Advertisement

Criminal Law: ಕ್ರಿಮಿನಲ್‌ ಕಾನೂನಿನ ಅರಿವು ಮೂಡಿಸಿ… ವಿವಿಗಳಿಗೆ ಯುಜಿಸಿ ಸೂಚನೆ

08:55 AM Feb 21, 2024 | Team Udayavani |

ನವದೆಹಲಿ: ಹಲವಾರು ಗೊಂದಲಗಳು ಮೂಡಿರುವ ಹಿನ್ನೆಲೆಯಲ್ಲಿ ನೂತನ ಕ್ರಿಮಿನಲ್‌ ಕಾನೂನುಗಳ ಬಗ್ಗೆ ಅರಿವು ಮೂಡಿಸುವಂತೆ ದೇಶದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸೂಚನೆ ನೀಡಿದೆ.

Advertisement

ವೈಯಕ್ತಿಕ ಸ್ವಾಂತಂತ್ರ್ಯಕ್ಕೆ ಬೆದರಿಕೆಯೊಡ್ಡುತ್ತದೆ, “ಪೊಲೀಸ್‌ ರಾಜ್ಯಸ್ಥಾಪಿಸುವ ಗುರಿಯನ್ನು ಹೊಂದಿದೆ, ದೇಶದ್ರೋಹದ ನಿಬಂಧನೆಗಳನ್ನು ಒಳಗೊಂಡಿದೆ, ಪೊಲೀಸ್‌ ಚಿತ್ರಹಿಂಸೆಯನ್ನು ಸಕ್ರಿಯಗೊಳಿಸುತ್ತದೆ ಎಂಬಿತ್ಯಾದಿ ಆರೋಪ, ಗೊಂದಲಗಳು ಹೊಸ ಕ್ರಿಮಿನಲ್‌ ಕಾನೂನು(ಭಾರತೀಯ ನ್ಯಾಯ ಸಂಹಿತಾ)ಗಳಲ್ಲಿದೆ. ಹೀಗಾಗಿ, ಕಾನೂನಿನ ಕುರಿತು ಮೂಡಿರುವ ಮಿಥ್ಯೆಗಳನ್ನು ಮತ್ತು ಸತ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಅದರ ಬಗ್ಗೆಯಿರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಬೇಕು ಎಂದು ವಿಶ್ವವಿದ್ಯಾಲಯಗಳಿಗೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ನಿರ್ದೇಶನ ನೀಡಿದೆ.

2023 ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನ ಮೇಲ್ಮನೆ ಮತ್ತು ಕೆಳಮನೆ ಎರಡರಲ್ಲೂ ನೂತನ ಕ್ರಿಮಿನಲ್‌ ಕಾನೂನು (ಭಾರತೀಯ ನ್ಯಾಯ ಸಂಹಿತೆ)ಗಳನ್ನು ಅಂಗೀಕರಿಸಲಾಗಿತ್ತು. ಕಾನೂನಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಗೆ ಕೂಡ ಸೂಚಿಸಿದ್ದರು.

ಇದನ್ನೂ ಓದಿ: Judge: ಅಕ್ರಮ ಮರಳು ಮಾಫಿಯಾಗೆ ಬಲಿಯಾದ ಅಧಿಕಾರಿಯ ಮಗ ಈಗ‌ ಜಡ್ಜ್!

Advertisement

Udayavani is now on Telegram. Click here to join our channel and stay updated with the latest news.

Next