗದ ಸಾಲವನ್ನು ಮಾರಾಟ ಮಾಡಲು ಆನ್‌ಲೈನ್‌ ವ್ಯವಸ್ಥೆಯನ್ನು ಜಾರಿಗೆ ತರುವಂತೆ ರಿಸರ್ವ್‌ ಬ್ಯಾಂಕ್‌ನ ಡೆಪ್ಯುಟಿ ಗವರ್ನರ ವಿರಳ್‌ ಆಚಾರ್ಯ ಸಲಹೆ ನೀಡಿದ್ದಾರೆ. 

Advertisement

ಅಮೆರಿಕದಲ್ಲಿ ಇದೇ ವ್ಯವಸ್ಥೆಯಿದ್ದು, ಬ್ಯಾಂಕ್‌ಗಳಿಗೆ ಹೊರೆಯಾಗಿರುವ ಅನುತ್ಪಾದಕ ಆಸ್ತಿಯನ್ನು ಮಾರಾಟ ಮಾಡಲಾಗುತ್ತಿದೆ. ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಂಬಂಧಿಸಿದ ಎಲ್ಲರೂ ಒಂದಾಗಬೇಕಿದೆ ಎಂದಿದ್ದಾರೆ ಆಚಾರ್ಯ. 

ಸದ್ಯ ಬ್ಯಾಂಕಿಂಗ್‌ ವಲಯ 10 ಲಕ್ಷ ಕೋಟಿ ರೂ. ಮರುಪಾವತಿ ಯಾಗದ ಸಾಲ ಹೊಂದಿದೆ. ಕಳೆದ 6 ತಿಂಗಳಲ್ಲಿ ಆರ್‌ಬಿಐ 40 ಖಾತೆಗಳನ್ನು ಗುರುತಿಸಿದ್ದು, ಇವುಗಳ ಮರುಪಾವತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಎಂದೂ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next