Advertisement

ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಆಕ್ರೋಶ

12:36 PM Sep 30, 2018 | Team Udayavani |

ಬೀದರ: ಜಿಲ್ಲಾಧಿಕಾರಿಗಳ ಕಚೇರಿ ಎದುರು 52 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣ ಸಮಿತಿ ಸದಸ್ಯರು ಶನಿವಾರ ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

52 ದಿನಗಳಿಂದ ಸತತವಾಗಿ ಮಳೆ, ಚಳಿ, ಗಾಳಿಯನ್ನದೇ, ಸೊಳ್ಳೆಗಳ ಕಾಟ, ಕತ್ತಲನ್ನು ಲೆಕ್ಕಿಸದೇ ನಿರಂತರವಾಗಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಕಾರಂಜಾ ಸಂತ್ರಸ್ತರ ಸಮಸ್ಯೆಯನ್ನು ಹಗುರವಾಗಿ ಪರಿಗಣಿಸುತ್ತಿದೆ. ಸಂತ್ರಸ್ತರು ಅಹಿಂಸಾ ಮಾರ್ಗದಲ್ಲಿ ನಡೆದು ನ್ಯಾಯಯುತ ಬೇಡಿಕೆಗಳಿಗಾಗಿ ಶಾಂತಿಯಿಂದ ಒತ್ತಾಯಿಸುತ್ತಿರುವುದು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ. ಸರ್ಕಾರ ಕೂಡಲೆ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು.

ಸಂತ್ರಸ್ತರು ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್‌ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಇದರಿಂದ ನಗರದಲ್ಲಿ ಕೆಲ ಹೊತ್ತು ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು.

ಶಂಕರರೆಡ್ಡಿ ಚಿಟ್ಟಾ, ಓಂರೆಡ್ಡಿ, ಸಂಗ್ರಾಮರೆಡ್ಡಿ, ಹೇಮಾ ತುಕ್ಕಾರೆಡ್ಡಿ, ಯಂಕಮ್ಮಾ, ವಿಜಯಲಕ್ಷ್ಮಿ ಬೆಳ್ಳೂರ, ಕವಿತಾ ಶ್ರೀಕಾಂತರೆಡ್ಡಿ, ಈಶ್ವರಮ್ಮಾ ಹಿರಗೊಂಡೆರ, ಮಲ್ಲಮ್ಮಾ ಪರಮರೆಡ್ಡಿ, ಅಮೀನಾ ಬೇಗಂ ರಿಯಾಜ, ಜಮುರತ ಬೀ,
ವೆಂಕಟರೆಡ್ಡಿ, ಗೋಪಾಲರೆಡ್ಡಿ, ಸಲೀಮ ಪಾಶಾ, ನಾರಾಯಣರೆಡ್ಡಿ ಮುತ್ತಾರೆಡ್ಡಿ, ಅಯುಬ್‌ ಮಿಯಾ, ಹಣಮಂತರೆಡ್ಡಿ, ನಾಗಣ್ಣಾ ಹುಲೆಪನೋರ, ತುಕ್ಕಾರೆಡ್ಡಿ, ಚಂದ್ರಶೇಖರ ಪಾಟೀಲ, ಜಿಲಾನಿ ಪಟೇಲ, ನಾಗಶೆಟ್ಟೆಪ್ಪಾ ಹಚ್ಚಿ, ಶಿವಶರಣಪ್ಪ ಪಾಟೀಲ, ದತ್ತಾತ್ರೆಯರಾವ್‌ ಕುಲಕರ್ಣಿ, ವೀರಭದ್ರಪ್ಪ ಉಪ್ಪಿನ, ಜಾಕೀರ ಪಟೇಲ, ವೈಜಿನಾಥ ಭತಮುರ್ಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next