Advertisement

ನಟ ಕ್ರೇಜಿಸ್ಟಾರ್‌ ರವಿಚಂದ್ರನ್‌ಗೆ ಮಾತೃವಿಯೋಗ

08:32 PM Feb 28, 2022 | Team Udayavani |

ಬೆಂಗಳೂರು: ಕನ್ನಡದ ಖ್ಯಾತ ನಿರ್ಮಾಪಕ ವೀರಸ್ವಾಮಿ ಅವರ ಧರ್ಮಪತ್ನಿ ಹಾಗೂ ನಟ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ತಾಯಿ ಪಟ್ಟಮ್ಮಾಳ್‌ ವೀರಸ್ವಾಮಿ (83) ಸೋಮವಾರ(ಫೆ.28) ನಿಧನ ಹೊಂದಿದ್ದಾರೆ.

Advertisement

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಇವರು ರವಿಚಂದ್ರನ್‌, ಬಾಲಾಜಿ ಹಾಗೂ ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ರವಿಚಂದ್ರನ್‌ ಅವರ ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಅನೇಕರು ಅವರ ಮನೆಗೆ ಆಗಮಿಸಿ ಸಂತಾಪ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next