Advertisement

ಜಾನಪದ ಕಲಾವಿದರ ರಕ್ಷಣೆಗೆ ಪ್ರಾಧಿಕಾರ ರಚಿಸಿ

03:37 PM Nov 16, 2020 | Suhan S |

ರಾಮನಗರ: ಆಧುನಿಕತೆಯ ಭರಾಟೆಯಲ್ಲಿ ಈ ನೆಲದ ಮೂಲ ಸಂಸ್ಕೃತಿ ಜನಪದ ಉಳಿಯಬೇಕು, ಸರ್ಕಾರ ಕಲಾ ವಿದರ ನೆರವಿಗೆ ಬರಲು,ಪ್ರಾಧಿಕಾರ ರಚನೆ ಮಾಡಬೇಕು ಎಂದು ಜನಪದಕಲಾವಿದ ಅಪ್ಪಗೆರೆ ತಿಮ್ಮರಾಜುಆಗ್ರಹಿಸಿದರು.

Advertisement

ನಗರದ ಸಾಹಸ ಕಲಾ ಶಿಕ್ಷಣ ಕೇಂದ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಅಖೀಲ ಕರ್ನಾಟಕ ಕಲಾವಿದರ ಒಕ್ಕೂಟ, ರಾಮನಗರ ಜಿಲ್ಲೆ, ಇವರ ಸಹಯೋಗದಲ್ಲಿ ರಾಮನಗರ ಜಿಲ್ಲಾ ಜಾನಪದ ಸಂಭ್ರಮ-2020 ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಧಿಕಾರ ರಚನೆಯ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಚಿಂತನೆ ನಡೆಸಬೇಕು, ಪ್ರಾಧಿಕಾರದ ಮೂಲಕ ಕಲಾವಿದರಿಗೆ ವಿಶೇಷ ಸೌಲಭ್ಯ ಗಳನ್ನು ಕೊಡಬೇಕು ಎಂದರು.

ಜನಪದ ಕಲೆಗಳು ಪುರಾತನ ಕಾಲದಿಂದಲೂ ಆಚರಣೆಯಲ್ಲಿವೆ. ಆದರೆ, ಇಂತಹ ಕಲೆಗಳಿಗೆ ಸರ್ಕಾರದಿಂದ ಸೂಕ್ತ ಪ್ರೋತ್ಸಾಹ, ಮನ್ನಣೆ ಸಿಗುತ್ತಿಲ್ಲ, ಹೀಗಾಗಿ ಪ್ರಾಧಿಕಾರದ ರಚನೆ ಅಗತ್ಯವಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಮಾತನಾಡಿ, ದೇಶದಲ್ಲಿಯೇ ಮೊದಲ ಬಾರಿಗೆ ತೃತೀಯ ಲಿಂಗಿಯಾದ ತಮಗೆ ಅಕಾಡೆಮಿಯ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸರ್ಕಾರ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಜೀವನ ನಡೆಸುವ ಸಲುವಾಗಿ ಜೋಗತಿ ನೃತ್ಯ ಮಾಡುತ್ತಿದ್ದ ತಾವು ಜನಪದ ಕಲಾವಿದರ ಬದುಕು-ಬವಣೆಯ ಬಗ್ಗೆ ತಿಳಿವಳಿಕೆ ಇದೆ. ತಮಗೆ ಸಿಕ್ಕಿರುವ ಅಧಿಕಾರವನ್ನು ಬಳಸಿಕೊಂಡು ಜನಪದ ಕಲಾವಿದರ ಸೇವೆಯನ್ನು ನಿಷ್ಠೆಯಿಂದ ಮಾಡುವುದಾಗಿ ತಿಳಿಸಿದರು.

Advertisement

ಸಮೀಕ್ಷೆ ಕಾರ್ಯ: ಪ್ರಸಕ್ತ ಸಾಲಿನಲ್ಲಿ ಅಕಾಡೆಮಿ ವತಿಯಿಂದ ಜನಪದ ಕಲಾವಿದರ ಸಮೀಕ್ಷೆ ನಡೆಸುವುದರ ಜೊತೆಗೆ ಕಲಾವಿದರಿಗೆ ಸೂಕ್ತ ಸಮಯಕ್ಕೆ ಮಾಸಾಸನ ಸಿಗಲು ಪ್ರಯ ತ್ನಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಕಲಾವಿದರು ಡೊಳ್ಳುಕುಣಿತ, ಪೂಜಾ ಕುಣಿತ, ವೀರಗಾಸೆ, ಹುಲಿವೇಷ, ಗಾರುಡಿಗೊಂಬೆ ಸೇರಿದಂತೆ 25ಕ್ಕೂ ಹೆಚ್ಚು ವಿವಿಧ ಜಾನಪದ ಕಲೆಗಳ ಪ್ರದರ್ಶನ ನೀಡಿದರು.

ಈ ವೇಳೆ ಕರ್ನಾಟಕ ವಿಶ್ವದ್ಯಾಲ ಯದ ಸಿಂಡಿಕೇಟ್‌ ಸದಸ್ಯ ಹಾಸನ ರಘು, ಅಖೀಲ ಕರ್ನಾಟಕ ಕಲಾವಿದರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next