Advertisement

Crazy Rich Asian Wedding; ಮದುವೆಗೆ ಬಂದವರಿಗೆ 66,000 ರೂ. ನಗದು ಗಿಫ್ಟ್!

01:07 AM Jun 29, 2024 | Team Udayavani |

ಹೊಸದಿಲ್ಲಿ: ಏಷ್ಯಾ ರಾಷ್ಟ್ರಗಳಲ್ಲಿ ವೈಭವೋಪೇತ ವಿವಾಹಕ್ಕೆ ಅದರದ್ದೇ ಆದ ಮಹತ್ವವಿದೆ. ಇದೇ ರೀತಿಯ ವೈಭವೋಪೇತ ವಿವಾಹವೊಂದು ಇದೀಗ ಬಹಳಷ್ಟು ವೈರಲ್‌ ಆಗಿದೆ. ಮದುವೆಗೆ ಬಂದ ಅತಿಥಿಗಳಿಗೆ 5 ದಿನ ಪಂಚತಾರಾ ಹೊಟೇಲ್‌ನಲ್ಲಿ ವಾಸ್ತವ್ಯ, ಹೊಟೇಲ್‌ನಿಂದ ಸಮಾರಂಭದ ಸ್ಥಳಕ್ಕೆ ಓಡಾಡಲು ರೋಲ್ಸ್‌ ರಾಯ್ಸ ಕಾರಿನ ವ್ಯವಸ್ಥೆ ಮಾಡಲಾಗಿದೆ.

Advertisement

ಅಲ್ಲದೇ ಅತಿಥಿಗಳಿಗೆ ಉಡುಗೊರೆಯಾಗಿ 66,000 ರೂ.ಗಳನ್ನು ಕೆಂಪು ವರ್ಣದ ಕವರ್‌ನಲ್ಲಿಟ್ಟು ಕೊಡಲಾಗಿದೆ. ಅಲ್ಲದೇ ಅತಿಥಿಗಳು ವಾಪಸು ಹೋಗಲು ವಿಮಾನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಟ್ರಾವೆಲ್‌ ಇನ್‌ಫ್ಲುಯೆನ್ಸರ್‌ ಡಾನಾ ಚಾಂಗ್‌ ಚೀನದಲ್ಲಿ ನಡೆದ ಈ ದೊಡ್ಡಮಟ್ಟದ ಮದುವೆಯ ವೀಡಿಯೋ ಹಂಚಿಕೊಂಡಿದ್ದು ಇದು ಎಲ್ಲೆಡೆ ಚರ್ಚೆ ಯಾಗುತ್ತಿದೆ. ವೀಡಿಯೋ ಹಂಚಿಕೊಂಡಿರುವ ಡಾನಾ, “ನಿಜ ಜೀವನದಲ್ಲಿ ಕ್ರೇಜಿ ರಿಚ್‌ ಏಷ್ಯನ್‌ ಮದುವೆ ಹೀಗಿರುತ್ತದೆ’ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next